ಆರೋಗ್ಯದ ಸ್ವಾಸ್ಥ್ಯ ಮತ್ತು ಶಾಂತಿಯ ಮನಸ್ಸಿಗಾಗಿ ಯೋಗ

ಇಂಡಿ:ಜೂ.23:ಯೋಗ ಕ್ಷೇತ್ರವು ಇಂದು ವಿಸ್ತಾರವಾಗಿ ಬೆಳೆಯುತ್ತಿದೆ. ಯೋಗದ ಮೂಲಕ ವಿಶ್ವದ ಭೂಪಟದಲ್ಲಿ ಭಾರತದ ಹೆಗ್ಗುರುತು ಮೂಡಿಸಿದೆ.ಆರೋಗ್ಯದ ಸ್ವಾಸ್ಥ್ಯ ಮತ್ತು ಶಾಂತಿಯ ಮನಸ್ಸಿಗಾಗಿ ಎಲ್ಲರೂ ಯೋಗಾಸನ ಮಾಡಬೇಕು ಎಂದು ಯೋಗಗುರು ಬಿ.ಎಸ್.ಪಾಟೀಲ ಹೇಳಿದರು.

ಪಟ್ಟಣದ ಶ್ರೀ ಹಡಪದ ಅಪ್ಪಣ್ಣ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ಮತ್ತು ಶ್ರೀ ಶಾಂತೇಶ್ವರ ಪ್ರೌಢಶಾಲೆಯಲ್ಲಿ 1989-90 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಕಲಿತ ಗೆಳೆಯರ ಬಳಗ ಹಾಗೂ ಸ್ಕೌಟ್ಸ ಮತ್ತು ಗೈಡ್ಸ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಯೋಗದಿನಾಚರಣೆ ಮತ್ತು ಯೋಗ ಮತ್ತು ಆಧ್ಯಾತ್ಮ ಜ್ಞಾನದೀಪಬೆಳಗು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಮಾನವೀಯತೆಗಾಗಿ ಯೋಗ ಎಂಬ ಧ್ಯೇಯದೊಂದಿಗೆ ಯೋಗದಿನ ಆಚರಿಸುತ್ತಿದ್ದು ಯೋಗದಿಂದ ಶಾಂತಿ,ಸಹಬಾಳ್ವೆ ದೊರೆಯುತ್ತದೆ ಎಂದರು.

ಬಿಜೆಪಿ ಮುಖಂಡ ಅನೀಲ ಜಮಾದಾರ ಮಾತನಾಡಿ ನಮ್ಮ ಋಷಿಮುನಿಗಳು,ಯೋಗವನ್ನು ನಮಗೆ ತಿಳಿಸಿಕೊಟ್ಟಿರುವದಕ್ಕೆ ಭಾರತೀಯರಾದ ನಾವು ಅಭಿಮಾನ ಸಲ್ಲಿಸಬೇಕು. ಅಲ್ಲದೆ ಯೋಗವನ್ನು ಮುನ್ನಡೆಸಿಕೊಂಡು ಹೋಗಬೇಕಾಗಿದೆ ಎಂದರು.

ಸ್ಕೌಟ ಮತ್ತು ಗೈಡ್ಸ ಸಂಸ್ಥೆಯ ಷಹಾಜಿ ಪಾಟೀಲ,ವಾಯ್.ಜಿ.ಬಿರಾದಾರ ಮಾತನಾಡಿದರು.

ವೇದಿಕೆಯ ಮೇಲೆ ನ್ಯಾಯವಾದಿ ಮತ್ತು ಗೆಳೆಯರ ಬಳಗದ ಕಾರ್ಯದರ್ಶಿ ರಮೇಶ ಕುಲಕರ್ಣಿ, ಹಡಪದ ಅಪ್ಪಣ್ಣ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಿದ್ದು ನಾವಿ ಇದ್ದರು.

ಸಮಾರಂಭದಲ್ಲಿ ಶಸಾಪ ಅಧ್ಯಕ್ಷ ಆರ್.ವಿ.ಪಾಟೀಲ,ಮುಖ್ಯ ಗುರುಗಳಾದ ಎ.ಎಸ್.ಬಿರಾದಾರ,ಎಸ್.ಎಸ್.ಅವಟಿ,ರಾಜು ಮುರಝಾವರಮಠ,ಸುರೇಶ ಅವರಾದಿ,ಶಾಂತು ಧನಶೆಟ್ಟಿ,ದಶರಥ ಕೋರಿ,ರವಿ ವಂದಾಲ,ಶಿವಾನಂದ ಚಿಕ್ಕಬೇವನೂರ,ಕೆ.ಜಿ.ನಾಟಿಕಾರ ಮತ್ತಿತರಿದ್ದರು.