ಆರೋಗ್ಯಕ್ಕಾಗಿ ತಂಬಾಕು ಸೇವನೆ ನಿಲ್ಲಿಸಲು ಕರೆ

ಚಿತ್ರದುರ್ಗ. ನ.೩೦; ಭಾರತದಲ್ಲಿ ಸುಮಾರು 26 ಕೋಟಿ ತಂಬಾಕು ಬಳಕೆದಾರರಿದ್ದಾರೆ, ಇವರಲ್ಲಿ ಸಿಗರೇಟ್, ಹುಕ್ಕಾ, ತಾಂಬೂಲ, ಗುಟ್ಕಾ ಮತ್ತು ಖೈನಿ. ಹೀಗೆ ಎಲ್ಲ ರೀತಿಯ ತಂಬಾಕು ಬಳಕೆದಾರರು ಸೇರಿದ್ದಾರೆ. ಭಾರತದಲ್ಲಿ ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ 3ಂ ರಷ್ಟು ಪ್ರಕರಣಗಳಿಗೆ ತಂಬಾಕು ಸೇವನೆಯೇ ಮುಖ್ಯ ಕಾರಣವಾಗಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ ಎಚ್ಚರಿಸಿದರು. ಅವರು ನಗರದ ರೋಟರಿ ವಿದ್ಯಾ ಶಾಲೆ ಬಳಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ರೋಟರಿ ವಿದ್ಯಾ ಸಂಸ್ಥೆ, ಕಲ್ಪವೃಕ್ಷ ಚಾರಿಟಬಲ್ ಟ್ರಸ್ಟ್ ಮತ್ತು ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದೊಂದಿಗೆ ಗುಟ್ಕಾ ನಿಷೇಧದ ಬಗ್ಗೆ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಜಗಿದು ತಿನ್ನುವ ಅಥವಾ ಧೂಮಪಾನವಲ್ಲದ ತಂಬಾಕು ಸೇವನೆಯಿಂದ ಅನ್ನನಾಳ, ಬಾಯಿ, ಗಂಟಲು ಮತ್ತು ಮೇದೊಜೀರಕಾಂಗದಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. ಸಂಶೋಧನೆಗಳ ಪ್ರಕಾರ ಧೂಮಪಾನಕ್ಕಿಂತಲೂ ಜಗಿದು ತಿನ್ನುವ ತಂಬಾಕು ಅತ್ಯಂತ ಅಪಾಯಕಾರಿ. ಇದನ್ನ ಎಲ್ಲಾ ಕಡೆ ಉಗುಳುವುದರಿಂದ ಗೋಡೆ, ಶೌಚಾಲಯಗಳು, ಕಟ್ಟಡಗಳು ಕೆಂಪು ಕಲೆಗಳಿಂದ ನೋಡಲು ಅಸಹ್ಯಕರವಾಗಿದೆ, ತಂಬಾಕು ಬಿಡುಗಡೆ ಮಾಡುವ ಹಾನಿಕಾರಕ ರಾಸಾಯನಿಕಗಳು ನಮ್ಮ ಜೀವಕೋಶಗಳ ಡಿಎನ್‌ಎಗಳನ್ನೇ ನಾಶಪಡಿಸುತ್ತವೆ. ಈ ಮೂಲಕ ಶರೀರದ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತವೆ, ಇದರಿಂದ ಕ್ಯಾನ್ಸರ್ ಕಣಗಳನ್ನು ಕೊಲ್ಲುವ ಜೀವಕಣಗಳಿಗೆ ಶಕ್ತಿ ಇಲ್ಲದಂತಾಗುತ್ತದೆ. ಎಂದರು.ಕಾರ್ಯಕ್ರಮದಲ್ಲಿ ಶ್ರೀ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಾದ ಮನೋಜ್ ಕೆ.ಜಿ, ಸೃಜನ್ ಡಿ.ಸಿ, ಅಮೃತಬಿಂದು, ಜೆ. ಭಾರತಿ ಆರ್, ಸುವರ್ಣ.ಬಿ, ಪೂಜಾ. ಜೆ, ರೋಟರಿ ವಿದ್ಯಾಸಂಸ್ಥೆ ಮುಖ್ಯಶಿಕ್ಷಕರಾದ ಶ್ರೀಮತಿ ಉಮಾದೇವಿ ಹಾಜರಿದ್ದರು.