ಆರೂವರೆ ತಿಂಗಳಲ್ಲಿ ಅತಿ ಕಡಿಮೆ ಸೋಂಕು ದಾಖಲು


ನವದೆಹಲಿ, ಜ. ೧೨- ದೇಶದಲ್ಲಿ ಕೊರೊನಾ ಸೋಂಕು ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ಕಳೆದ ೨೪ ಗಂಟೆಗಳಲ್ಲಿ ೧೨,೫೮೪ ಪ್ರಕರಣ ದಾಖಲಾಗಿದ್ದು ಕಳೆದ ಆರೂವರೆ ತಿಂಗಳಲ್ಲಿ ಅತಿ ಕಡಿಮೆ ಸೋಂಕು ಪ್ರಕರಣ ಇದಾಗಿದೆ.
ದೇಶದಲ್ಲಿ ಒಟ್ಟಾರೆ ಜನಸಂಖ್ಯೆ ೧ ಕೋಟಿ ೪ ಲಕ್ಷಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಸಾವನ್ನಪ್ಪಿದವರ ಪ್ರಮಾಣ ೧,೫೧,೩೨೭ಕ್ಕೆ ಏರಿಕೆಯಾಗಿದೆ ಇಂದು ಆರೋಗ್ಯ ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.ದೇಶದಲ್ಲಿ ಸೋಂಕಿನಿಂದ ಇದುವರೆಗೂ ೧ ಕೋಟಿಗೆ ೧ ಲಕ್ಷ ೧೧,೨೯೪ರಲ್ಲಿ ಗುಣಮುಖ
ರಾಗಿದ್ದಾರೆ. ಸೋಂಕಿನಿಂದ ಚೇತರಿಕೆ ಪ್ರಮಾಣ ಶೇಕಡ ೯೬.೪೩ ರಷ್ಟು ಇದೆ. ಸಾವಿನ ಪ್ರಮಾಣ ಶೇ.೧.೪೪ ರಷ್ಟು ದಾಖಲಾಗಿದೆ.
ಕಳೆದ ೨೪ ಗಂಟೆಗಳಲ್ಲಿ ೧೬೭ ಮಂದಿ ಮೃತಪಟ್ಟಿದ್ದು ಏಳೂವರೆ ತಿಂಗಳಲ್ಲಿ ಅತಿ ಕಡಿಮೆ ಸಾವಿನ ಪ್ರಕರಣ ಇದಾಗಿದೆ ಎಂದು ಸಚಿವಾಲಯ ತಿಳಿಸಿದೆ.
೨,೧೬ ಲಕ್ಷ ಸಕ್ರಿಯ ಪ್ರಕರಣ:
ದೇಶದಲ್ಲಿ ಸದ್ಯ ೨ ಲಕ್ಷ ೧೬,೫೫೮ ಸಕ್ರಿಯ ಪ್ರಕರಣಗಳಿವೆ. ದೇಶದಲ್ಲಿ ದಾಖಲಾಗಿರುವ ಒಟ್ಟಾರೆ ಸೋಂಕು ಪ್ರಕರಣಕ್ಕೆ ಹೋಲಿಸಿದರೆ ಪ್ರಮಾಣ ಶೇಕಡ ೨.೧೩ ರಷ್ಟಿದೆ..ಕಳೆದ ೨೪ ಗಂಟೆಗಳಲ್ಲಿ ದೇಶದಲ್ಲಿ ೬,೫೯,೨೦೯ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ. ಈ ಮೂಲಕ ದೇಶದಲ್ಲಿ ೧೮,೨೬,೫೨,೮೮೭ಕ್ಕೆ ಏರಿಕೆಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.
ಸೋಂಕು ಏರಿಕೆ ಗತಿ:
ದೇಶದಲ್ಲಿ ಆಗಸ್ಟ್ ೭ ರಲ್ಲಿ ೨೦ ಲಕ್ಷ ಸೋಂಕಿನ ಸಂಖ್ಯೆ ಇತ್ತು ಆಗಸ್ಟ್ ೨೩ರ ವೇಳಗೆ ೩೦ ಲಕ್ಷ, ಸೆಪ್ಟೆಂಬರ್ ೫ ಕ್ಕೆ ೪೦ ಲಕ್ಷ, ಸೆಪ್ಟೆಂಬರ್ ೧೬ ಕ್ಕೆ ೫೦ ಲಕ್ಷ, ಸೆಪ್ಟೆಂಬರ್ ೨೮ ಕ್ಕೆ ೬೦ ಲಕ್ಣ, ಅಕ್ಟೋಬರ್ ೧೧ಕ್ಕೆ ೭೦ ಲಕ್ಷ ,ಅಕ್ಟೋಬರ್ ೨೯ ಕ್ಕೆ ೮೦ ಲಕ್ಷ ,ನವೆಂಬರ್ ೨೦ ಕ್ಕೆ ೯೦ ಲಕ್ಷ, ಹಾಗು ಡಿಸೆಂಬರ್ ೧೯ ಕ್ಕೆ ೧ ಕೋಟಿ ದಾಟಿತ್ತು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.