ಆರೋಗ್ಯಕ್ಕೆ ಕ್ರೀಡೆ ಮುಖ್ಯ

ನವಲಗುಂದ,ಮಾ16 : ಮನುಷ್ಯನ ಉತ್ತಮ ದೈಹಿಕ ಜೀವನಕ್ಕೆ ಕ್ರೀಡಾ ಚಟುವಟಿಕೆಗಳು ತುಂಬಾ ಮುಖ್ಯವಾಗಿದೆ ಎಂದು ಕಾಂಗ್ರೆಸ್ ಯುವ ನಾಯಕ ನವೀನಕುಮಾರ್ ಕೋನರಡ್ಡಿ ಹೇಳಿದರು.

ಅವರು ಕಿರೇಸೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಿರೇಸೂರ ಪ್ರೀಮಿಯರ್ ಲೀಗ್ ಉದ್ಘಾಟನಾ ಸಮಾರಂಭವನ್ನು ಗ್ರಾ.ಪಂ ಅಧ್ಯಕ್ಷ ಹಾಗೂ ಮಾಲಕರು ಪ್ರಭುದೇವ ಸ್ಪೋರ್ಟ್ ಕ್ಲಬ್ ಬಿ.ಕೆ.ಪಾಟೀಲ್ ಅವರೊಂದಿಗೆ ಉದ್ಘಾಟಿಸಿದರು.

ಕ್ರಿಕೆಟ್ ಆಡುವ ಮೂಲಕ ತಮ್ಮ ವಿದ್ಯಾರ್ಥಿ ಜೀವನದ ನೆನೆಪುಗಳನ್ನು ಮೆಲಕು ಹಾಕಿದರು.

ಈ ಸಂದರ್ಭದಲ್ಲಿ ವೀರೇಶ ದಾಡಿಬಾಯಿ, ಸಂತೋಷ ಜೀವನಗೌಡರ, ಗುರು ರಾಯನಗೌಡರ, ಆರ್. ಬಿ. ಶ್ರೇಹರಿ, ಹೆಚ್.ಎಸ್. ರಾಯನಗೌಡರ, ಪ್ರವೀಣ ಚಿಕ್ಕರಡ್ಡಿ, ಪ್ರಭು ತಿರ್ಲಾಪೂರ, ಡಿ.ಕೆ. ಕಮಡೊಳ್ಳಿ ಸೇರಿದಂತೆ ನೂರಾರು ಯುವ ಕಾರ್ಯಕರ್ತರು ಹಾಗೂ ಆಟಗಾರರು ಉಪಸ್ಥಿತರಿದ್ದರು.