ಆರೋಗ್ಯಕರವಾದ ಸಮಾಜ ನಿರ್ಮಾಣಕ್ಕೆ ಕರೆ

ಹರಿಹರ .ಏ .8 ; ಆರೋಗ್ಯ ನಿಜವಾದ ಸಂಪತ್ತೇ ಹೊರತು ಚಿನ್ನ ಬೆಳ್ಳಿಯಲ್ಲ ಎಂದು ವೈದ್ಯರಾದ ವಿಶ್ವನಾಥ್ ಕುಂದಗೋಳ  ಹೇಳಿದರು 
ತಾಲ್ಲೂಕಿನ ಹೊಳೆಸಿರಿಗೆರೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಆರೋಗ್ಯ ದಿನಾಚರಣೆಯನ್ನು ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ 
ಮಾತನಾಡಿದ ಅವರು ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಬೇಕಾದರೆ ನಾವು ಜೀವಿಸುವ ವಾತಾವರಣ ಗಾಳಿ ಬೆಳಕು ನೀರು ಆಹಾರ ಎಲ್ಲವೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಆದ್ದರಿಂದ ನಮ್ಮ ಮನೆಯ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿದ್ದರೆ ಯಾವುದೇ ರೋಗಗಳು ಬರುವುದಿಲ್ಲ ಉತ್ತಮವಾದ ಪರಿಸರ ನಿರ್ಮಾಣ ಮಾಡಬೇಕು ಉತ್ತಮವಾದ ಆರೋಗ್ಯ ಸಮಾಜ ನಿರ್ಮಾಣವಾಗುತ್ತದೆ ಎಂದರು ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ದೈಹಿಕ ಮಾನಸಿಕ ಹಾಗೂ ಸಾಮಾಜಿಕ ನೆಮ್ಮದಿಯ ಸ್ಥಿತಿಯೇ ಆರೋಗ್ಯ ಉತ್ತಮ ಆರೋಗ್ಯಕ್ಕಾಗಿ ಆಹಾರಗಳು ಶುದ್ಧ ಕುಡಿಯುವ ನೀರು ಶುದ್ಧ ಗಾಳಿ ಬೆಳಕು ಸ್ವಚ್ಛ ಪರಿಸರ ನೆಮ್ಮದಿ ಮತ್ತು ಮನೋರಂಜನೆ ಅತ್ಯಗತ್ಯವಾದದ್ದು .ಆರೋಗ್ಯದ ಕಾಳಜಿ ಕುರಿತು ಜನ ಸಾಮಾನ್ಯರಲ್ಲಿ ಅರಿವು ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ವರ್ಷ ಏ 7 ರಂದು ವಿಶ್ವ ಆರೋಗ್ಯ ದಿನವನ್ನು ಆಚರಿಸುತ್ತದೆ  ಸಾರ್ವಜನಿಕರಿಗೆ ಆರೋಗ್ಯ ಮತ್ತು ಹಲವಾರು ಕೆಡಕುಗಳ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ .ನೈರ್ಮಲ್ಯಯುಕ್ತ ಸಮಾಜಕ್ಕೆ ಅಗತ್ಯವಾದ ಸ್ವಚ್ಚತಾ ಅಭ್ಯಾಸಗಳು ನೀರಿನ ಸಂರಕ್ಷಣೆ ಪರಿಸರ ಸ್ವಚ್ಚತೆ ಹಾಗೂ ಸೂಕ್ತ ಕಾಲಕ್ಕೆ ತೆಗೆದುಕೊಳ್ಳಬೇಕಾದ ಔಷಧಿಗಳನ್ನು ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡುತ್ತಾ ಬಂದಿರುತ್ತದೆ .ಆದ್ದರಿಂದ ಸಾರ್ವಜನಿಕರು ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು .ಸೂಕ್ತ ಕಾಲಕ್ಕೆ ನೀಡಬೇಕಾದ ಆರೋಗ್ಯ ಸೇವೆಗೆ ಪ್ರಾಮುಖ್ಯತೆ ನೀಡುವುದು ಪರಿಸರದ ಸ್ವಚ್ಛತೆ ಹಾಗೂ ರಕ್ಷಣಾ ಕ್ರಮಗಳು .ವಿವಿಧ ರೋಗಗಳಿಗೆ ತುತ್ತಾಗುವ ಕಾರಣಗಳು ಹಾಗೂ ಅವುಗಳನ್ನು ತಡೆಗಟ್ಟುವ ಮುಂಜಾಗತ ಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು .ಆರೋಗ್ಯ ಮುಕ್ತ ಸಮಾಜವನ್ನು ಕಟ್ಟುವ ಗುರಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಹೊಂದಿದೆ ಆದ್ದರಿಂದ ಪ್ರತಿಯೊಬ್ಬ ಸಾರ್ವಜನಿಕರು ನಾವು ನೀಡುವ ಮಾಹಿತಿಯನ್ನು ಪ್ರತಿಯೊಬ್ಬರಿಗೆ ನೀಡಿ ಉತ್ತಮ ಪರಿಸರ ನಿರ್ಮಾಣ ಮಾಡೋಣ ಆರೋಗ್ಯವಂತ ಸಮಾಜವನ್ನು ಕಟ್ಟೋಣ ಎಂದು ಹೇಳಿದರು ಹಿರಿಯ ಆರೋಗ್ಯ ಸಹಾಯಕ ಎಂ  ಉಮ್ಮಣ್ಣ .  ಮಹಿಳಾ  ಆರೋಗ್ಯ ಸಹಾಯಕಿ ಸುಧಾ,ಹಾಗು ಯೋಗ ತರಬೇತಿ ದಾರರು k ಜೈ ಮುನಿ,ಪ್ರಕಾಶ್ ನಾಯ್ಕ್ .ಪ್ರಹ್ಲಾದ್. ಸವಿತಾ .ಆಶಾ .ಮತ್ತು  ಅಂಗನವಾಡಿ ಆಶಾ ಕಾರ್ಯಕರ್ತರು ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.