ಆರೋಗ್ಯವಂತರಾಗಿ ಸದೃಢರಾಗಿ ಬಾಳಬೇಕಾದರೆ ಉತ್ತಮ ಪರಿಸರದ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಆದ್ಯಕರ್ತವ್ಯ:ಕೊಳಮಲಿ

ವಿಜಯಪುರ, ಜೂ.6-ನಾವೆಲ್ಲರೂ ಆರೋಗ್ಯವಂತರಾಗಿ ಸದೃಢರಾಗಿ ಬಾಳಬೇಕಾದರೆ ಉತ್ತಮ ಪರಿಸರದ ಅವಶ್ಯಕತೆ ಇರುವುದರಿಂದ ಅದರ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಆದ್ಯಕರ್ತವ್ಯವಾಗಬೇಕು ಎಂದು ಕರ್ನಾಟಕ ಪರಿಸರ ವೇದಿಕೆಯ ಕೋಶಾಧ್ಯಕ್ಷ ಸಾಹಿತಿ ಪ್ರೊ.ಎಚ್.ಕೊಳಮಲಿ ಹೇಳಿದರು.
ನಗರದ ಸಾನ್ವಿ ಗ್ರಾಮೀಣಾಭಿವೃದ್ಧಿ ಹಾಗೂ ವಿವಿದ್ದೋದ್ದೇಶಗಳ ಮಹಿಳಾ ಸೇವಾ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರವ ವಿನ್‍ಸಮ್‍ಇನ್ ಫೋಟೆಕ್ ಕಂಪ್ಯೂಟರ್ ಸೆಂಟರನಲ್ಲಿ ಹಮ್ಮಿಕೊಂಡ ಪರಿಸರ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ವೈಜ್ಞಾನಿಕವಾಗಿ ಮುಂದುವರೆದ ಈ ಜಗತ್ತಿನಲ್ಲಿ ತಮ್ಮ ಸ್ವಾರ್ಥಗೋಸ್ಕರ ಪರಿಸರವನ್ನು ನಾಶ ಮಾಡಬಾರದು, ಉತ್ತಮವಾದ ಪರಿಸರÀವಿದ್ದರೆ ಮಾತ್ರ ನಾವೆಲ್ಲರೂ ಬದುಕಲು ಸಾಧ್ಯ, ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಶುಚಿಯಾಗಿಡುವದರÀ ಜೊತೆಗೆ ಗಿಡಮರಗಳನ್ನು ಹಚ್ಚಿ ಅವುಗಳನ್ನು ಬೆಳೆಸುವ ಮನೋಭಾವನ್ನು ನಾವೆಲ್ಲರೂ ಹೊಂದಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮೀಬಾಯಿ ಕುಗನೂರ ಅವರು ಮಾತನಾಡಿ ಜನಸಂಖ್ಯೆ ಮತ್ತು ಜಾಗತಿಕ ತಾಪಮಾನದ ಏರಿಕೆಯಿಂದ ಹೊರಹೊಮ್ಮುವ ಪರಿಸರÀ ಸಮಸ್ಯೆಗಳ ಸಂರಕ್ಷಣೆಗಾಗಿ ಮತ್ತುಕ್ರಮಕ್ಕಾಗಿ ಜಾಗೃತಿ ಮೂಡಿಸುವಂತಾಗಬೇಕು. ವಾಯುಮಾಲಿನ್ಯ, ಜಲಮಾಲಿನ್ಯ, ಶಬ್ದಮಾಲಿನ್ಯಗಳಿಂದ ಪರಿಸರ ಹಾಳಾಗುತ್ತಿದೆ, ಇಂತಹ ಮಾಲಿನ್ಯಗಳನ್ನು ತಡೆಗಟ್ಟಬೇಕು, ಪರಿಸರವನ್ನು ಹಾಳಾಗಲು ಬಿಡಬಾರದು. ಪ್ರತಿಯೊಬ್ಬರೂ ಒಂದೊಂದು ಗಿಡ-ಮರಗಳನ್ನು ಹಚ್ಚಿ ಅವುಗಳನ್ನು ಪೋಷಿಸಬೇಕು. ಕೇವಲ ಜೂನ-5ಕ್ಕೆ ಮಾತ್ರ ಪರಿಸರ ದಿನಾಚರಣೆÉ ಆಚರಿಸುವುದು ಸೀಮಿತವಾಗಬಾರದು, ನಿರಂತರವಾಗಿ ಪರಿಸರರಕ್ಷಣೆ ಮಾಡುವ ಮಹತ್ತರವಾದ ಕೆಲಸವನ್ನು ಇಂದಿನ ಯುವಕರು ಮಾಡಬೇಕು ಎಂದು ಹೇಳಿದರು.
ಸಂಸ್ಥೆಯ ನಿರ್ದೇಶಕ ಸಂಜಯಕುಮಾರ ಕುಕನೂರ ಮಾತನಾಡಿ ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ನೆಲೆಗೊಳ್ಳಬೇಕಾದರೆ ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು ಎಂದು ಹೇಳಿದರು. ಸಂಸ್ಥೆಯ ಎಲ್ಲಾ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.