ಆರನೇ ದಿನಕ್ಕೆ ಕಾಲಿಟ್ಟ ಶ್ರೀರಾಮ ಸೇನೆ ಧರಣಿ

ಜೇವರ್ಗಿ:ನ.14: ಮರಳು ಸೇರಿದಂತೆ ಅನೇಕ ಪ್ರಮುಖ ಬೇಡಿಕೆಗಳ ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಶ್ರೀ ರಾಮ ಸೇನೆಯ ತಾಲ್ಲೂಕು ಘಟಕ ಹಮ್ಮಿಕೊಂಡ ಅನಿರ್ದಿಷ್ಟ ಧರಣಿಗೆ ಇಂದಿಗೆ ಆರನೇ ದಿನಕ್ಕೆ ಕಾಲಿಟ್ಟಿದೆ

ಪಟ್ಟಣದ ಮಿನಿ ವಿಧಾನಸೌದದ ಮುಂಭಾಗ ಶ್ರೀ ರಾಮ ಸೇನಾ ಸಂಘಟನೆಯ ಕಾರ್ಯಕರ್ತರು ಸೋಮವಾರಿಂದ ಅನಿರ್ದಿಷ್ಟ ಧರಣಿ ಹಮ್ಮಿಕೊಂಡಿದೆ..ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನಲ್ಲಿ ಇರುವ ಏಕೈಕ ಜೀವ ನಾಡಿಯೇ ಈ ನಮ್ಮ ಭೀಮಾ ನದಿ. ಇದಕ್ಕೆ ಮರಳು ಚೊರರಿಗೆ ನಗುವಿನ ನಯನ ತೊರಿದರೇ, ಭೀಮಾ ನದಿ ರಕ್ಷಕರ ನಯನದ ವಕ್ರ ದೃಷ್ಟಿಗೆ ಗುರಿಯಾಗಿದ್ದಾರೆ. ಸಂಬಂಧಪಟ್ಟ ಇಲಾಖೆಗೆ ಸೂಚಿಸಲು ಇವರಿಗೇನು ದಾಡಿ ಎಂದು ಪ್ರತಿಭಟನಾ ನಿರತರು ಕೆಂಡ ಕಾರಿದರು.

ಶ್ರೀ ರಾಮ ಸೇನೆಯ ಕಾರ್ಯಕರ್ತರು , ಈ ಕೂಡಲೇ ಹುಲ್ಲುರ, ಮದರಿ, ಯನಗುಂಟಿ, ನರಿಬೋಳ, ಇಟಗಾ,ನೆಲೋಗಿ, ಬೊಸಗಾ ಸೇರಿದಂತೆ ಇನ್ನೂ ಅನೇಕ ಭೀಮಾ ನದಿಯ ದಡದಲ್ಲಿರುವ ಗ್ರಾಮಗಳಲ್ಲಿ ಮರಳು ಮಾಫಿಯಾ ತಾಂಡವ ವಾಡುತ್ತಿದೆ.ಇದಕ್ಕೆ ಕಡಿವಾಣ ಹಾಕಬೇಕು.ಹುಲ್ಲುರ ಗ್ರಾಮದಲ್ಲಿ ಅನಧಿಕೃತವಾಗಿ ಮರಳು ಸಂಗ್ರಹಿಸಿರುವವರ ಮೇಲೆ ಸಹಾಯಕ ಆಯುಕ್ತರ ಆದೇಶದಂತೆ ಪ್ರಕರಣ ದಾಖಲಿಸಬೇಕು ಅಲ್ಲಿಯ ವರೆಗೂ ನಮ್ಮ ಧರಣಿ ವಾಪಸ್ ಪಡೆದು ಕೊಳ್ಳುವ ಮಾತೆ ಇಲ್ಲ ಎಂದು ಒಕ್ಕೂರಿನಿಂದ ಹೇಳಿದರು.

ಅಲ್ಲದೇ,ಜೇವರ್ಗಿ ಪಟ್ಟಣದ ಸಜ್ಜನ ಕಲ್ಯಾಣ ಮಂಟಪದ ರಸ್ತೆಯಲ್ಲಿ ಇರುವ ಅನಧಿಕೃತ ಮಾಂಸ ಮಾರಾಟ ಮಳಿಗೆಗಳು ತೆರವು, ಅಂದೋಲಾ,ಕೆಲ್ಲೂರ ರಸ್ತೆ ಮಾಡಿದ ಎರಡೆ ತಿಂಗಳಲ್ಲಿ ಸಂಪೂರ್ಣ ಹದಗೆಟ್ಟಿದ್ದು,ಸಂಬಂಧಿಸಿದ ಅಧಿಕಾರಿಯ ವಿರುದ್ಧ ಕ್ರಮಕೈಗೊಳ್ಳಬೇಕು.ದೇವದುರ್ಗದಿಂದ ಓವರ ಲೊಡ ಮರಳು ಸಾಗಿಸುವ ವಾಹನಗಳ ವಿರುಧ್ದ ಕ್ರಮಕ್ಕಾಗಿ ಸೇರಿದಂತೆ ಇನ್ನೂ ಅನೇಕ ಬೇಡಿಕೆಗಳನ್ನು ಈ ಕೂಡಲೇ ಈಡೇರಿಸಬೇಕು ಎಂದು ಜೇವರ್ಗಿ ತಾಲ್ಲೂಕು ಶ್ರೀ ರಾಮ ಸೇನಾದ ಕಾರ್ಯಕರ್ತರು ಅನಿರ್ದಿಷ್ಟ ಧರಣಿ ಹಮ್ಮಿಕೊಂಡಿದೆ.

ಅನಿರ್ದಿಷ್ಟ ಧರಣಿಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಮುರಳಿದರ ಧರಣಿ ಸ್ಥಳಕ್ಕೆ ಆಗಮಿಸಿ, ನಮ್ಮ ಇಲಾಖೆಗೆ ಸಂಬಂಧಿಸಿದ ಕಾರ್ಯವನ್ನು ಈ ಕೂಡಲೇ ಕೈಗೊಳ್ಳುವೆ ಎಂದು ಹೇಳಿ, ಆ ಕ್ಷಣದಿಂದಲೆ ಅಂದೋಲಾ ಕೆಲ್ಲೂರ ರಸ್ತೆ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ. ಎಂದು ಶ್ರೀ ರಾಮ ಸೇನೆಯ ತಾಲ್ಲೂಕು ಅಧ್ಯಕ್ಷರಾದ ನಿಂಗಣ್ಣಗೌಡ ಮಾಲಿ ಪಾಟೀಲ್ ರಾಸಣಗಿರವರು ಹೇಳಿದರು.

ತಹಸೀಲ್ದಾರ ವಿನಯ ಕುಮಾರ ಪಾಟೀಲ್ ಭೇಟಿ ನೀಡಿ, ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡುವೇ ಧರಣಿ ಹಿಂದಕ್ಕೆ ಪಡೆದುಕೊಳ್ಳಿ ಎಂದು ಮನವಿ ಮಾಡಿದ್ದಾರೆ ಎಂದು ಧರಣಿ ನಿರತರು ಹೇಳಿದರು. ಆದರೆ, ಧರಣಿ ನಿರತ ಕಾರ್ಯಕರ್ತರು ಸ್ಥಳಕ್ಕೆ ಸಹಾಯಕ ಆಯುಕ್ತರು ಹಾಗೂ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಧರಣಿ ವಾಪಸ್ ಪಡೆಯುವುದಿಲ್ಲ ಎಂದರು

ಈ ಅನಿರ್ದಿಷ್ಟ ಧರಣಿ ಸತ್ಯಾಗ್ರಹದಲ್ಲಿ ಅಧ್ಯಕ್ಷರಾದ ನಿಂಗಣ್ಣಗೌಡ ಮಾಲಿ ಪಾಟೀಲ್ ರಾಸಣಗಿ, ಶಹಪೂರ ತಾಲೂಕಿನ ಅಧ್ಯಕ್ಷರಾದ ಶಿವು ಶಹಪೂರ,ಭಾಜಪ ಪಕ್ಷದ ಯುವ ಮುಖಂಡರಾದ ಅಂಬರೀಶ ರಾಠೋಡ, ಕಾರ್ಯಾಧ್ಯಕ್ಷರಾದ ಈಶ್ವರ ಹಿಪ್ಪರಗಿ, ಮಲ್ಲಣ್ಣಗೌಡ ಮಾಲಿ ಪಾಟೀಲ್, ಸುನಿಲ್ ಎಚ್ ಗುತ್ತೆದಾರ, ಸಿದ್ದು ಪಾಟೀಲ್ ಮಾವನೂರ, ನಾಗರಾಜ ಮಾಲಿಪಾಟೀಲ್, ರಾಜಶೇಖರ ಗುಡೂರ, ವಿಶ್ವನಾಥ ಪಾಟೀಲ್ ಹಳ್ಳಿ, ಚೇತನ ಗುತ್ತೆದಾರ, ಪವನ ಗುತ್ತೆದಾರ, ಸುರೇಶ್ ರಾಂಪೂರ ಸೇರಿದಂತೆ ಅನೇಕರು ಇದ್ದರು.