ಸಿಂಧನೂರು. ಏ.೭ ತಾಲ್ಲೂಕಾ ಆರೋಗ್ಯ ಇಲಾಖೆಯ ವತಿಯಿಂದ ಸಾರ್ವಜನಿಕರು. ಗರ್ಭಿಣಿ ಹಾಗೂ ಬಾಣಾಂತಿಯ ಮಹಿಳೆಯರಿಗೆ ಮತದಾನ ಮಾಡುವ ಬಗ್ಗೆ ಜಾಗೃತಿಯನ್ನು ಮುಡಿಸಿ ಪ್ರತಿಜ್ಞೆ ವಿಧಿ ಯನ್ನು ತಾಲೂಕಾ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಯಾದ ಗೀತಾ ಹಿರೇಮಠ ಬೋಧಿಸಿದರು.
ಮೇ ೧೦ ರಂದು ನಡೆಯಲಿರುವ ರಾಜ್ಯ ವಿಧಾನ ಸಭೆಯ ಚುನಾವಣೆಯಲ್ಲಿ ತಪ್ಪದೆ ಎಲ್ಲರು ಮತಗಟ್ಟೆಗೆ ಹೋಗಿ ನಿಮ್ಮ ಅಮೂಲ್ಯ ವಾದ ಮತವನ್ನು ಚಲಾಯಿಸಬೇಕು ಮತದಾನ ಒಂದು. ಹಬ್ಬದಂತೆ ಆಚರಿಸಬೇಕು ಎಂದು ಅವರು ಮತದಾರರಿಗೆ ಅರಿವು ಮೂಡಿಸುವ ಕೆಲಸ ಮಾಡಿದರು.
ನಗರದ ವಾರ್ಡ್ ನಂ ೨೨ ಮಹಿಬೂಬ ಕಾಲೋನಿಯ ಅಂಗನವಾಡಿ ಕೇಂದ್ರದಲ್ಲಿ ಸಾರ್ವತ್ರಿಕ ಲಸಿಕೆ ಕಾರ್ಯಕ್ರಮ ಮೇಲ್ವಿಚಾರಣೆ ಹಾಗೂ ತಾಯಿ ಮತ್ತು ಮಕ್ಕಳ ಆರೋಗ್ಯ ಕುರಿತು ಆರೋಗ್ಯ ಶಿಕ್ಷಣ ಬಾಲ್ಯವಸ್ಥೆ ಕಾಯಿಲೆಗಳನ್ನು ತಡೆಗಟ್ಟಲು ಮಾಹಿತಿ ಶಿಕ್ಷಣ ಮತ್ತು ಸಂವಹನ ಕಾರ್ಯ ಕ್ರಮ ಮಾಡಿದ ನಂತರ ಇದೆ ಸಂದರ್ಭದಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಗೀತಾ ಹಿರೇಮಠ ಮಾಡಿದರು.
ಆರೋಗ್ಯ ಸಹಾಯಕಿ ತೇಜ. ಅಂಗನವಾಡಿ ಕಾರ್ಯಕರ್ತೆ ಯಮನಮ್ಮ. ಸಹಾಯಕಿ ಶರಣಮ್ಮ. ಆಶಾ ಮಾಲನಬಿ. ಹಾಗೂ ಬಾಣಾಂತಿಯರು ಗರ್ಭಿಣಿಯರು ಸೇರಿದಂತೆ ಸಾರ್ವಜನಿಕರರು ಕಾರ್ಯಕ್ರಮದಲ್ಲಿ ಬಾಗವಸೀದ್ಧರು.