`ಆರಾಮ್ ಅರವಿಂದ್ ಸ್ವಾಮಿ’ ಗೆ ಅರ್ಜುನ್ ಜನ್ಯ ಸಂಗೀತ

ನಟ ಅನೀಶ್ ತೇಜೇಶ್ವರ್, ನಿರ್ದೇಶಕ ಅಭಿಷೇಕ್ ಶೆಟ್ಟಿ ಕಾಂಬಿನೇಶನ್ ನಲ್ಲಿ ಮೂಡಿ ಬರ್ತಿರುವ `ಆರಾಮ್ ಅರವಿಂದ್ ಸ್ವಾಮಿ’ ಚಿತ್ರಕ್ಕೆ  ಅರ್ಜುನ್ ಜನ್ಯ ಸಂಗೀತ ನೀಡಲು ತಂಡದ ಜೊತೆ ಸೇರಿಕೊಂಡಿದ್ದಾರೆ.

ರೋಮ್ಯಾಂಟಿಕ್ ಕಾಮಿಡಿ ಸಬ್ಜೆಕ್ಟ್ ಒಳಗೊಂಡ ಚಿತ್ರದಲ್ಲಿ ಅನೀಶ್ ತೇಜೇಶ್ವರ್ ನಟಿಸುತ್ತಿದ್ದಾರೆ. ಚಿತ್ರತಂಡ ಅಧೀಕೃತವಾಗಿ ಮಾಹಿತಿ ಹಂಚಿಕೊಂಡಿದ್ದು, ಅರ್ಜುನ್ ಜನ್ಯ ಪ್ರವೇಶದಿಮದ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.

`ನಮ್ ಗಣಿ ಬಿಕಾಂ ಪಾಸ್, `ಗಜಾನನ ಅಂಡ್ ಗ್ಯಾಂಗ್’ ಚಿತ್ರಗಳಿಂದ ಮೂಲಕ ಭರವಸೆ ಮೂಡಿಸಿರುವ ಅಭಿಷೇಕ್ ಶೆಟ್ಟಿ  ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರದಲ್ಲಿ  ಅನೀಶ್ ತೇಜೇಶ್ವರ್‍ಗೆ  ಮಿಲನ ನಾಗರಾಜ್ ಹಾಗೂ ಹೃತಿಕ ಶ್ರೀನಿವಾಸ್ ನಾಯಕಿಯರು.

ಶ್ರೀಕಾಂತ್ ಪ್ರಸನ್ನ, ` ಪ್ರಶಾಂತ್ ರೆಡ್ಡಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಬೆಂಗಳೂರು ಸುತ್ತಮುತ್ತ ಎರಡು ಹಂತದ ಚಿತ್ರೀಕರಣ ಪೂರ್ಣಗೊಂಡಿದೆ, ಮೂರನೇ ಹಂತವನ್ನು ಕೇರಳದಲ್ಲಿ ಸೆರೆ ಹಿಡಿಯಲು ಉದ್ದೇಶಹೊಂದಿದೆ. ಚಿತ್ರಕ್ಕೆ ಸಾಗರ್ ಛಾಯಾಗ್ರಹಣ, ಉಮೇಶ್ ಸಂಕಲನವಿದೆ.