ಆರಕ್ಷಕರಿಗೆ ಕೊರೊನಾ ಸುರಕ್ಷತೆ ಸಾಮಾಗ್ರಿ ವಿತರಣೆ

ಸಂತೇಬೆನ್ನೂರು.ಜೂ.೫: ಕೋವಿಡ್ ಹಿನ್ನೆಲೆ ಹಗಲಿರುಳು ಕೊರೊನ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಪತ್ರಿಕಾ ವಿತರಕರಿಗೆ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜು ವಿ ಶಿವಗಂಗಾ ನೆರವಾದರು. ಸಂತೇಬೆನ್ನೂರು ಪೊಲೀಸ್ ಸಿಬ್ಬಂದಿಗಳಿಗೆ ಸ್ಯಾನಿಟೇಸರ್, ಫೇಸ್ ಮಾಸ್ಕ್, ಮಾಸ್ಕ್ ಸೇರಿದಂತೆ ಆರೋಗ್ಯ ಸುರಕ್ಷತ ಸಾಮಾಗ್ರಿ ವಿತರಣೆ ಮಾಡಿದರು. ಬಳಿಕ ಪತ್ರಿಕೆ ಹಂಚುವ ಯುವಕರಿಗೆ ಅಗತ್ಯ ವಸ್ತುಗಳ ಆಹಾರ ಸಾಮಾಗ್ರಿ ವಿತರಣೆ ಮಾಡುವ ಮೂಲಕ ಸಂಕಷ್ಟಕ್ಕೆ ಸ್ಪಂದಿಸಿದರು. ಇದೇವೇಳೆ ಮಾತನಾಡಿದ ಅವರು ಕಳೆದ ಒಂದು ವರ್ಷದಿಂದಲೂ ಆರಕ್ಷಕ ಸಿಬ್ಬಂದಿ ಹಾಗೂ ಅಧಿಕಾರಿಗಳು ಪ್ರಾಣಪಣಕ್ಕಿಟ್ಟು ನಮ್ಮ ಸೇವೆ ಮಾಡುತ್ತಿದ್ದಾರೆ. ಕೊರೊನಾ ನಿಯಂತ್ರಣ ಮಾಡುವಲ್ಲಿ ಪೊಲೀಸರ ಶ್ರಮ ಶ್ಲಾಘನೀಯವಾಗಿದ್ದು ಯೋಧರಂತೆ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರು ಸಹ ಪೊಲೀಸರಿಗೆ ಸಹಕಾರ ನೀಡಬೇಕು ಸರ್ಕಾರದ ನಿಯಮ ಪಾಲನೆ ಮಾಡಲು ಅವರಿಗೆ ಸ್ಪಂದಿಸಬೇಕೆಂದರು. ನಾನು ಸದಾ ನಿಮ್ಮ ಜೊತೆ ಇರುತ್ತೇನೆ ಯಾವುದೇ ಸಂದರ್ಭದಲ್ಲೂ ನಿಮ್ಮ ಕಷ್ಟ ಸುಖದಲ್ಲಿ ಭಾಗಿಯಾಗುವೆ ಎಂದರು. ಇನ್ನೂ ಪತ್ರಿಕಾ ವಿತರಕರ ಕುರಿತು ಮಾತನಾಡಿದ ಅವರು ಮಾಧ್ಯಮ ಕ್ಷೇತ್ರ ಕೂಡ ಕೋವಿಡ್ ವಿರುದ್ಧ ಹೋರಾಟ ಮಾಡುತ್ತಿದೆ. ಆರ್ಥಿಕ ಸಂಕಷ್ಟದ ನಡುವೆಯೂ ಮಾಧ್ಯಮದವರು ಪ್ರಾಣದ ಹಂಗು ತೊರೆದು ನಮಗೆ ಸುದ್ದಿ ಮಾಹಿತಿ ನೀಡುತ್ತಿದ್ದಾರೆ. ಅದರಲ್ಲೂ ಪತ್ರಿಕಾ ವಿತರಕರು ಮುಂಜಾನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಸಂಕಷ್ಟದಲ್ಲಿರುವ ಪತ್ರಿಕಾ ವಿತರಕರಿಗೆ ಅಗತ್ಯ ಸಾಮಾಗ್ರಿಗಳ ಆಹಾರ ಧಾನ್ಯ ಕಿಟ್ ವಿತರಣೆ ಮಾಡಲಾಗಿದೆ. ಮಾಧ್ಯಮದವರ ಜೊತೆ ನಾನು ಸದಾ ಜೊತೆಯಲ್ಲೇ ಇರುವೆ ನಿಮ್ಮ ಸಮಸ್ಯೆ ಏನೇ ಇದ್ದರು ನನ್ನ ಸಂಪರ್ಕ ಮಾಡಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂತೇಬೆನ್ನೂರು ಪೊಲೀಸ್ ಠಾಣೆ ಪಿಎಸ್ ಐ ಶಿವರುದ್ರಪ್ಪ ಮೇಟಿ, ಪೊಲೀಸ್ ಸಿಬ್ಬಂದಿಗಳು ಮತ್ತು ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಹೆಚ್ ಬಹದ್ದೂರ್ ಅಲಿ, ಅಬ್ಜಾತ್ ಖಾನ್ ಹಜರತ್‌‌ , ನದೀಂ, ಹೆಚ್ ಅಸ್ಲಾಂ, ಇಮ್ರಾನ್ ಸೇರಿದಂತೆ ಪಕ್ಷದ ಯುವ ಮುಖಂಡರು ಉಪಸ್ಥಿತರಿದ್ದರು.