ಆರು ರಾಜ್ಯಗಳಲ್ಲಿ ಶೇ. 52 ರಷ್ಟು ಕೋಲ್ಡ್ ಚೈನ್

ನವದೆಹಲಿ, ಜ. ೪-ಭಾರತದ ಜನಸಂಖ್ಯೆಯ ಶೇ. ೩೩ ರಷ್ಟನ್ನು ಹೊಂದಿರುವ ಆರು ರಾಜ್ಯಗಳು ಶೇ. ೫೨ ರಷ್ಟು ಕೋಲ್ಡ್ ಚೈನ್ ಕೇಂದ್ರಗಳನ್ನು ಹೊಂದಿವೆ.
ತುರ್ತು ಬಳಕೆಗೆ ಅಧಿಕೃತವಾಗಿ ಅನುಮೋದನೆ ಪಡೆದ ನಂತರ ಮೊದಲ ಹಂತದ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಇಬ್ಬರು ಅಭ್ಯರ್ಥಿಗಳ ಮೇಲೆ ನಡೆಸಿದ ಪ್ರಯೋಗ ಕೊನೆಯ ಹಂತವನ್ನು ತಲುಪಿದ್ದು, ಲಸಿಕೆ ವಿತರಣೆ ಕಾರ್ಯವಿಧಾನ ಮತ್ತು ಮೂಲ ಸೌಕರ್ಯಗಳನ್ನು ಗಮನಹರಿಸಲಾಗಿದೆ. ಇದಕ್ಕೆ ಅಗತ್ಯವಿರುವ ಕೋಲ್ಡ್‌ಚೈನ ಪಾಯಿಂಟ್‌ಗಳು ಮತ್ತು ಸಲಕರಣೆಗಳ ನೆಟ್‌ವರ್ಕ್ ಸೃಷ್ಟಿಸಲಾಗಿದೆ.
ದೇಶದಲ್ಲಿ ೨೮,೯೩೨ ಕೋಲ್ಡ್‌ಚೈನ್ ಕೇಂದ್ರಗಳಿದ್ದು, ೮೫,೬೨೨ ಉಪಕರಣಗಳನ್ನು ವ್ಯವಸ್ಥೆಗೊಳಿಸಲಾಗಿದೆ ಎಂದು ಈ ಹಿಂದೆ ಕೇಂದ್ರ ಸಚಿವಾಲಯ ತಿಳಿಸಿತ್ತು. ರಾಜ್ಯವಾರು ಅಂಕಿಅಂಶಗಳ ಪ್ರಕಾರ ಭಾರತದ ಜನಸಂಖ್ಯೆಯ ೩ನೇ ಒಂದು ಭಾಗವನ್ನು ಹೊಂದಿರುವ ೬ ರಾಜ್ಯಗಳಿಂದ ಶೇ. ೫೨ಕ್ಕಿಂತ ಹೆಚ್ಚು ಕೋಲ್ಡ್‌ಚೈನ್ ಪಾಯಿಂಟ್‌ಗಳನ್ನು ಅಳವಡಿಸಲಾಗಿದ್ದು, ಶೇ. ೪೦ ರಷ್ಟು ಉಪಕರಣಗಳನ್ನು ಸಹ ವ್ಯವಸ್ಥೆಗೊಳಿಸಲಾಗಿದೆ.
ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ರಾಜಸ್ತಾನ, ಗುಜರಾತ್, ಮತ್ತು ಆಂಧ್ರಪ್ರದೇಶಗಳಲ್ಲಿ ಒಟ್ಟು ೧೫,೦೭೨ ಕೋಲ್ಡ್‌ಚೈನ್ ಪಾಯಿಂಟ್‌ಗಳು ಮತ್ತು ೩೩,೧೧೨ ಅಗತ್ಯ ಉಪಕರಣಗಳನ್ನು ಅಳವಡಿಸಲಾಗಿದ್ದು, ಜನಸಂಖ್ಯೆ ಅನುಗುಣವಾಗಿ ಲಸಿಕೆ ಹಾಕಲು ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದ್ದು, ಭಾರತದ ಒಟ್ಟು ಜನಸಂಖ್ಯೆಯ ೧೭೭ ಕೋಟಿ ಜನರಲ್ಲಿ ೪೬.೭ಕೋಟಿ ಜನಸಂಖ್ಯೆ ಹೊಂದಿದೆ.
ಉಳಿದಂತೆ ಕೇಂದ್ರ ಮತ್ತು ರಾಜ್ಯಗಳು ಕೋಲ್ಡ್ ಚೈನ್ ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸುತ್ತಿದ್ದು, ಅಧಿಕಾರಿಗಳು ವ್ಯಾಕ್ಸಿನ್ ಅಭಿಯಾನ ಸುಗಮಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿವಿಧ ಶೇಖರಣಾ ತಾಪಮಾನ ವ್ಯಾಪ್ತಿಯಲ್ಲಿ ಕೋವಿಡ್ ಲಸಿಕೆ ಹೊಂದಿಕೊಳ್ಳುವ ಸ್ವರೂಪವನ್ನು ನಿರೀಕ್ಷಿಸುವುದು ಹಾಗೂ ಭಾರತ ಸರ್ಕಾರ ಹೆಚ್ಚುವರಿ ಕೋಲ್ಡ್ ಚೈನ್ ಉಪಕರಣಗಳ ಪೂರೈಸುವ ಯೋಜನೆಗಳನ್ನು ಈಗಾಗಲೇ ಜಾರಿಯಲ್ಲಿದೆ ಎಂದು ಕೇಂದ್ರ ಸಚಿವಾಲಯದ ವ್ಯಾಕ್ಸಿನೆಷನ್ ವಿಭಾಗ ತಿಳಿಸಿದೆ.
ಕೋಲ್ಡ್ ಚೈನ್ ವ್ಯವಸ್ಥೆಯ ವಿಶ್ಲೇಷಣೆಯನ್ನು ಈಗಾಗಲೇ ಪೂರ್ಣಗೊಳಿಸಿದ್ದು, ಅಗತ್ಯವಿರುವ ಕಡೆ ಹೆಚ್ಚುವರಿ ಕೋಲ್ಡ್ ಚೈನ್ ಹಾಗೂ ಉಪಕರಣಗಳನ್ನು ಪೂರೈಸುವ ಉದ್ದೇಶ ಹೊಂದಲಾಗಿದೆ.
ಭಾರತದ ಕರ್ನಾಟಕ ರಾಜ್ಯದ ಎರಡನೇ ಅತಿ ದೊಡ್ಡ ಕೋಲ್ಡ್‌ಚೈನ್ ಕೇಂದ್ರಗಳನ್ನು ಹೊಂದಿದ್ದು, ಕೇಂದ್ರದಿಂದ ಹೆಚ್ಚುವರಿಯಾಗಿ ೬೪ ದೊಡ್ಡ ಐಸ್‌ಲೈನ್ಡ್ ರಿಫ್ರಿಜಿರೇಟರ್‌ಗಳನ್ನು ಪಡೆದುಕೊಂಡಿದೆ. ೮೬೬ ಹೆಚ್ಚುವರಿ ಐಎಲ್‌ಆರ್‌ಗಳು ಮತ್ತು ೨೮ ಡೀಪ್ ಫ್ರೀಜರ್ ಪೈಪ್‌ಲೈನ್‌ಗಳನ್ನು ಹೊಂದಿದೆ.
ಆರೋಗ್ಯ ಮತ್ತು ಕುಟುಂಬದ ಸಚಿವಾಲಯ ಮಾಹಿತಿಯನ್ವಯ ಭಾರತ ವಿವಿಧ ರೀತಿಯ ಶಿಥೀಲ ಉಪಕರಣಗಳನ್ನು ೫.೨ ದಶಲಕ್ಷದಿಂದ ೧೧ ದಶಲಕ್ಷಕ್ಕೆ ಸಾರ್ವತ್ರಿಕ ರೋಗ ನಿರೋಧಕ ಕಾರ್ಯಕ್ರಮದಡಿ ಹೆಚ್ಚಿಸುವ ಅಗತ್ಯವಿದೆ.