ಆರಕ್ಷಕ ಸಿಬ್ಬಂದಿಗಳಿಗೆ ಬಾಳೆಹಣ್ಣು, ಪೌಷ್ಠಿಕ ಆಹಾರ ವಿತರಣೆ

ಮೈಸೂರು: ಜೂ.09: ಕೊವಿಡ್ ಸೊಂಕು ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಕೊರೋನಾ ವಾರಿಯರ್ಸ್‍ಗಳಾದ ಆರಕ್ಷಕರಿಗೆ ಅಪೂರ್ವ ಸ್ನೇಹ ಬಳಗದ ವತಿಯಿಂದ ಜೆ.ಎಲ್.ಬಿ ರಸ್ತೆಯಲ್ಲಿರುವ ಕೆ.ಆರ್ ಪೆÇೀಲಿಸ್ ಉಪವಿಭಾಗ ಆಯುಕ್ತೆ ಕಛೇರಿ ಮತ್ತು ಕೆ.ಆರ್ ಸಂಚಾರಿ ಠಾಣೆಯ ಆರಕ್ಷಕ ಸಿಬ್ಬಂದಿಗಳಿಗೆ ಕಷಾಯ ಮತ್ತು ಆರ್ಗಾನಿಕ್ ಬಾಳೆಹಣ್ಣು ಬನ್ ಪೌಷ್ಠಿಕ ಆಹಾರ ವಿತರಿಸಲಾಯಿತು.
ಕೆ.ಆರ್ ಸಂಚಾರಿ ಠಾಣೆ ವೃತ್ತ ನಿರೀಕ್ಷಕರಾದ ವಿನಯ್‍ರವರು ಮಾತನಾಡಿ ಕೊರೋನಾ ನಿಯಂತ್ರಿಸಲು ಸಾರ್ವಜನಿಕರು ಸಾಮಾಜಿಕ ಅಂತರ ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸಲು ಪಾಲಿಸಬೇಕು, ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಯುವಕರು ಮುಂದಾಗಬೇಕು, ಪ್ರತಿನಿತ್ಯ ಆಯುರ್ವೇದ ಪೌಷ್ಟಿಕ ಆಹಾರ ಸೇವನೆಯೊಂದಿಗೆ, ದಿನನಿತ್ಯದ ಮನೆಯಲ್ಲಿ ವ್ಯಾಯಮ ಮತ್ತು ಧ್ಯಾನ ಮಾಡಿದರೆ ಮಾನಸಿಕ ಸ್ಥೈರ್ಯ ಹೆಚ್ಚುತ್ತದೆ ಎಂದರು.
ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಎಂ.ಎನ್ ನವೀನ್ ಕುಮಾರ್, ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಬಸವರಾಜು ಬಸಪ್ಪ, ರವಿಶಂಕರ್, ಅಜಯ್ ಶಾಸ್ತ್ರಿ ನವೀನ್ ಇದ್ದರು.