ಕಲಬುರಗಿ,ಜು.26: ಪ್ರತಿಯೊಬ್ಬ ಮನುಷ್ಯ ಆರೋಗ್ಯಂತ ಜೀವನ ನಡೆಸಲು ನಮ್ಮ ಸುತ್ತಮುತ್ತಲಿನ ಪರಿಸರ ಸರಿಯಾಗಿರಬೇಕು ಎಂದು ಶ್ರೀ ರಾಚೋಟೇಶ್ವರ್ ಸಂಸ್ಥಾನ ಮಠದ ಪೀಠಾಧಿಪತಿ ಚಂದ್ರಗುಂಡ ಶಿವಾಚಾರ್ಯರು ಹೇಳಿದರು.
ತಾಲ್ಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿ ಮನೆಗೊಂದು ಗಿಡ ವಿತರಣಾ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಗಿಡ ನಾಟಿಯಿಂದ ಶುದ್ಧ ಗಾಳಿ, ಮಳೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಅನುಕೂಲ ಜೊತೆಗೆ ಬಿಸಿಲಿನ ತಾಪಮಾನವು ಕಡಿಮೆ ಆಗುವುದು. ಅದಕ್ಕಾಗಿ ವೀರೇಂದ್ರ ಹೆಗ್ಗಡೆಯವರು ಇಂತಹ ಸಮಾಜಮುಖಿ ಕೆಲಸವನ್ನು ಮಾಡುತ್ತಿದ್ದು, ಅದನ್ನು ನಾವೆಲ್ಲರೂ ಸದುಪಯೋಗ ಪಡಿಸಿಕೊಳ್ಳೋಣ ಎಂದರು.
ತಾಲ್ಲೂಕಿನ ಯೋಜನಾಧಿಕಾರಿ ಪ್ರವೀಣ್ ಆಚಾರ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಯೋಜನೆಯ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ ಅವರು ಮಾತನಾಡಿ, ಧರ್ಮಸ್ಥಳ ಸಂಸ್ಥೆ ಎಲ್ಲ ಜನಾಂಗದ ಜನರು ಆರೋಗ್ಯವಂತರಾಗಿ ಬದುಕಲು ಕಾರ್ಯಕ್ರಮ ಬಹಳ ಉತ್ತಮವಾದದ್ದು. ನಾವೆಲ್ಲರೂ ಈ ಗಿಡಗಳನ್ನು ನಾಟಿ ಮಾಡಿ ಉತ್ತಮ ಪರಿಸರವನ್ನು ಮಾಡೋದರ ಜೊತೆಗೆ ಆರೋಗ್ಯವಂತರಾಗಿರೋಣ ಗಿಡಗಳು ಹೆಚ್ಚುವುದರಿಂದ ಮಳೆ, ಬೆಳೆ ಚೆನ್ನಾಗಿ ಆಗುತ್ತದೆ. ಸುಖ, ಶಾಂತಿ ನೆಮ್ಮದಿಯಿಂದ ಬದಕಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಕಾಯಕ ಬಂಧು ಸದಾಶಿವ್ ಹೈದರಾ, ಶ್ರೀಮತಿ ಭಾಗ್ಯಶ್ರೀ ನಂದಿಕೂರ್ ಹಾಗೂ ಪ್ರಗತಿ ಬಂಧು ಸವ ಸಹಾಯ ತಂಡಗಳ ಸದಸ್ಯರು, ಗ್ರಾಮದ ರೈತರು, ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರಿಗೆ ಹತ್ತಾರು ಗಿಡಗಳನ್ನು ಉಚಿತವಾಗಿ ವಿತರಿಸಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಜಗನ್ನಾಥ್ ಸಿಂಧನೂರು, ಶ್ರೀಧರ್ ಬೆಣ್ಣೂರ್, ಶ್ರೀಮತಿ ರಾಜಶ್ರೀ ಈರಣ್ಣ ಯಳಸಂಗಿ ಮುಂತಾದವರು ಉಪಸ್ಥಿತರಿದ್ದರು. ಶ್ರೀಮತಿ ಶರಣಮ್ಮ ಹಿರೇಮಠ್ ಅವರು ಸ್ವಾಗತಿಸಿದರು. ಗಂಗಾಧರ್ ಮೇಲಿನಮನಿ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.