ಆರೋಗ್ಯವಂತರಾಗಿರಲು ಯೋಗ, ಧ್ಯಾನ, ವಾಕಿಂಗ್, ನಿಸರ್ಗದಲ್ಲಿ ಸಿಗುವ ಹಣ್ಣು ಹಂಪಲ ಬಳಸಬೇಕುಃ ಹೊಸಮನಿ

ವಿಜಯಪುರ, ಜ.13-ಹಿರಿಯರು ಔಷಧಗಳ ಅಭ್ಯಾಸ ಬೆಳೆಸಿಕೊಳ್ಳದೆ ಯೋಗ, ಧ್ಯಾನ, ವಾಕಿಂಗ್, ನಿಸರ್ಗದಲ್ಲಿ ಸಿಗುವ ಹಣ್ಣು ಹಂಪಲ ಬಳಸಿಕೊಂಡು ಆರೋಗ್ಯವಂತರಾಗಿಬೇಕು ಎಂದು ಡಾ. ಅಶ್ವಿನಿ ಹೊಸಮನಿ ಹೇಳಿದರು.
ನಗರದ ಎನ್.ಜಿ.ಓ. ಹಾಲ್‍ನಲ್ಲ ಜರುಗಿದ ಮಾಸಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ಅಲ್ಲದೇ ನಿಸರ್ಗದಲ್ಲಿಯೇ ಎಲ್ಲವು ಅಡಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಪಿ. ಬಿರಾದಾರ (ಕಡ್ಲೇವಾಡ) ಅವರು ಬೆಳಗಿನ ವಾಕಿಂಗ್, ವ್ಯಾಯಾಮ್, ಯೋಗಾಸನ ಮತ್ತು ಆಧ್ಯಾತ್ಮಿಕತೆ ಹಾಗೂ ಮನೆ ಮಂದಿಯ ಜೊತೆ ಸಹಬಾಳ್ವೆ ಇವೆಲ್ಲಾ ಮಾಡಿಕೊಂಡು ಆರೋಗ್ಯವಂತ ಜೀವನವನ್ನು ನಡೆಸಬೇಕು. ಮತ್ತು ಎಲ್ಲ ಸದಸ್ಯರ ಸಹಕಾರ ಸಹಯೋಗದಿಂದ ಸಂಘಗಳು ಅಭಿವೃದ್ಧಿ ಹೊಂದುತ್ತವೆ ಎಂದು ಹೇಳಿದರು.
ಶ್ರೀಮತಿ ಎಸ್.ಬಿ. ಭಜಂತ್ರಿ ಪ್ರಾರ್ಥಿಸಿದರು. ಡಿ.ಬಿ. ಹಿರೇಕುರುಬರ ಖಜಾಂಚಿ ಸ್ವಾಗತಿಸಿದರು. ಎಮ್.ಎನ್. ಚಪ್ಪರಬಂದ ಉಪಾಧ್ಯಕ್ಷರು ವಂದಿಸಿದರು. ಭರತೇಶ ಕಲಗೊಂಡ ಪ್ರಧಾನ ಕಾರ್ಯದರ್ಶಿ ಕಾರ್ಯಕ್ರಮ ನಿರೂಪಿಸಿದರು.
ಸಭೆಯಲ್ಲಿ ವಿ.ಆರ್. ನರಳೆ, ವಿ.ಎಸ್. ಸಾವಳಗಿಮಠ, ಡಿ.ಟಿ. ಆಯತವಾಡ, ಎಮ್.ಜಿ. ಮೋಟಗಿ, ಅರವಿಂದ ಡೋಣೂರ, ಬಿ.ಎಮ್. ಮುಂಬೈ, ಕೆ.ಎಚ್. ಅರಬ, ಎಮ್.ಎ. ಭಕ್ಷಿ, ಎಮ್.ಎನ್. ನಿಂಬಾಳ, ಎನ್.ಎಸ್. ರೆಡ್ಡಿ, ಎಮ್.ಜಿ. ಬದಾಮಿ, ಎ.ಟಿ. ತಂಗಾ, ಎಸ್.ಎ. ಹೂಗಾರ, ಕೆ.ಜಿ. ಶಿರಹಟ್ಟಿ, ಎಸ್.ಎಮ್. ಚಿನಕಾಳಿ, ಶ್ರೀಮತಿ ವಿ.ಎಸ್. ಹಂದಿಗೋಳ ಮುಂತಾದವರು ಹಾಜರಿದ್ದರು.