ಆರೋಗ್ಯದಲ್ಲಿ ನಿರ್ಲಕ್ಷವೆಂಬುದು ಬೇಡಾ:ಯಾಳಗಿ

ತಾಳಿಕೋಟೆ:ನ.6: ಉತ್ತಮವಾದ ಆರೋಗ್ಯವೇ ನಿಜವಾದ ಸಂಪತ್ತಾಗಿದೆ ಆರೋಗ್ಯದಲ್ಲಿ ಸಣ್ಣಪುಟ್ಟ ತೊಂದರೆಗಳು ಕಂಡುಬಂದರೂ ಕೂಡಲೇ ವೈಧ್ಯರನ್ನು ಸಂಪರ್ಕಿಸುವಂತಾಗಬೇಕು ಆರೋಗ್ಯದಲ್ಲಿ ನಿರ್ಲಕ್ಷವೆಂಬುದು ಯಾರೂ ಮಾಡಬಾರದೆಂದು ಕೆಪಿಸಿಸಿ ಸದಸ್ಯ ಬಿ.ಎಸ್.ಪಾಟೀಲ(ಯಾಳಗಿ) ಅವರು ನುಡಿದರು.
ಶನಿವಾರರಂದು ತಾಲೂಕಿನ ಗೊಟಖಂಡ್ಕಿ ಗ್ರಾಮದಲ್ಲಿ ಶ್ರೀಮನ್ ಮಾಹದೇವಿ ತಾಯಿ ಜಾತ್ರೋತ್ಸವ ಅಂಗವಾಗಿ ವಿಜಯಪೂರದ ಅನುಗ್ರಹ ಕಣ್ಣಿನ ಆಸ್ಪತ್ರೆ ಹಾಗೂ ಹೃದಾಲಯ ಮತ್ತು ಆರೋಗ್ಯಧಾಮ ಆಸ್ಪತ್ರೆ ವಿಜಯಪೂರ ಇವರ ಸಹಯೋಗದಲ್ಲಿ ಏರ್ಪಡಿಸಲಾದ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಹಳ್ಳಿಯ ಜನರು ಆರೋಗ್ಯದಲ್ಲಿ ನಿಸ್ಕಾಳಜಿತನ ತೋರುವದು ಸಹಜವಾಗುತ್ತಾ ಸಾಗಿದೆ ಇದರಿಂದ ಶುಗರ್, ಬಿಪಿ, ಇನ್ನಿತರ ರೋಗಗಳು ಕಾಣಿಸಿಕೊಳ್ಳುತ್ತಿವೆ ಆದ್ದರಿಂದ ಅನುಗ್ರಹ ಆಸ್ಪತ್ರೆ ಮತ್ತು ಹೃದಾಲಯ ಮತ್ತು ಆರೋಗ್ಯಧಾಮ ಆಸ್ಪತ್ರೆಯವರು ಗ್ರಾಮೀಣ ಪ್ರದೇಶಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜನೆ ಮಾಡುತ್ತಾ ಬಡವರ ಸೇವೆಗೆ ಮುಂದಾಗಿದ್ದಾರೆ ಆರೋಗ್ಯಯುತವಾದ ಸಮಾಜದಿಂದ ದೇಶದ ಅಭಿವೃದ್ದಿ ಹೊಂದಲು ಸಾಧ್ಯ ಆದೃಷ್ಠಿಯಿಂದ ಎಲ್ಲರೂ ಈ ಉಚಿತ ಆರೋಗ್ಯ ತಪಾಸಣೆ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಇನ್ನೋರ್ವ ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞವೈಧ್ಯ ಡಾ.ಪ್ರಭುಗೌಡ ಲಿಂಗದಳ್ಳಿ(ಚಬನೂರ) ಅವರು ಮಾತನಾಡಿ ಅತೀ ಹೆಚ್ಚು ಹೃದಯರೋಗ, ಸಕ್ಕರೆ ಕಾಯಿಲೆ ಹೊಂದಿದವರು ನಮ್ಮ ಭಾರತ ದೇಶದಲ್ಲಿದ್ದಾರೆ ಇದಕ್ಕೆ ಕಾರಣ ಬದಲಾದ ಆಹಾರ ಪದ್ದತಿ ಕಾರಣವಾಗಿದೆ ಬಾಲಾವಸ್ತೆಯಲ್ಲಿ ನಾವು ಕೆಲಸ ಮಾಡುತ್ತೇವೆ ಕ್ರಮೇಣ ಕೆಲಸದಿಂದ ಹಿಂದಕ್ಕೆ ಸರಿದು ಆಲಸ್ಯತನಬೆಳೆಸಿಕೊಳ್ಳುತ್ತಾ ಸಾಗುತ್ತೇವೆ ಇದರಿಂದ ಇಲ್ಲದ ರೋಗಗಳು ನಮ್ಮನ್ನು ಅಂಟಿಕೊಳ್ಳುತ್ತಾ ಸಾಗುತ್ತವೆ ನಮ್ಮ ದೇಹಕ್ಕೆ ಬೇಕಾದುದ್ದನ್ನು ಊಟ ನಾವು ಮಾಡುವದಿಲ್ಲಾ ನಮ್ಮ ನಾಲಿಗೆ ರುಚಿ ಯಾವುದು ಕೇಳುತ್ತದೆಯೋ ಆ ಊಟವನ್ನು ನಾವು ಮಾಡುತ್ತೇವೆ ಇದರಿಂದ ದೇಹದಲ್ಲಿ ಬದಲಾವಣೆಗಳು ಆಗುತ್ತಾ ಹೋಗಿ ಬಿಪಿ, ಶುಗರ್, ಹೃದಯಾಘಾತದಂತಹ ಅನೇಕ ರೋಗಗಳು ನಮ್ಮನ್ನು ಕಾಡುತ್ತವೆ ನಮ್ಮ ದೇಹ ಎಷ್ಟು ಶ್ರಮಪಡಿಸುತ್ತೇವೆಯೋ ಅಷ್ಟು ಆರೋಗ್ಯಯುತವಾದ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.
ಹೃದಾಲಯ ಮತ್ತು ಆರೋಗ್ಯಧಾಮ ವಿಜಯಪೂರದ ಹೃದಯ ರೋಗ ತಜ್ಞ ಡಾ.ಶಂಕರಗೌಡ ಬಿ ಪಾಟೀಲ ಅವರು ಮಾತನಾಡಿ ಇಂದಿನ ದಿನಮಾನದಲ್ಲಿ ಮನೆಯ ಊಟಕ್ಕಿಂತ ದಾಬಾದಲ್ಲಿಯ ಊಟಕ್ಕೆ ಯುವಕರು ಆಕರ್ಷಿತರಾಗುತ್ತಿದ್ದಾರೆ ಇದರಿಂದ ಹೃದಯಾಘಾತವೆಂಬುದು ಚಿಕ್ಕ ಚಿಕ್ಕ ಯುವಕರಲ್ಲಿ ಕಾಣಿಸಿಕೊಂಡು ಸಾವನಪ್ಪಿದ್ದಾರೆ ಮತ್ತು ಇನ್ನೂ ಕೆಲವರು ಆಸ್ಪತ್ರೆಗೆ ದಾಖಲಾಗಿ ಚಿಕೀತ್ಸೆ ಪಡೆದುಕೊಂಡಿದ್ದಾರೆ ದಾಬಾದಲ್ಲಿಯ ಟೆಸ್ಟಿಂಗ್ ಪೌಡರ್ ಬಳಕೆಯ ಊಟ ಆರೋಗ್ಯದ ಮೇಲೆ ದುಸ್ಪರಿಣಾಮ ಬೀರುತ್ತದೆ ಎಂಬುದು ಗೊತ್ತಿದ್ದರೂ ಕೂಡಾ ಅದನ್ನೇ ಬಯಸುವದು ಸರಿಯಲ್ಲಾ ಮನೆಯಲ್ಲಿಯ ರೋಟ್ಟಿ, ಪಲ್ಲೆ, ಚಟ್ನಿ, ಊಟದ ರುಚಿ ದೇಹಕ್ಕೆ ಆರೋಗ್ಯವನ್ನು ಕೊಡುತ್ತದೆ ಮತ್ತು ಹೊಲದಲ್ಲಿ ಕೆಲಸ ಮಾಡುವದರಿಂದ ದೇಹ ದಂಡಿಸಿದಂತಾಗುತ್ತದೆ ಇಂದಿನ ಯಂತ್ರೋಪಕರಣ ಭರಾಟೆಯಲ್ಲಿ ಕೆಲಸಗಳೂ ಸಹ ಕಡಿಮೆಯಾಗಿದ್ದರಿಂದ ದೇಹವನ್ನು ದಂಡಿಸಲು ಆಗುತ್ತಿಲ್ಲಾ ಇದಕ್ಕೆ ಕಾರಣ ಬದಲಾದ ಜೀವನ ಶೈಲಿ ಮತ್ತು ಬದಲಾದ ಆಹಾರ ಪದ್ದತಿಯೇ ಕಾರಣವಾಗಿದೆ ಎದೆ ನೋವಿನ ಬಗ್ಗೆ ನಿರ್ಲಕ್ಷವಹಿಸುವದು ಬೇಡಾ ಚಿಕ್ಕದಿದ್ದಾಗಲೇ ವೈಧ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಇದರಲ್ಲಿ ನಿರ್ಲಕ್ಷ ವಹಿಸಿದಲ್ಲಿ ಜೀವವೇ ಕಳೆದುಕೊಳ್ಳುವಂತಹ ಪರಸ್ಥಿತಿ ಬರಬಹುದು ಕಾರಣ ಏಚ್ಚರದಿಂದ ಉತ್ತಮ ಆರೋಗ್ಯದ ಕಡೆಗೆ ಗಮನ ಹರಿಸಬೇಕೆಂದರು.
ಕಾಂಗ್ರೇಸ್ ಮುಖಂಡ ಸುರೇಶಬಾಬುಗೌಡ ಬಿರಾದಾರ(ಫೀರಾಪೂರ) ಅವರು ಶ್ರೀಮನ್ ಮಹಾದೇವಿತಾಯಿಯ ಜಾತ್ರೋತ್ಸವ ಅಂಗವಾಗಿ ಆರೋಗ್ಯ ಶಿಬಿರವನ್ನು ಆಯೋಜಿಸಿ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಿಕೊಟ್ಟ ವಿಜಯಪೂರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮತ್ತು ಹೃದಾಲಯ ಮತ್ತು ಆರೋಗ್ಯಧಾಮ ಆಸ್ಪತ್ರೆಯ ಕಾರ್ಯ ಮೆಚ್ಚುವಂತಹದ್ದಾಗಿದೆ ಎಂದರು.
ಇದೇ ಸಮಯದಲ್ಲಿ ಬಿ.ಎಸ್.ಪಾಟೀಲ(ಯಾಳಗಿ) ಅಭಿಮಾನಿ ಬಳಗದ ವತಿಯಿಂದ ಯುವಕರಿಗೆ ಟಿ ಶರ್ಟ್‍ಗಳನ್ನು ಉಚಿತವಾಗಿ ವಿತರಿಸಲಾಯಿತು.
ಈ ಉಚಿತ ಆರೋಗ್ಯ ಶಿಬಿರದಲ್ಲಿ ಅನುಗ್ರಹ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ(ಚಬನೂರ), ಡಾ.ಸ್ವಾತಿ ಸೋನಾಲಕರ, ವಿಜಯಪೂರ ಹೃದಾಲಯ ಮತ್ತು ಆರೋಗ್ಯಧಾಮ ಆಸ್ಪತ್ರೆಯ ಡಾ.ಶಂಕರಗೌಡ ಪಾಟೀಲ, ಡಾ.ಶ್ರೀಮತಿ ಶ್ರೀದೇವಿ ಶ ಪಾಟೀಲ, ಡಾ.ಸೋಹೇಲ್, ಡಾ.ಶಾಂತಾ ಇಬ್ರಾಹಿಂಪೂರ, ಅವರು ಪಾಲ್ಗೊಂಡು ಉಚಿತ ಸೇವೆ ನೀಡಿದರು.ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಶ್ರೀ ಶಿವಯ್ಯ ಹಿರೇಮಠ ಅವರು ವಹಿಸಿದ್ದರು.
ಈ ಸಮಯದಲ್ಲಿ ರಾಮನಗೌಡ ಬಿರಾದಾರ(ಮಿಲ್ಟ್ರಿ), ಈರಣ್ಣಶಾಸ್ತ್ರೀ ಚಿಕ್ಕರೂಗಿ, ಹಣಮಂತ್ರಾಯಗೌಡ, ನಿಂಗಣ್ಣ ಶರಣರು, ವಿರುಪಾಕ್ಷ ಶರಣರು, ಶಿವನಗೌಡ ಬಿರಾದಾರ, ಯಂಕಾರಡ್ಡಿ ಬಿರಾದಾರ, ಡಾ.ಭಲವಂತ್ರಾಯ ನಡಹಳ್ಳಿ, ರಾಮನಗೌಡ ಭಂಟನೂರ, ಬಿ.ಜಿ.ಬಿರಾದಾರ(ಗೊಟಗುಣಕಿ), ಶಿವನಗೌಡ ಬಿರಾದಾರ, ಶಂಕರಗೌಡ ಪಾಟೀಲ, ಚಿದಾನಂದ ಬಿರಾದಾರ, ಮುದಿಗೌಡ ಪಾಟೀಲ, ಭೀಮಣ್ಣ ಚೌದ್ರಿ, ರಾಮನಗೌಡ ಭಂಟನೂರ, ಬಸನಗೌಡ ಪೊಲೇಸಿ, ಬಸವರಾಜ ಕೊಳ್ಯಾಳ, ಭೀಮನಗೌಡ ಬಿರಾದಾರ, ರುದ್ರಗೌಡ ಬಿರಾದಾರ(ಅಸ್ಕಿ), ಶಿವನಗೌಡ ಬಿರಾದಾರ(ಅಸ್ಕಿ), ಮೊದಲಾದವರು ಇದ್ದರು.