ಆರೋಗ್ಯಕಾರಿ ನೇರಳೆಹಣ್ಣು

ಕಲಬುರಗಿ,ಜೂ 6:ನೇರಳೆ ಹಣ್ಣು, ಜಾಮೂನ್ ಅಥವಾ ನೀಲದ ಹಣ್ಣು ಬೇಸಿಗೆಯಲ್ಲಿ ಕಂಡುಬರುವ ಅತ್ಯಂತ ರುಚಿಕರ ಹಣ್ಣು. ಇದನ್ನು ಬೇರೆ ಬೇರೆ ಹೆಸರುಗಳಿಂದ ಗುರುತಿಸಲಾಗುತ್ತದೆ. ಜಾಮೂನ್, ನೇರಳೆ ಹಣ್ಣು, ರಾಜ್ಮನ್, ಜಮಾಲಿ, ಬ್ಲಾಕ್ ಜಾಮೂನ್, ಬ್ಲಾಕ್ಬೆರ್ರಿ ಇತ್ಯಾದಿ.ಇದು ತಿನ್ನಲು ತುಂಬಾ ಸಿಹಿಯಾಗಿರುತ್ತದೆ.
ತಿನ್ನಲು ರುಚಿಕರವಾಗಿರುವ ಜೊತೆಗೆ ಆರೋಗ್ಯಕ್ಕೆ ಪ್ರಯೋಜನವಾಗಿರುವ ಅನೇಕ ಅಂಶಗಳು ಈ ಹಣ್ಣಿನಲ್ಲಿವೆ. ಇದು ತೂಕ ಇಳಿಸಲು ಸಹಾಯ ಮಾಡುತ್ತದೆ. ಈ ಹಣ್ಣು ಹೆಚ್ಚಿನ ಪ್ರಮಾಣದ ಫೈಬರ್ ಹೊಂದಿರುತ್ತದೆ. ಅದರ ಸೇವನೆಯಿಂದ ಕೊಲೆಸ್ಟ್ರಾಲ್,
ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಇದರಲ್ಲಿರುವ ಪೆÇಟಾಶಿಯಂ ರಕ್ತದೊತ್ತಡದ ಸಮಸ್ಯೆಯನ್ನು ದೂರವಿಡುತ್ತದೆ.ಇಂದಿನ ಆಹಾರ ಮತ್ತು ಪಾನೀಯದಿಂದಾಗಿ, ಜನರ ಮುಖದಲ್ಲಿ ಮೊಡವೆಗಳು ಮೂಡುತ್ತವೆ. ಹೀಗಿದ್ದಾಗ ಇದರಲ್ಲಿರುವ ವಿಟಮಿನ್-ಸಿ ಚರ್ಮವನ್ನು ಉತ್ತಮವಾಗಿಡಲು ಸಹಾಯ ಮಾಡುತ್ತದೆ. ತ್ವಚೆಯ ಬಗ್ಗೆ ಕಾಳಜಿ ವಹಿಸುವುದು ಸಾಧ್ಯವಾಗದೆ ಹೋದರೆ ಈ ಹಣ್ಣನ್ನು ತಿಂದರೆ ಸಾಕು.ಮಧುಮೇಹಿಗಳು ಈ ಹಣ್ಣನ್ನು ಧಾರಾಳವಾಗಿ ಸೇವಿಸಬಹುದು.