ಆರೋಗ್ಯಪೂರ್ಣ ಸಮಾಜಕ್ಕೆ ವೈದ್ಯರ ಸೇವೆ ಅಗತ್ಯ

ಹುಮನಾಬಾದ:ಜು.9: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ವೈದ್ಯರ ಹಾಗೂ ಪತ್ರಿಕ ದಿನಾಚರಣೆ ಕಾರ್ಯಕ್ರಮ

ಉದ್ಘಾಟಿಸಿ ಡಾ.ಮಹಾದೇವ ಸ್ವಾಮಿ. ಮಾತನಾಡಿ
ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿರುವ ಈ ಒಂದು ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿದ್ದು ಸಮಾಜದಲ್ಲಿ ಇರುವ ಅನೇಕ ಸತ್ಯ ಹಾಗು ನಿಖರವಾದ ಮಾಹಿತಿಗಳನ್ನ ಜನರಿಗೆ ಮುಟ್ಟಿಸುವ ಅತ್ಯಂತ ಪ್ರಮಾಣಿಕವಾಗಿ ಕಾರ್ಯನಿರ್ವಹಿಸುವ ವರ್ಗ ಯಾವುದಾದರು ಆಗಿದ್ದರೆ ಅದು ಮಾಧ್ಯಮ ವರ್ಗ ಎಂದು ಹೇಳಿದರು.

ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯ ಅಧಿಕಾರಿ ನಾಗನಾಥ ಹುಲಸೂರೆ ಮಾತನಾಡಿ , ಆರೋಗ್ಯ ಪೂರ್ಣ ಸಮಾಜಕ್ಕೆ ವೈದ್ಯರ ಸೇವೆ ಅಗತ್ಯ. ಪತ್ರಿಕೆ ಹಾಗೂ ವೈದ್ಯರು ಸಮಾಜಕ್ಕೆ ಬೆಕಾದ ಎರಡೂ ಮುಖ್ಯ ಜವಾಬ್ದಾರಿಯುತ ವರ್ಗ ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅಥಿತಿಗಳಾದ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷರಾದ ದುರ್ಯೋಧನ ಹೂಗಾರ ಮಾತನಾಡಿ ಅತ್ಯಂತ ಪ್ರಮಾಣಿಕವಾಗಿ ಸುದ್ದಿಗಳು ಜನರಿಗೆ ಮುಟ್ಡಿಸುವ ಕಾರ್ಯ ನಮ್ಮ ತಾಲೂಕಿನ ಎಲ್ಲಾ ಪತ್ರಕರ್ತ ಮಿತ್ರರು ಮಾಡುತ್ತಿದ್ದಾರೆ ಜಾಗತಿಕ ಕಾಲಮಾನದಲ್ಲಿ ಅತ್ಯಂತ ತಿರ್ವಗತಿಗಳಲ್ಲಿ ಸುದ್ದಿಗಳು ಪ್ರಚಾರ ವಾಗುತ್ತಿದ್ದರು ಪತ್ರಿಕೆಗೆ ಎಂದು ಬರ ಬಂದಿಲ್ಲ ಹೀಗಾಗಿ ಪ್ರತಿಯೋಬ್ಬರು ಪತ್ರಿಕೆ ಓದಿ ಯುವ ಪೀಳಿಗೆಗೆ ಪತ್ರಿಕೆ ಬಗ್ಗೆ ಮಾಹಿತಿ ನಿಡಿ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ಧಲಿಂಗ ವಿ ನಿರ್ಣಾ ಮಾತನಾಡಿ. ಸಮಾಜಕ್ಕೆ ವೈದ್ಯರು ಹಾಗು ಪತ್ರಕರ್ತರು ತುಂಬಾ ಮುಖ್ಯವಾದವರು ಹೀಗಾಗಿ ಪಟ್ಟಣದ ಕೆಲವು ಹಿರಿಯ ವೈದ್ಯರಿಗೆ ಗೌರವಿಸುವದು ನಮ್ಮ ಜವಾಬ್ದಾರಿ ಎಂದು ಭಾವಿಸಿ ಕೆಲವು ವೈದ್ಯರಿಗೆ ಸನ್ಮಾನಿಸಲಾಯಿತು ಎಂದು ಹೆಳ್ಳುತ್ತ ಪರಿಷತ್ತಿನ ಪ್ರತಿಯೊಂದು ಕಾರ್ಯಕ್ರಮ ಯಾವುದೇ ಅಡೆ ತಡೆ ಇಲ್ಲದೆ ಎಂತಹ ಪರಿಸ್ಥಿತಿಯಲ್ಲೂ ನಮ್ಮ ಕಾರ್ಯಕ್ರಮದ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟಿಸುತ್ತಿರುವ ಎಲ್ಲಾ ನಮ್ಮ ತಾಲ್ಲೂಕಿನ ಪತ್ರಿಕಾ ಮಿತ್ರರಿಗೆ ಅಭಿನಂದನೆಗಳು ಸಲ್ಲಿಸಿದರು ಹೀಗೆ ನಿಮ್ಮೆಲರ ಸಹಕಾರ ಸಹಾಯ ನಿರಂತರ ಇರಲಿ ನಾವು ಇನ್ನು ಹೆಚ್ಚು ಹಚ್ಚು ಕಾರ್ಯಕ್ರಮ ಪರಿಷತ್ತಿನ ವತಿಯಿಂದ ಮಾಡುತ್ತೆವೆ ಎಂದು ನುಡಿದರು,

ಇದೇ ವೇಳೆ .ಸಚ್ಚಿದಾನಂದ ಮಠಪತಿ, ವೀರಣ್ಣ ಕುಂಬಾರ , ಮಡೆಪ್ಪಾ ಕುಂಬಾರ, ಮಹಾದೇವಪ್ಪ ಉಪ್ಪಿನ, ಭುವನೇಶ್ವರ , ಸದಾಶಿವಯ್ಯ ಹಿರೇಮಠ, ವೀರಣ್ಣ ಈಶ್ವರ ತಡೋಳ, ಅಮೀತ, ರಮೇಶ ರೆಡ್ಡಿ,ಜೈವಂತ, ವಿರಂತ ರೆಡ್ಡಿ ಜಂಪಾ ,ಐ ಎಸ್ ಶಕಿಲ ,ಅಶೋಕ ಹಿರೇಮಠ, ಗೀತಾ ರೆಡ್ಡಿ, ಅನುರಾಧ ,ಶಶಿಧರ ಪಾಟೀಲ, ವಿಜಯಕುಮಾರ ಚಟ್ಟಿ,ಶಿವಕುಮಾರ ಕಂಪ್ಲಿ,ರವಿ ಹುಲಗುತ್ತಿ , ಸೇರಿದಂತೆ ಉಪಸ್ಥಿತರಿದ್ದರು.