ಆರು ಆಕ್ಸಿಜನ್ ಕಾನ್ಸನ್‌ಟ್ರೇಟ್ ದೇಣಿಗೆ; ಭಾರತೀಯ ಜೈನ ಸಂಘಟನೆ ಪೂರೈಕೆ

ದೇವದುರ್ಗ.ಜೂ.೦೪-ಕರೊನಾ ಸೋಂಕು ತಗುಲಿ ಆಕ್ಸಿಜನ್ ಕೊರತೆಯಿಂದ ಬಳಲುವ ರೋಗಿಗಳ ಅನುಕೂಲಕ್ಕಾಗಿ ಭಾರತೀಯ ಜೈನ ಸಂಘಟನೆ ಹಾಗೂ ಪ್ರಭು ಗ್ಯಾಸ್ ಡಿಸ್ಟ್ರಿಬ್ಯೂಟರ್‌ನಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಆಕ್ಸಿಜನ್ ಕಾನ್ಸನ್‌ಟ್ರೇಟ್ ಆರು ಯಂತ್ರಗಳನ್ನು ಗುರುವಾರ ನೀಡಲಾಯಿತು.
ಪ್ರತಿ ಆಕ್ಸಿಜನ್ ಕಾನ್ಸನ್‌ಟ್ರೇಟ್ ೨೦ ಲೀಟರ್ ಆಕ್ಸಿಜನ್ ಸಾಮರ್ಥ್ಯ ಹೊಂದಿದ್ದು, ತೀವ್ರ ಉಸಿರಾಟದ ತೊಂದರೆ ಇರುವವ ರೋಗಿಗಳಿಗೆ ಬಳಕೆ ಮಾಡಬಹುದು. ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ಆಕ್ಸಿಜನ್ ಕಾನ್ಸನ್‌ಟ್ರೇಟ್ ಉಪಕರಣ ನೀಡಿದ್ದು, ದೇವದುರ್ಗ ತಾಲೂಕಿಗೆ ೬ ಉಪಕರಣ ನೀಡಲಾಗಿದೆ.
ಯಾವುದೇ ಸೋಂಕಿತರು ಇದರ ಲಾಭ ಪಡೆಯಬಹುದಾಗಿದ್ದು, ವೈದ್ಯರ ಶಿಫಾರಸ್ಸು ಅಗತ್ಯವಾಗಿದೆ. ಕೋವಿಡ್ ಕೇರ್ ಸೆಂಟರ್ ಅಥವಾ ಮನೆಯಲ್ಲೇ ಐಸೋಲೆಷನ್ ಆದ ರೋಗಿಗಳು ವೈದ್ಯರ ಅನುಮತಿ ಮೆರೆಗೆ ತಮ್ಮ ಮನೆಯಲ್ಲೇ ಇದನ್ನು ಬಳಕೆ ಮಾಡಬಹುದು ಎಂದು ಸಂಘಟಕರು ತಿಳಿಸಿದ್ದಾರೆ.
ಈಸಂದರ್ಭದಲ್ಲಿ ಸಂಘಟನೆ ಮುಖಂಡರಾದ ಅಜೀತ್ ರಾಜ್ ಶೇಟ್, ವಿಜಯರಾಜ್, ಶಿವು, ಪ್ರಭು ಡಿಸ್ಟ್ರಿಬ್ಯೂಟರ್‌ನ ನಾಗರಾಜ ವೆಂಕಟಾಪುರ, ಬಸವರಾಜ ವೆಂಕಟಾಪುರ ಬಸವರಾಜ ಕೊಪ್ಪರು ಇತರರಿದ್ದರು.