ಆರಾಧ್ಯಾ ಬಚ್ಚನ್‌ಳ ೯ ರೂಪ

ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ತನ್ನ ಮೊಮ್ಮಗಳು ಆರಾಧ್ಯಾ ಬಚ್ಚನ್ ಳ ಹುಟ್ಟುಹಬ್ಬಕ್ಕೆ ಆಕೆಯ ೯ ಫೋಟೋ ಗಳನ್ನು ಅಭಿಮಾನಿಗಳ ಜೊತೆ ಹಂಚಿ ಕೊಂಡಿದ್ದಾರೆ. ಆರಾಧ್ಯಾಳಿಗೆ ಈಗ ಒಂಬತ್ತು ವರ್ಷ. ಪ್ರತಿ ವರ್ಷ ಆರಾಧ್ಯಾ ಹೇಗೆ ಬೆಳೆದಳು ಎಂದು ೨೦೧೨ರಿಂದ ೨೦೨೦ರ ತನಕದ ಆರಾಧ್ಯಾಳ ಜನ್ಮದಿನ ಆಚರಣೆಯ ಫೋಟೋಗಳ ಒಂದು ಕೊಲಾಜ್ ನ್ನು ತಾತ ಅಮಿತಾಭ್ ಹಂಚಿಕೊಂಡಿದ್ದಾರೆ. ನವಂಬರ್ ೧೬ ಆರಾಧ್ಯಾಳ ಜನ್ಮದಿನಕ್ಕೆ ಅಭಿಮಾನಿಗಳು ಶುಭಾಶಯ ನೀಡಿದ್ದಾರೆ. ಕೊರೊನಾ ಕಿರಿಕಿರಿಯ ಮೊದಲು ಪ್ರತಿವರ್ಷ ಆರಾಧ್ಯಾಳ ಬರ್ತಡೇಗೆ ಬಚ್ಚನ್ ಪರಿವಾರವು ಇಂಡಸ್ಟ್ರಿಯ ಗೆಳೆಯರ ಹಾಗೂ ಸ್ಟಾರ್ಸ್ ಕಿಡ್ಸ್ ಗಳ ಜೊತೆ ಭವ್ಯ ಪಾರ್ಟಿಯನ್ನು ಆಯೋಜಿಸುತ್ತಿದ್ದರು.


ಆದರೆ ಈ ಸಲ ದೀಪಾವಳಿ ಪಾರ್ಟಿ ಮತ್ತು ಆರಾಧ್ಯಾಳ ಬರ್ತಡೇ ಪಾರ್ಟಿ ಯನ್ನು ಸರಳವಾಗಿ ಆಚರಿಸುವುದಾಗಿ ತಿಳಿಸಿದ್ದಾರೆ. ಕಳೆದ ಸಲ ’ಗಾರ್ಡನ್ ನಲ್ಲಿ ಪಾರ್ಟಿ ಇರಿಸಿದ್ದರು. ಶಾರುಖ್, ಕರಣ್ ಜೋಹರ್, ಜೆನಿಲಿಯಾ, ರಿತೇಶ್…. ಮೊದಲಾದವರೆಲ್ಲ ಪಾರ್ಟಿಗೆ ಬಂದಿದ್ದರು.


ಈ ವರ್ಷ ಅಭಿಷೇಕ್ ಬಚ್ಚನ್ ಅವರ ಸಹೋದರಿ ಶ್ವೇತಾ ನಂದಾ ಅವರ ಅತ್ತೆ ನೀತೂ ನಂದಾ ನಿಧನರಾಗಿದ್ದರು. ನೀತೂ ನಂದಾ ಅವರು ನಟ ರಿಷಿ ಕಪೂರ್ ರ ಸಹೋದರಿ. ಇಬ್ಬರೂ ಈ ವರ್ಷ ನಿಧನ ರಾಗಿದ್ದಾರೆ .ಹಾಗಿರುವಾಗ ಪಾರ್ಟಿ ಆಚ ರಿಸಲು ಬಚ್ಚನ್ ಪರಿವಾರಕ್ಕೆ ಖುಷಿ ಇಲ್ಲವಂತೆ.