ಆರೋಗ್ಯವಂತ ಮಗುವಿಗೆ ತಾಯಿ ಮೊಲೆಹಾಲು ಸಂಜೀವಿನಿ : ಡಾ. ಮೋರೆ

ಭಾಲ್ಕಿ: ಆ.20:ತಾಯಿಯ ಮೊಲೆಹಾಲು ಆರೋಗ್ಯವಂತ ಮಗುವಿಗೆ ಸಂಜೀವಿನಿಯಾಗಿವೆ ಎಂದು ಬಿಜೆಪಿ ಮುಖಂಡ ಹಾಗು ಮಕ್ಕಳ ತಜ್ಞ ಡಾ| ದಿನಕರ ಮೋರೆ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ತಮ್ಮ ಹುಟ್ಟುಹಬ್ಬದ ನಿಮಿತ್ಯ ಬಡರೋಗಿಗಳಿಗೆ ಹಣ್ಣು ವಿತರಿಸಿ ಅವರು ಮಾತನಾಡಿದರು. ತಾಯಂದಿರು ತಮ್ಮ ಸೌಂದರ್ಯ ಹಾಳಾಗುತ್ತದೆಂದು ಮಕ್ಕಳಿಗೆ ಮೊಲೆಹಾಲು ಕುಡಿಸುವುದಿಲ್ಲ. ಇದು ತಪ್ಪು, ಮೊಲೆ ಹಾಲು ಕುಡಿಸುವುದರಿಂದ ತಾಯಿಯ ಆರೋಗ್ಯವೂ ಉತ್ತಮವಾಗಿರುತ್ತದೆ ಮತ್ತು ಮಗು ಆರೋಗ್ಯವಂತವಾಗಿ ಬೆಳೆಯಲು ಸಹಾಯವಾಗುತ್ತದೆ. ಹೀಗಾಗಿ ಮಗು 3 ವರ್ಷವಾಗುವರೆಗೆ ತಾಯಿ ಮಕ್ಕಳಿಗೆ ತಮ್ಮ ಮೊಲೆ ಹಾಲೇ ನೀಡಬೇಕು ಎಂದು ತಿಳಿಹೇಳಿದರು. ನಂತರ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಚಿಕ್ಕ ಮಕ್ಕಳ ಆರೋಗ್ಯ ತಪಾಸಣೆ ನಡೆಸಿದರು.

ಈ ಸಂದರ್ಭದಲ್ಲಿ ಡಾ| ರವಿರಾಜ ದಿನಕರಮೋರೆ, ಶಿಕ್ಷಕ ತುಕಾರಾಮ ಮೋರೆ, ಡಾ| ಅಬ್ದುಲ ಖಾದರ, ದತ್ತಾತ್ರಿ, ಕಿರಣಕುಮಾರ, ಓಂಪ್ರಕಾಶ ಮೋರೆ, ಪ್ರದೀಪ ಪಾಟೀಲ ಉಪಸ್ಥಿತರಿದ್ದರು.