ಹಿರಿಯೂರು .ಜೂ.21-ಆರೋಗ್ಯಕರ ಜೀವನಕ್ಕೆ ಯೋಗಭ್ಯಾಸ ತುಂಬಾ ಸಹಕಾರಿಯಾಗಿದೆ, ಇಂದಿನ ಪ್ರಪಂಚದ ವೇಗವಾಗಿ ಓಡುತ್ತಿರುವ ಜೀವನದಲ್ಲಿ ಕೋಪ ತಾಪ ಶಮನಗೊಳಿಸಲು ಪ್ರತೀದಿನ ಯೋಗ ಮತ್ತು ಧ್ಯಾನ ಮಾಡುವುದು ತುಂಬಾ ಒಳ್ಳೆಯದು ಎಂದು ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ಗಾಯತ್ರಕ್ಕ ಹೇಳಿದರು. ನಗರದ ದಕ್ಷಿಣ ಕಾಶಿ ಶ್ರೀ ತೇರುಮಲ್ಲೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಒಂಬತ್ತನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಡಿವೈಎಸ್ಪಿ ಶ್ರೀಮತಿ ಎಸ್. ಚೈತ್ರ ರವರು ಮಾತನಾಡಿ ಪ್ರಪಂಚಕ್ಕೆ ನಮ್ಮ ಋಷಿಮುನಿಗಳು ಯೋಗ ಧ್ಯಾನವನ್ನು ಪರಿಚಯ ಮಾಡಿಕೊಟ್ಟಿದ್ದು ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ. ಆಚರಿಸುತ್ತಿರುವುದು ತುಂಬಾ ಹೆಮ್ಮೆಯ ವಿಷಯ ಎಲ್ಲರೂ ಪ್ರತಿದಿನ ಯೋಗಾಧ್ಯಾನ ಮಾಡಿ ತಮ್ಮ ಆರೋಗ್ಯ ಸಂರಕ್ಷಿಸಿಕೊಳ್ಳಿ ಎಂದು ತಿಳಿಸಿದರು. ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ಉಮೇಶ್ ಗುಡಾಣಮಠ್ , ಶಶಿಧರ್ ಮತ್ತು ಸದಸ್ಯರು,ನಗರದ ಅನೇಕ ಮುಖಂಡರು ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿ ಯೋಗಾಸನ ನಡೆಸಿದರು. ಕಾರ್ಯಕ್ರಮದ ನಂತರ ಉಪಹಾರದ ವ್ಯವಸ್ಥೆ ಏರ್ಪಡಿಸಲಾಗಿತ್ತು.