ಆರಾಧನ ಸಮಿತಿಗೆ ಪೂಜಾರ್ ಸಿದ್ಧಪ್ಪ ಆಯ್ಕೆ

ಹಗರಿಬೊಮ್ಮನಹಳ್ಳಿ:ಏ.01 ತಾಲೂಕಿನ ಆರಾಧನ ಸಮಿತಿಗೆ ಚಿಮ್ನಳ್ಳಿಯ ಪೂಜಾರ್ ಸಿದ್ಧಪ್ಪರನ್ನು ಸದಸ್ಯರನ್ನಾಗಿ ಆಯ್ಕೆಮಾಡಿ ಆದೇಶ ಹೊರಡಿಸಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆಯಿಂದ ರಚಿಸಲ್ಪಡುವ ಆರಾಧನ ಸಮಿತಿಗೆ 2020-21ನೇ ಸಾಲಿನ ಸಮಿತಿ ಸದಸ್ಯರನ್ನು ಆಯ್ಕೆಮಾಡಲಾಗಿದ್ದು, ತಾಲೂಕು ಸಮಿತಿಗೆ ಪೂಜಾರ್ ಸಿದ್ಧಪ್ಪರನ್ನು ಆಯ್ಕೆಮಾಡಲಾಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆಯಿಂದ ಆದೇಶ ಹೊರಡಿಸಿದೆ.
ಈ ಕುರಿತು ಆರಾಧನ ಸಮಿತಿ ಸದಸ್ಯ ಪೂಜಾರ್ ಸಿದ್ಧಪ್ಪ ಮಾತನಾಡಿ, ಧಾರ್ಮಿಕ ದತ್ತಿ ಇಲಾಖೆಯಲ್ಲಿ ನೋಂದಾಣಿ ಮಾಡಿಕೊಂಡು ಬಂದಿರುವ ದೇಗುಲಗಳು ಜೀರ್ಣೋದ್ಧಾರವಾಗಬೇಕು, ಐತಿಹಾಸಿಕ ದೇಗುಲಗಳಿಗೆ ಮೂಲಭೂತ ಸೌಲಭ್ಯಗಳನ್ನು ನೀಡಲೇಕು ಆ ನಿಟ್ಟಿನಲ್ಲಿ ನಾನು ಧಾರ್ಮಿಕ ದತ್ತಿ ಇಲಾಖೆಯ ಗಮನಕ್ಕೆ ತರಲು ಪ್ರಯತ್ನಿಸುತ್ತೇನೆ ಎಂದ ಅವರು, ನನ್ನನ್ನು ಸೇರಿದಂತೆ ಪಿ.ಎಂ.ನಾಗಯ್ಯ, ಮಾಧವಿ ಅನಿಲ್‍ನಾಥ ಚಿದ್ರಿ, ಜಿ.ಮಲ್ಲಿಕಾರ್ಜುನರನ್ನು ಸಹ ಆರಾಧನ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ಧಾರ್ಮಿಕ ಇಲಾಖೆಯ ಆರಾಧನ ಸಮಿತಿಗೆ ಸದಸ್ಯರನ್ನು ನೇಮಕ ಮಾಡಿದ ಇಲಾಖೆಯ ಎಲ್ಲಾ ಆಡಳಿತ ವರ್ಗಕ್ಕೂ ಹಾಗೂ ಇದಕ್ಕೆ ಕಾರಣರಾದ ಕ್ಷೇತ್ರದ ಮಾಜಿ ಶಾಸಕ ನೇಮಿರಾಜ್‍ನಾಯ್ಕ್ ಸೇರಿದಂತೆ ಪಕ್ಷದ ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರು ಹಾಗೂ ಹಿರಿಯ ಮುಖಂಡರು, ಕಾರ್ಯಕರ್ತರಿಗೂ ಅಭಿನಂದನೆಗಳು ಎಂದರು.