
ಭಾಲ್ಕಿ:ಆ.7:ಮಗುವಿನ ಆರೋಗ್ಯಕರ ಬೆಳವಣಿಗೆಗಾಗಿ ತಾಯಿ ಎದೆ ಹಾಲು ಅತ್ಯಂತ ಅಗತ್ಯವಾಗಿದೆ ಎಂದು ಸ್ತ್ರೀರೋಗ ತಜ್ಞೆ ಡಾ.ವೈಶಾಲಿ ಯುವರಾಜ ಜಾಧವ ಅಭಿಪ್ರಾಯಪಟ್ಟರು.
ಭಾಲ್ಕಿಯ ಜಾಧವ ಆಸ್ಪತ್ರೆಯಲ್ಲಿ ತಾಲೂಕು ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟ್ (ಆರ್‍ಐ 3160) ವತಿಯಿಂದ ವಿಶ್ವ ಸ್ತನ್ಯಪಾನ ಸಪ್ತಾಹ ಅಂಗವಾಗಿ ಹಮ್ಮಿಕೊಂಡ ಹೆತ್ತ ತಾಯಿಂದಿರಿಗೆ ಹಾಲಿನ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಭವಿಷ್ಯದಲ್ಲಿ ಬರುವ ಮಾರಕ ರೋಗಗಳನ್ನು ನಿಯಂತ್ರಿಸುವ ಶಕ್ತಿ ಹಾಲಿನಲ್ಲಿರುವುದರಿಂದ ಮಗು ಹುಟ್ಟಿದ 6 ತಿಂಗಳ ವರೆಗೆ ತಾಯಿ ಹಾಲೇ ಕುಡಿಸಬೇಕು.ತಾಯಿ ಎದೆ ಹಾಲಿನಲ್ಲಿ ಕ್ಯಾನ್ಸರ್ ರೋಗ ಬರದಂತೆ ತಡೆಯುವ ಶಕ್ತಿಯಿದೆ.ತಾಯಿ ಹಾಲಿನಲ್ಲಿ ಫೌಷ್ಠಿಕಾಂಶಯಿರುವುದರಿಮದ ಅಮೃತಕ್ಕೆ ಸಮಾನವಾಗಿರುತ್ತದೆ .ಮಗುವಿನ ಅಂತರ ಕಾಪಾಡುವಲ್ಲಿ ಹೆತ್ತ ತಾಯಿ ಮಗುವಿಗೆ ಗರಿಷ್ಠ ಎರಡು ವರ್ಷ ಮೊಲೆ ಹಾಲು ಕುಡಿಸಬೇಕು ಎಂದು ಸಲಹೆ ನೀಡಿದರು.
ಹಿರಿಯ ಮಕ್ಕಳತಜ್ಞ ಡಾ.ರಾಜೇಂದ್ರ ಜಾಧವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಭಾಲ್ಕಿ ರೋಟರಿ ಕ್ಲಬ್‍ನವರು ಸಮಜೋಪಯೋಗಿ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.ಮಕ್ಕಳತಜ್ಞ ಡಾ.ಯುವರಾಜ ಜಾಧವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.ತಾಲೂಕು ರೋಟರಿ ಅಧ್ಯಕ್ಷ ಡಾ.ವಿಲಾಸ ಕನಸೆ ಪ್ರಾಸ್ತಾವಿಕ ಮಾತನಾಡಿದರು.
ಮಾಜಿ ಎಜಿ ಡಾ.ಅಮೀತ ಅಷ್ಟೂರೆ,ಜಿಲ್ಲಾ ಅಂಕಿತಾಧಿಕಾರಿ ಡಾ.ಸಂತೋಷ ಕಾಳೆ,ಯೋಗೇಶ ಅಷ್ಟೂರೆ,ಡಾ.ಶರತ ತುಕದೆ,ಡಾ.ಸಜ್ಜಲ ಬಳತೆ ಸೇರಿದಂತೆ ನೂರಾರು ತಾಯಿಂದಿರು ಮತ್ತು ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.
ತಾಲೂಕು ರೋಟರಿ ಕೋಶಾಧ್ಯಕ್ಷ ಡಾ.ಶಶಿಕಾಂತ ಭೂರೆ ಸ್ವಾಗತಿಸಿದರು.ಪ್ರಾಚಾರ್ಯ ಅಶೋಕ ರಾಜೋಳೆ ನಿರೂಪಿಸಿದರು.ರೋಟರಿ ಕಾರ್ಯದರ್ಶಿ ನ್ಯಾಯವಾದಿ ಸಾಗರ ನಾಯಕ್ ವಂದಿಸಿದರು.