ಆರು ಜನ ಪತ್ರಕರ್ತರಿಗೆ “ಸತ್ಯಕಾಮ ಸಮ್ಮಾನ್”

ಕಲಬುರಗಿ,ಜೂ.28: ಮಾಧ್ಯಮ ಅಕಾಡೆಮಿ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಶ್ರೀ ಪಿ.ಎಂ. ಮಣ್ಣೂರ ಅವರ ಜನ್ಮದಿನ ಹಾಗೂ ಸತ್ಯಕಾಮ ದೈನಿಕದ 50 ನೇ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ “ಸತ್ಯಕಾಮ ಸಮ್ಮಾನ್” ಪುರಸ್ಕಾರಕ್ಕೆ ಆರು ಜನ ಹಿರಿಯ ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ‌ ಎಂದು ಪತ್ರಿಕೆಯ ಸಂಪಾದಕರಾದ ಆನಂದ್ ಪಿ.ಎಂ. ತಿಳಿಸಿದ್ದಾರೆ.

ಸತ್ಯಕಾಮ ಪತ್ರಿಕೆಯ ಸಂಸ್ಥಾಪಕ ಸಂಪಾದಕರಾದ ಶ್ರೀ ಪಿ.ಎಂ. ಮಣ್ಣೂರ ಅವರ 75 ನೆಯ ಹುಟ್ಟು ಹಬ್ಬದ ಸಂಭ್ರಮದ ನಿಮಿತ್ಯವಾಗಿ ಆರು ಜನ ಹಿರಿಯ ಪತ್ರಕರ್ತರನ್ನು ಸತ್ಯಕಾಮ ಸಮ್ಮಾನ್ ಪುರಸ್ಕಾರವನ್ನು ನೀಡಿ ಗೌರವಿಸಲಾಗುತ್ತಿದ್ದು, ಜುಲೈ ಒಂದರಂದು ಈ ಸಮಾರಂಭವು ಕಲ್ಬುರ್ಗಿ ನಗರದ ಚೇಂಬರ್ ಆಫ್ ಕಾಮರ್ಸ್ ನ ಸಭಾಂಗಣದಲ್ಲಿ ಸಂಜೆ 5:00 ಗಂಟೆಗೆ ಆಯೋಜಿಸಲಾಗಿದೆ.

ಹಿರಿಯ ಪತ್ರಕರ್ತರಾದ ಶ್ರೀಕಾಂತಚಾರ್ಯ ಮಣ್ಣೂರ, ಎಸ್ ಬಿ ಜೋಶಿ, ಶೀಲಾ ತಿವಾರಿ, ಕೇದಾರಲಿಂಗಯ್ಯ ಹಿರೇಮಠ, ಮೊಯಿನೋದ್ದೀನ್ ಪಾಶಾ ಹಾಗೂ ಮಹಿಪಾಲರೆಡ್ಡಿ ಸೇಡಂ ಇವರಿಗೆ ಸತ್ಯಕಾಮ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಸತ್ಯಕಾಮ ಪತ್ರಿಕೆಯ 50ನೇ ವರ್ಷಾಚರಣೆಯ ಸಂಭ್ರಮದಲ್ಲಿರುವ ಹಿನ್ನೆಲೆಯಲ್ಲಿ ಈ ಪುರಸ್ಕಾರ ಪ್ರಸಕ್ತ ವರ್ಷದಿಂದ ಆರಂಭಿಸಲಾಗುತ್ತಿದೆ ಎಂದು ಆನಂದ್ ಪಿ.ಎಂ. ತಿಳಿಸಿದ್ದಾರೆ.