ಆರೋಗ್ಯವಂತ ಮನುಷ್ಯ ರಕ್ತದಾನ ಮಾಡುವದು ಶರೀರಕ್ಕೆ ಒಳ್ಳೆಯದು

(ಸಂಜೆವಾಣಿ ವಾರ್ತೆ)
ಇಂಡಿ: ಜು.22:ಆರೋಗ್ಯವಂತ ಮನುಷ್ಯ ಆರು ತಿಂಗಳಿಗೆ ಒಂದು ಸಲ ರಕ್ತ ದಾನ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು. ಹೊಸ ರಕ್ತ ಕಣಗಳು ಉತ್ಪಾದನೆ ಆಗುವದರಿಂದ ಶರೀರಕ್ಕೆ ಹೊಸ ಹುಮ್ಮಸ್ಸು ಬರುತ್ತದೆ, ಒಂದು ಯುನಿಟ್ ರಕ್ತದಾನ 3 ಜನರ ಜೀವ ಉಳಿಸುತ್ತದೆ ಎಂದು ಡಾ|| ಪ್ರಶಾಂತ ಧೂಮಗೊಂಡ ಹೇಳಿದರು.
ತಾಲೂಕಿನ ಗೋಳಸಾರದ ಶ್ರೀ ಸದ್ಗುರು ಪುಂಡಲಿಂಗ ಮಹಾಶಿವಯೋಗಿಗಳ ಪುಣ್ಯಾರಾಧನೆ ಕಾರ್ಯಕ್ರಮ ನಿಮಿತ್ಯ ಪ್ರಾಥಮಿಕ ಆರೋಗ್ಯ ಕೇಂದ್ರ ಚಿಕ್ಕಬೇವನೂರ, ಗ್ರಾ.ಪಂ ನಾದ ಕೆಡಿ, ಜಿಲ್ಲಾ ರಕ್ತ ನಿಧಿ ತಂಡ ವಿಜಯಪೂರ ಇವರ ಸಹಯೋಗದಲ್ಲಿ ಹಮ್ಮಿಕೊಂಡ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.
62 ಜನ ರಕ್ತದಾನ ಮಾಡಿದರು. ಇದೇ ವೇಳೆ ಸುಜನ್ ಅಡಿಯೋಲಾಜಿಸ್ಟ ಇವರಿಂದ ಕಿವುಡ ಮತ್ತು ಮೂಕ ಮಕ್ಕಳ ಮತ್ತು ಆಧುನಿಕ ಕಂಪ್ಯೂಟರ ಮೂಲಕ 78 ಮಕ್ಕಳಿಗೆ ಉಚಿತವಾಗಿ ಕಣ್ಣು ಮತ್ತು ಕಿವಿ ತಪಾಸಣೆ ನಡೆಯಿತು.
ಅಭಿನವ ಪುಂಡಲಿಂಗ ಶಿವಯೋಗಿಗಳ ಸಾನಿಧ್ಯ, ಅಧ್ಯಕ್ಷತೆ ಅಭಿನವ ಶಿವಲಿಂಗ ಶ್ರೀಗಳು, ಆನಂತ ಶಾಸ್ತ್ರೀಗಳು, ವೈ.ಬಿ.ಕೊಳುರ ಶಾಸ್ತ್ರೀಗಳು ಪುಂಡಲಿಂಗ ಜೀವನ ಸ್ಮರಣೆ ಮತ್ತು ಜೀವನ ಕುರಿತು, ರವಿ ಕಿರಣ ಕೆರುಟಗಿ,ರುದ್ರಗೌಡ ಬಿರಾದಾರ ಮಾತನಾಡಿದರು. .
ಆರೋಗ್ಯ ಇಲಾಖೆಯ ಎಸ್.ಎಚ್.ಅತನೂರ, ವಾಯ್.ಎಂ. ಪೂಜಾರ, ಮಹಾಂತೇಶ, ಎಸ್.ಎ.ಶೇಖ, ಗ್ರಾ.ಪಂ ಸದಸ್ಯ ಸಿದ್ದರಾಯ ಐರೋಡಗಿ, ಪೈಗಂಬರ ದೇಸಾಯಿ, ಭೂತಾಳಿ ತಾವರಖೇಡ, ಆರ್.ಕೆ.ಪಾಟಿಲ, ತಾ.ಪಂ ಮಾಜಿ ಸದಸ್ಯ ಸಿದ್ದರಾಮ ತಳವಾರ, ಮಲ್ಲಿಕಾರ್ಜುನ ಬಂಡಿ, ಉಮೇಶ ಬಡಿಗೇರ, ನಿಂಗಪ್ಪ ಐರೋಡಗಿ ಮತ್ತಿತರಿದ್ದರು.