
ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು,ಸ.15: ಪಟ್ಟಣದ ಮಿನಿ ವಿಧಾನಸೌಧ ಮುಂಭಾಗದಲ್ಲಿ ಇಂದು ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ನಿಂದ ಒಂದು ದಿನದ ಧರಣಿ ನಡೆಸಲಾಯಿತು.
ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ಸಿನ ಪ್ರಮುಖ ನಾಯಕಿ ಶ್ರೀಮತಿ ಪ್ರಿಯಾಂಕಾ ಗಾಂಧಿ ಬೆಳಗಾವಿ ಜಿಲ್ಲೆಯ ಖಾನಾಪೂರದಲ್ಲಿ ಅಂಗನವಾಡಿ, ಬಿಸಿಯೂಟ ಮತ್ತು ಆಶಾ ಕಾರ್ಯಕರ್ತೆಯರಿಗೆ ಸರ್ಕಾರದ ಆರನೇ ಗ್ಯಾರಂಟಿಯಾಗಿ ವೇತನ ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿದರು.
ಆರನೇ ಗ್ಯಾರಂಟಿ ಯನ್ನು ಇದುವರೆಗೂ ಜಾರಿಗೆ ತಂದಿರುವುದ್ದಿಲ್ಲ. ಆದ ಕಾರಣ ಆರನೇ ಗ್ಯಾರಂಟಿ ಯನ್ನು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಎಲ್. ಕೆಜಿ, ಯುಕೆಜಿ ತರಗತಿಗಳನ್ನು ಪ್ರಾರಂಭಿಸಬೇಕು, ಮಕ್ಕಳಿಗೆ ಸಮವಸ್ತ್ರ, ಪಠ್ಯ ಪುಸ್ತಕಗಳನ್ನು ವಿವರಿಸಬೇಕು ಮತ್ತು ಇನ್ನು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ತಹಶೀಲ್ದಾರ್ ಎಂ. ವಿ. ರೂಪ ರವರ ಮೂಲಕ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಐಟಿಯುಸಿ ಜಿ ಉಪಾಧ್ಯಕ್ಷ ಕಾಂ ಜಾಫರ್ ಷರೀಫ್, ಸಿಡಿಪಿಓ ನವೀನ್ ಕುಮಾರ್, ಪಿ ಎಸ್ ಐ ಪಾಂಡುರಂಗ, ತಾ ಕಾಂ ಅದ್ಯಕ್ಷೆ ಶ್ರೀಮತಿ ಲಕ್ಷ್ಮಿ ದೇವಿಯ, ಕಾಂ ಕಾ ಶ್ರೀಮತಿ ಜ್ಯೋತಿ ಲಕ್ಷ್ಮಿ, ಕಾಂ ಖಜಾಂಚಿ ಶ್ರೀಮತಿ ಸೌಭಾಗ್ಯ, ಜಿಲ್ಲಾ ಉಪಾಧ್ಯಕ್ಷೆ ಡಿ. ನಾಗರತ್ನ, ರಜಿಯಾಬಿ,ಲಕ್ಷ್ಮಿ ದೇವಿ, ಕೊಂಡ್ಲಹಳ್ಳಿ ಜಿ. ನಾಗರತ್ನ ಡಿ. ನಿಂಗಮ್ಮ, ಭಾಗ್ಯಮ್ಮ, ಲಕ್ಷ್ಮಿ, ಪಾಪಮ್ಮ,ಜ್ಯೋತಿ, ನಸೀಮಾ ಬಾನು, ಸುಶೀಲಮ್ಮ,ಲಲಿತಮ್ಮ,ಜಾನವಿ,ಉಮಾದೇವಿ ಮಾಧವಿ, ಸ್ಮಿತಾ ಪುಷ್ಪಾಂಜಲಿ, ಮತ್ತು ಪೋಲೀಸ್ ಸಿಬ್ಬಂದಿ ಗಳಾದ ಶಿವಾನಂದ, ಬಾವ್ಯಶ್ರೀ ಇನ್ನು ಮುಂತಾದವರಿದರು.