ಆರೋಗ್ಯವಂತರಾಗಲು ಯೋಗ ಅಗತ್ಯ; ಪ್ರೊ.ಚನ್ನಪ್ಪ ಪಲ್ಲಾಗಟ್ಟೆ

ದಾವಣಗೆರೆ.ಜೂ.೨೨ ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಾಗಿರಲು ಮನುಷ್ಯನಿಗೆ ಪ್ರತಿನಿತ್ಯ ಯೋಗಭ್ಯಾಸದ ಅನಿವಾರ್ಯತೆ ಇದೆ ಎಂದು ಭಾರತ ಸೇವಾದಳ ಜಿಲ್ಲಾ ಅಧ್ಯಕ್ಷರಾದ ಪ್ರೊ. ಚನ್ನಪ್ಪ ಹೆಚ್ ಪಲ್ಲಾಗಟ್ಟೆ ಅಭಿಪ್ರಾಯಪಟ್ಟರು.   ಭಾರತ ಸೇವಾದಳ ಭವನದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆ ಮತ್ತು ಪರಿಸರ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಪತಂಜಲಿ ಮಹರ್ಷಿಗಳು ನೀಡಿದ ಸೂತ್ರದ ಆಧಾರದ ಮೇಲೆ ಯೋಗ ಶಿಕ್ಷಣವು ಜಾರಿಯಲ್ಲಿದ್ದು,ಇದು ಭಾರತದ ಸನಾತನ ಸಂಸ್ಕೃತಿ ಯಾಗಿ  ವಿಶ್ವಕ್ಕೆ ವಿಶೇಷವಾದ ಭಾರತದ ಕೊಡುಗೆಯಾಗಿದೆ ಎಂದರು.
ಜಿಲ್ಲಾ ಪರಿಸರ ಅಧಿಕಾರಿ ಡಾ. ಎಚ್.  ಲಕ್ಷ್ಮಿಕಾಂತ್   ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪರಿಸರ ಮಾಲಿನ್ಯ, ಪರಿಸರ ಸಂರಕ್ಷಣೆಯ, ತ್ಯಾಜ್ಯವನ್ನು ವಿಲೇವಾರಿ ಮಾಡುವ ಬಗ್ಗೆ,   ಗಿಡಗಳನ್ನು ಬೆಳೆಸುವ ಬಗ್ಗೆ ಮಾತನಾಡಿದರು.ಪ್ರೊ. ಎನ್. ಕೆ. ಗೌಡ, ಮಾಜಿ ಕುಲಸಚಿವರು ಮಾತನಾಡಿ  ಅಷ್ಟಾಂಗ ಯೋಗಗಳ ಮಹತ್ವವನ್ನು ತಿಳಿಸಿದರು.  ಯೋಗ ಒಂದು ದಿನಕ್ಕೆ ಸೀಮಿತವಾಗದೆ  ನಿರಂತರವಾಗಿ ಜೀವನದಲ್ಲಿ  ಅನುಷ್ಠಾನವಾಗಬೇಕೆಂದು ತಿಳಿಸಿದರು.  ಕಾರ್ಯಕ್ರಮದಲ್ಲಿ ಶ್ರೀಮತಿ ಉಮಾ ವೀರಭದ್ರಪ್ಪ ಉಪಸ್ಥಿತರಿದ್ದರು. ವಲಯ ಸಂಘಟಕ ಎಂ ಅಣ್ಣಪ್ಪನವರು ಕಾರ್ಯಕ್ರಮವನ್ನು ನಿರೂಪಿಸಿದರು. ಜಿಲ್ಲಾ ಕಾರ್ಯದರ್ಶಿ ಅರವಿಂದ್ ಜೆ ಕೂಲಂಬಿರವರು ಸ್ವಾಗತಿಸಿದರು, ಕೆ. ಪಿ. ಶ್ರೀಕಾಂತ್ ವಂದಿಸಿದರು. ಸೇವಾದಲ ಭವನದ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.