
ಕೋಲಾರ,ನ.೫- ನಾವು ಭಾರತೀಯ ಜೀವನ ಶೈಲಿಯನ್ನು ಮರೆತು , ವಿದೇಶಿ ಜೀವನ ಶೈಲಿಯನ್ನು ಪಾಲಿಸುತ್ತಿರುವುದರಿಂದ ನಮ್ಮ ಆರೋಗ್ಯದ ಮೇಲೆ ಹೆಚ್ಚು ಪರಿಣಾಮಕಾರಿ ಬೀರುತ್ತಿದೆ ಎಂದು ಜೀವ ಸಂಜೀವನಿ ನಾಚ್ಯರಲ್ ಲೈಫ್‌ನ ಸಂಸ್ಥಾಪಕರಾದ ಡಾ ,ರಾಜಶೇಖರ್ ತಿಳಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ವತಿಯಿಂದ ನಗರದ ಸ್ಕೌಟ್ ಭವನದಲ್ಲಿ ಅಂಗನವಾಡಿ ಶಿಕ್ಷಕಿಯರಿಗೆ ಆಯೋಜನೆ ಮಾಡಿದ ಬನ್ನಿಸ್ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಾ ಇಂದಿನ ಮಕ್ಕಳ ಭವಿಷ್ಯದ ಜೀವನ ಉತ್ತಮವಾಗುವಲ್ಲಿ ಪೋಷಕರ ಹಾಗೂ ಶಿಕ್ಷಕರ ಜೀವನ ಶೈಲಿ ಮಹತ್ವದ ಪಾತ್ರ ವಹಿಸಲಿದೆ, ಮಕ್ಕಳು ಅನುಕರಣೆ ಮಾಡುತ್ತಾ ನಮ್ಮ ನಡೆ ನುಡಿ ಆಹಾರವನ್ನು ಅನುಸರಿಸುವುದರಿಂದ ನಾವು ಅವರುಗಳಿಗೆ ಮಾದರಿಯಾಗ ಕಾಣಬೇಕು ಆಗ ಮಾತ್ರ ನಮ್ಮ ಆರೋಗ್ಯ ಸುಧಾರಣೆ ಸಾಧ್ಯ ಎಂದು ಹೇಳಿದರು,
ಆಹಾರದಲ್ಲಿ ಹೆಚ್ಚು ಹಸಿರು ಸೋಪ್ಪು , ಹಣ್ಣು ಮತ್ತು ತರಕಾರಿಗಳನ್ನು ಬಳಸುವ ಮೂಲಕ ನಮ್ಮ ಆರೋಗ್ಯ ಉತ್ತಮ ಮಟ್ಟದಲ್ಲಿ ಉಳಿಯಲಿದೆ. ಅಂಗನವಾಡಿ ಶಾಲೆಗಳ ವ್ಯಾಪ್ತಿಗೆ ಪುಟ್ಟ ಮಕ್ಕಳು ಮತ್ತು ತಾಯಂದಿರುಗಳು ಸದಾ ಸಂಪರ್ಕದಲ್ಲಿರುತ್ತಾರೆ ಆದ್ದರಿಂದ ತಾವು ಉತ್ತಮ ಸಲಹೆಗಳನ್ನು ಸಕಾಲಕ್ಕೆ ನೀಡುವ ಶಕ್ತಿಯನ್ನು ಸಾಧಿಸಬೇಕು ಎಂದರು.
ಜಿಲ್ಲಾ ಮುಖ್ಯ ಆಯುಕ್ತರಾದ ಕೆ.ವಿ.ಶಂಕರಪ್ಪ ರವರು ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ ಸ್ಕೌಟ್ಸ್ ಗೈಡ್ಸ್ ಸಂಸ್ಥೆ ಸಮಾಜದಲ್ಲಿ ಸಣ್ಣ ಪ್ರಮಾಣದ ಬದಲಾವಣೆಯನ್ನು ಬಾಲ್ಯಾವಸ್ಥೆಯಿಂದಲೇ ಬದಲಾಯಿಸಲು ಮೂರು ವರ್ಷದ ಮಕ್ಕಳಿಂದ ಹಿಡಿದು ಇಪ್ಪತೈದು ವರ್ಷದ ಯುವಕರಿಗಾಗಿ , ಅವರದೇ ಆದ ವಯಸ್ಸಿಗೆ ಅನುಗುಣವಾಗಿ ಚಟುವಟಿಕೆಗಳನ್ನು ಆಯೋಜನೆ ಮಾಡಿ ಉತ್ತಮ ನಾಗರೀಕರನ್ನಾಗಿ ತಯಾರಾಗಲು ಬೇಕಾದ ತರಬೇತಿಯನ್ನು ಶಿಬಿರಗಳಲ್ಲಿ ನೀಡಲಾಗುವುದು. ತಾವು ತರಬೇತಿ ನಂತರ ತಮ್ಮ ಶಾಲೆಗಳಲ್ಲಿ ಮತ್ತು ಗ್ರಾಮಗಳಲ್ಲಿ ಮಕ್ಕಳನ್ನು ತೊಡಗಿಸುವ ಮೂಲಕ ಉತ್ತಮ ಸಮಾಜದ ನಿರ್ಮಾಣಕ್ಕೆ ಕೈ ಜೋಡಿಸ ಬೇಕೆಂದರು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಜಿಲ್ಲಾ ಆಯುಕ್ತರಾದ ಕೆ.ಆರ್.ಸುರೇಶ್, ಜಿಲ್ಲಾ ಜಂಟಿ ಕಾರ್ಯದರ್ಶಿ ಉಮಾದೇವಿ, ಜಿಲ್ಲಾ ಸಹ ಕಾರ್ಯದರ್ಶಿ ಸ್ಕೌಟ್ ಬಾಬು, ಜಿಲ್ಲಾ ತರಬೇತಿ ಆಯುಕ್ತೆ ಗೌರಾಬಾಯಿ, ಸಂಘಟಕ ವಿಶ್ವನಾಥ್, ಜಿಲ್ಲಾ ಸಹಾಯಕ ಆಯುಕ್ತರಾದ ವಿಠಲ್ ರಾವ್, ರವಿಕುಮಾರ್ ಮುಂತಾದವರು ಉಪಸ್ಥಿತರಿದ್ದರು.