ಆರೋಗ್ಯವಂತ ಮಗು ದೇಶದ ಆಸ್ತಿ

ಚಿತ್ರದುರ್ಗ ಸೆ.3; ತಾಲ್ಲೂಕಿನ ಪಂಡರಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಪೋಷಣ್ ಮಾಸಾಚರಣೆ ಪೌಷ್ಟಿಕಾಹಾರ ಪ್ರಾತ್ಯಕ್ಷಿಕೆ ಮಾಹಿತಿ ಶಿಕ್ಷಣ ಸಂವಾಹನ ಕಾರ್ಯಕ್ರಮ ಉದ್ದೇಶಿಸಿ  ಗ್ರಾ.ಪಂ.ಸದಸ್ಯೆ ಲಕ್ಷ್ಮಿ ದೇವಿ ಮಾತನಾಡುತ್ತಾ ಆರೋಗ್ಯವಂತ ಮಗು ದೇಶದ ಆಸ್ತಿ ಗರ್ಭಿಣಿಯರು ನಮ್ಮ ಸುತ್ತಮುತ್ತ ಬೆಳೆದ ತರಕಾರಿ ಹಣ್ಣುಗಳನ್ನು ಸೇವನೆ ಮಾಡಿ ಆರೋಗ್ಯ ವೃದ್ಧಿಸಿಕೊಳ್ಳಿ ಎಂದರು, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮಾತನಾಡುತ್ತಾ ಪೋಷಣ್ ಮಾಸಾಚರಣೆಯ ಉದ್ದೇಶ ತಿಳಿಸುತ್ತ ಹಸಿರು ಸೊಪ್ಪುಗಳು ಬಳಕೆಯಿಂದ ಹೇರಳವಾಗಿ ದೇಹಕ್ಕೆ ಅಗತ್ಯವಿರುವ ಬಿ ಅನ್ನಾಂಗವನ್ನು ಖನಿಜಾಂಶಗಳನ್ನು ನೀಡುತ್ತದೆ, ಕಾಳು ಬೇಳೆಗಳು ದೇಹದ ಬೆಳವಣಿಗೆಗೆ ಅಗತ್ಯವಿರುವ ಪ್ರೋಟೀನ್ ಅಂಶಗಳನ್ನು ನೀಡುತ್ತವೆ ಆಹಾರದ ಘಮಲನ್ನು ಅರ್ಥ ಮಾಡಿಕೊಂಡು ಆಹಾರ ಆಸ್ವಾದಿಸಿ ಎಂದರು, ಜಿಲ್ಲಾ ಆಸ್ಪತ್ರೆಯಲ್ಲಿ ಪೌಷ್ಟಿಕ ಪುನಶ್ಚೇತನ ಕೇಂದ್ರ ಸ್ಥಾಪಿತವಾಗಿದೆ ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆಯನ್ನು ಗುಣಪಡಿಸಲು ತೆರೆಯಲಾಗಿದೆ ಇಲ್ಲಿ ವೈದ್ಯಕೀಯ ತೊಡಕುಗಳ ನಿವಾರಣೆ, ಚಿಕಿತ್ಸೆ ಮಕ್ಕಳ ಪೌಷ್ಠಿಕತೆಯ ಪುನಶ್ಚೇತನಕ್ಕೆ ಆದ್ಯತೆ ನೀಡಲಾಗುತ್ತದೆ,  ಬಿ.ಮೂಗಪ್ಪ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಾತನಾಡುತ್ತಾ ಮಗು ಹುಟ್ಟಿದ ತಕ್ಷಣ ಎದೆಹಾಲನ್ನು ಕುಡಿಸಿ, 6 ತಿಂಗಳ ತನಕ ಎದೆಹಾಲು ಬಿಟ್ಟು ಬೇರೆ ಏನನ್ನು ನೀಡಬೇಡಿ ಎಲ್ಲಾ ಮಕ್ಕಳಿಗೂ 1 ವರ್ಷ ತುಂಬುವುದರೋಳಗೆ 11 ಮಾರಕ ರೋಗಗಳ ವಿರುದ್ಧ ನೀಡುವ ಎಲ್ಲಾ ಲಸಿಕೆಗಳನ್ನು ಕೊಡಿಸಿ ಎಂದರು, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಾರುತಿಪ್ರಸಾದ್ ಮಾತನಾಡುತ್ತಾ ಕೋವಿಡ್ ಲಸಿಕೆ ಕೊರತೆ ಇರುವುದಿಲ್ಲ ಎಲ್ಲಾ ಗರ್ಭಿಣಿಯರು ಹಾಲುಣಿಸುವ ತಾಯಂದಿರು ತಪ್ಪದೇ ಲಸಿಕೆ ಪಡೆದುಕೊಳ್ಳಿ ಯಾರಿಗಾದರೂ ಕ್ಷಯರೋಗದ ಲಕ್ಷಣಗಳು ಕಂಡು ಬಂದರೆ ಕೂಡಲೆ ತಪಾಸಣೆ ಮಾಡಿಸಿಕೊಳ್ಳಿ ಎಂದರು, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ಶೋಭಾ ನಾವಳ್ಳಿ ಮಾತನಾಡುತ್ತಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನೆಗಳಾದ ಮಾತೃವಂದನಾ, ಭಾಗ್ಯಲಕ್ಷ್ಮಿ ಯೋಜನೆ ಬಗ್ಗೆ ತಿಳಿಸಿ ಫಲಾನುಭವಿಗಳಿಗೆ ಮನೆಗೆ ಆಹಾರ ವಿತರಣೆ ಮಾಡಿಸಿದರು ಗ್ರಾ.ಪಂ.ಸದಸ್ಯರಾದ ಸವಿತಾಬಾಯಿ, ಲಕ್ಷ್ಮೀದೇವಿ ಮಾರುತಿ ಗ್ರಾಮದ ಹಿರಿಯಾರಾದ ಶೇಕರಪ್ಪ ಗರ್ಭಿಣಿಯರು ಬಾಣಂತಿಯರು ಆಶಾ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.