ಆರೋಗ್ಯದ ನಿರ್ವಹಣೆಗೆ ಪೋಷಕಾಂಶಗಳು ಅತ್ಯಗತ್ಯ

ಚಿತ್ತಾಪುರ:ನ.2: ಶರೀರಕ್ಕೆ ಪೋಷಕಾಂಶಗಳು ನಿರಂತವಾಗಿ ಬೇಕಾಗುತ್ತವೆ ಹೀಗಾಗಿ ಆರೋಗ್ಯದ ನಿರ್ವಹಣೆಗೆ ಸಮತೋಲನ ಆಹಾರ ಹಾಗೂ ಪೋಷಕಾಂಶಗಳು ಅತ್ಯಗತ್ಯ ಎಂದು ಉದಯಕುಮಾರ್ ಸಾಗರ್ ಹೇಳಿದರು.

ಪಟ್ಟಣದ ವೆಂಕಟೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಪೌಷ್ಟಿಕ ಆಹಾರ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ದೇಹದ ಬೆಳವಣೆಗೆ, ನಿರ್ವಹಣೆ ಮತ್ತು ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಪೋಷಕಾಂಶಗಳು ಸಾಕಷ್ಟು ಅಥವಾ ಸರಿಯಾದ ಪ್ರಮಾಣದಲ್ಲಿ ಹೊಂದಿರುವಂತಹ ಆಹಾರವೇ ಸಮತೋಲನ ಆಹಾರ ಆಗಿರುತ್ತದೆ.

ಗರ್ಭಿಣಿ ಮತ್ತು ಬಾಣಂತಿಯರು ತಮ್ಮ ಆಹಾರದಲ್ಲಿ ಧಾನ್ಯ, ಬೇಳೆಕಾಳುಗಳು, ಹಸಿರುಸೊಪ್ಪು ತರಕಾರಿ, ಹಣ್ಣುಗಳು, ಹಾಲು ಮತ್ತು ಹಾಲಿನ ಪದಾರ್ಥಗಳನ್ನು ಹೆಚ್ಚಾಗಿ ಉಪಯೋಗಿಸುವುದು ಅತ್ಯಗತ್ಯ. ಇದರಿಂದ ಚಿಕ್ಕಮಕ್ಕಳಲ್ಲಿ ಬೆಳವಣಿಗೆ ಸಹಕಾರಿಯಾಗುತ್ತದೆ ಹಾಗೂ ತಮ್ಮ ಆರೋಗ್ಯ ಕೂಡ ಸರಿಯಾಗಿ ಇರುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸುನಿತಾ, ಸಂಘದ ಸದಸ್ಯರಾದ ಸೀಮಾ, ಶ್ವೇತಾ, ನಾಗಮಣಿ, ಸಾವಿತ್ರಿ, ತೇಜಸ್ವಿನಿ, ರೇಖಾ, ಸೇರಿದಂತೆ ಇತರರು ಇದ್ದರು.