`ಆರೂಢ ಕುಸುಮ’ ಕವನ ಸಂಕಲನ ಲೋಕಾರ್ಪಣೆಮಕ್ಕಳಲ್ಲಿ ಸಂಸ್ಕøತಿ, ಪರಂಪರೆ ತಿಳುವಳಿಕೆ ಮೂಡಿಸಲು ಕರೆ

ಹುಬ್ಬಳ್ಳಿ,ಆ.29: ಆಧುನಿಕ ಜಗತ್ತಿನ ಭರಾಟೆಯಲ್ಲಿ ಸಂಪ್ರದಾಯಗಳು ನಶಿಸುತ್ತಿವೆ. ಜಾನಪದ ಸಂಪ್ರದಾಯ ಮಾಯವಾಗುತ್ತಿದೆ ಎಂದು ಜನಪದ ವಿದ್ವಾಂಸ ರಾಮು ಮೂಲಗಿ ಬೇಸರ ವ್ಯಕ್ತಪಡಿಸಿದರು.
ನಗರದ ಶ್ರೀ ವಾಸುದೇವ ಸ್ವಾಮಿ ಉಜ್ಜಯನಿ ಮಠ ಆರೂಢ ಪ್ರತಿಷ್ಠಾನ (ರಿ) ಆರೂಡ ಆಶ್ರಮ' ನವ ಅಯೋಧ್ಯಾ ನಗರ ಹುಬ್ಬಳ್ಳಿ ಇವರ ಆಶ್ರಯದಲ್ಲಿ ನಡೆದ ಶ್ರಾವಣ ಜಾನಪದ ಮತ್ತುಆರೂಢ ಕುಸುಮ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತ ಕೃಷಿ ಪ್ರಧಾನವಾದ ದೇಶವಾಗಿದ್ದು, ಗ್ರಾಮಿಣ ಭಾಗದಲ್ಲಿ ಜಾನಪದ ಮೂಲಕ ಭಾವನೆಗಳು ವ್ಯಕ್ತವಾಗುತ್ತಿತ್ತು. ಅವಿಭಕ್ತ ಕುಟುಂಬಗಳಲ್ಲಿ ಇದು ಹೆಚ್ಚಾಗಿತ್ತು. ಇಂದು ಇದು ಕ್ರಮೇಣ ಮರೆಮಾಚುತ್ತಿದೆ. ಹಬ್ಬಗಳು ಭಾವೈಕ್ಯತೆಯ ಸಂಕೇತವಾಗಿದ್ದು, ಆಧುನಿಕ ಜಗತ್ತಿನ ಪ್ರಭಾವಕ್ಕೆ ಅವು ನಿಧಾನವಾಗಿ ಮರೆಮಾಚುತ್ತಿವೆ. ಆದರೆ ಅವು ಗಟ್ಟಿಯಾಗಿ ಎಲ್ಲರ ಮನಸ್ಸಿನಲ್ಲಿ ಉಳಿಯಬೇಕು. ಮಕ್ಕಳಿಗೆ ಪಾಲಕರು ನಮ್ಮ ಸಂಸ್ಕøತಿ ಹಾಗೂ ಪರಂಪರೆಯ ಬಗ್ಗೆ ತಿಳಿಸುವ ಮೂಲಕ ಅವುಗಳನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಜನಪದ ಹಾಡು ಹಾಡುವ ಮೂಲಕ ಅಂತರಾಳದ ಮಾತುಗಳನ್ನು ವ್ಯಕ್ತಪಡಿಸಿದರು.
ಶ್ರೀ ಸಿದ್ಧಾರೂಢ ಮಠ ಟ್ರಸ್ಟ್ ಕಮೀಟಿ ಕಾರ್ಯದರ್ಶಿ ಎಸ್.ಐ. ಕೊಳಕುರ ಮಾತನಾಡಿ, ನಮ್ಮ ಜಾನಪದ ಸಂಸ್ಕøತಿಯನ್ನು ಎಲ್ಲರೂ ಅರಿಯಬೇಕು. ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರದಾಗಿದೆ ಎಂದರು.
ಇದೇ ಸಂದರ್ಭದಲ್ಲಿ 1995 ರಿಂದ ಶ್ರೀ ಸಿದ್ಧಾರೂಢ ಸ್ವಾಮಿ ಮಠದ ಕೈಲಾಸ ಮಂಟಪದಲ್ಲಿ ಸಂಜೆ ನೆರವೇರಿಸುತ್ತಿರುವ ಭಕ್ತಿ ಸಂಗೀತ ಕಾರ್ಯಕ್ರಮ ವೇದಿಕೆಯ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ಸಂಗೀತಗಾರರು ಹಾಗೂ ಗಾಯಕರು ಮತ್ತು ಶ್ರೀ ವಾಸುದೇವ ಸ್ವಾಮಿ ಉಜ್ಜಯನಿ ಮಠ ಆರೂಢ ಪ್ರತಿಷ್ಠಾನ (ರಿ) ಆರೂಡ ಆಶ್ರಮ' ನವ ಅಯೋಧ್ಯಾ ನಗರ ಹುಬ್ಬಳ್ಳಿ ಇದರ ಸದಸ್ಯರಾದ ಸದಾನಂದ ಬೆಂಡಿಗೇರಿ ಅವರ ವಿರಚಿತಆರೂಢ ಕುಸುಮ’ ಕವನ ಸಂಕಲನ ಬಿಡುಗಡೆಗೊಳಿಸಿ ಲೋಕಾರ್ಪಣೆ ಮಾಡಲಾಯಿತು.
ಪುಸ್ತಕದ ಲೇಖಕರಾದ ಸದಾನಂದ ಬೆಂಡಿಗೇರಿ ಹಾಗೂ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ವಿಶ್ವನಾಥ ಹಿರೇಗೌಡರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯರಾದ ಶೀಲಾ ಮಂಜುನಾಥ ಕಾಟಕರ, ಪಿ.ಜಿ. ಹಿರೇಮಠ, ಪತ್ರಕರ್ತ ಈರಣ್ಣ ಪಾಳೇದ ಮತ್ತಿತರರು ಉಪಸ್ಥಿತರಿದ್ದರು.
ಭಾಗ್ಯಶ್ರಿ ಗಾಳಮ್ಮನವರ ತಂಡದಿಂದ ಜಾನಪದ ನೃತ್ಯ ಪ್ರದರ್ಶ ನಡೆಯಿತು. ಪ್ರತಿಷ್ಠಾನದ ಬಸವರಾಜ ಹೆರೂರ ಸ್ವಾಗತಿಸಿದರು. ಕಾರ್ಯದರ್ಶಿ ಗುರುಶಾಂತಪ್ಪ ಕಾರಿ ನಿರೂಪಿಸಿದರು. ಉಪಾಧ್ಯಕ್ಷ ಮಹಾಲಿಂಗಯ್ಯ ಹಂಚಿನಮಠ ವಂದಿಸಿದರು.