ಆರಾಧನಾ ಕಾಲೇಜಿಗೆ ಉತ್ತಮ ಫಲಿತಾಂಶ

ಕಲಬುರಗಿ :ಎ.23:ನಗರದ ಶಹಾಬಾಜರದಲ್ಲಿರುವ ಆರಾಧನಾ ಪದವಿ ಪೂರ್ವ ಕಾಲೇಜಿನ 2023ನೇ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆಂದು ಕಾಲೇಜಿನ ಪ್ರಾಚಾರ್ಯರಾದ ಶ್ರೀ ಚೇತನ ಕುಮಾರ ಗಾಂಗಜಿ ತಿಳಿಸಿದ್ದಾರೆ.
62 ವಿದ್ಯಾರ್ಥಿಗಳು ಅಗ್ರಶ್ರೇಣಿಯಲ್ಲಿ,157 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ,71 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ,42 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕುಮಾರಿ ಸ್ವಾತಿ ಶಾಲಗಾರ 97%, ಕುಮಾರಿ ವೈಷ್ಣವಿ ಢಗೆ 97%, ಕುಮಾರಿ ಮಂಜುಶ್ರೀ ದರ್ಬಿ 96%, ಮಾರಿ ಸುಷ್ಮಾ ಕಿಶನ್ 96%, ಕುಮಾರಿ ಮೀನಾಕ್ಷಿ 96%, ಕುಮಾರ ಪ್ರವೀಣ ಶಿವಶಂಕರ 95%, ಕುಮಾರಿ ಮಮತಾ 95%, ಕುಮಾರ ಕೇದಾರ ಗೌಳಿ 95%, ಕುಮಾರ ಪ್ರಥಮೇಶ ಕಮಲಾಪುರೆ 95% ಉತ್ತಮ ಫಲಿತಾಂಶ ಪಡೆದಿದ್ದು ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಚೇತನ ಕುಮಾರ ಗಾಂಗಜಿ, ನಿರ್ದೇಶಕರಾದ ರಾಜಕುಮಾರ ಗಾಂಗಜಿ, ಆಡಳಿತ ಅಧಿಕಾರಿ ಶ್ರೀ ಭೀಮರಾವ ಪಾಟೀಲ, ಕಲಾವಿಭಾಗದ ಶ್ರೀ ಕಾಶಿನಾಥ ಪಾಟೀಲ, ವಾಣಿಜ್ಯ ವಿಭಾಗದ ಶ್ರೀಮತಿ ಗಾಯತ್ರಿ ಪಾಟೀಲ ಹಾಗೂ ಕಾಲೇಜಿನ ಉಪನ್ಯಾಸಕ ವರ್ಗದವರು ಬೋಧಕೇತರ ಸಿಬ್ಬಂದಿ ಪಾಲಕರು ಮತ್ತು ವಿದ್ಯಾರ್ಥಿಗಳು ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ.