ಬೀದರ:ಸೆ.28:ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರೆ ಕ್ಯಾನ್ಸರ್‍ನಿಂದ ಗುಣಮುಖರಾಗಬಹುದು. ಆದ್ದರಿಂದ ಇದರ ಬಗ್ಗೆ ಪ್ರತಿಯೊಬ್ಬರು ಅರಿವು-ಮಾಹಿತಿ ಪಡೆಯುವುದು ಹಾಗೂ ಮುಂಜಾಗೃತೆ ವಹಿಸುವುದು ತುಂಬಾ ಮುಖ್ಯವಾಗಿದೆ ಹಾಗೂ ಕ್ಯಾನ್ಸರ್ ರೋಗ ತಡೆಗಟ್ಟುª ಸಲುವಾಗಿ 13 ರಿಂದ 26 ವರ್ಷದ ಓಳಗಿನ ಯುವತಿಯರು ಊPಗಿ ಲಸಿಕೆ ಪಡೆಯಬೇಕು ಖ್ಯಾತ ಕ್ಯಾನ್ಸರ್ ರೋಗ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ವಿಪಿನ್ ಗೋಯಲ್ ಕರೆ ನೀಡಿದರು.
ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ (ಈPಂI) ಬೀದರ ಶಾಖೆ ಹಾಗೂ ಬಿ.ವಿ.ಭೂಮರೆಡ್ಡಿ ಪದವಿ ಮಹಾವಿದ್ಯಾಲಯ ಇವರುಗಳ ಸಂಯುಕ್ತಾಶ್ರಯದಲ್ಲಿ ದಿನಾಂಕ: 23-09-2023 ಶನಿವಾರದಂದು ಬಿ.ವಿ.ಭೂಮರಡ್ಡಿ ಪದವಿ ಮಹಾವಿದ್ಯಾಲಯದಲ್ಲಿ “ಸ್ಥನ ಹಾಗೂ ಗರ್ಭಕೋಶ ಕೊರಳಿನ ಕ್ಯಾನ್ಸರ್ ಪತ್ತೆಯ ಉಚಿತ ತಪಾಸಣಾ ಶಿಬಿರ ಹಾಗೂ ಮಹಿಳೆಯರಿಗೆ ಅರಿವು-ಮಾಹಿತಿ ಕಾರ್ಯಕ್ರಮ” ಹಮ್ಮಿಕೊಳ್ಳಲಾಯಿತು.
ಹೈದ್ರಬಾದ್‍ನ ಕೇರ್ ಆಸ್ಪತ್ರೆಯ ಖ್ಯಾತ ಕ್ಯಾನ್ಸರ್ ರೋಗ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ವಿಪಿನ್ ಗೋಯಲ್ ಇವರು ಕಾರ್ಯಕ್ರಮ ಉದ್ಘಾಟಿಸಿದರು. “ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ/ಮುಂಜಾಗೃತಿ ವಹಿಸದೆ ಇರುವುದರಿಂದ ನಾನಾ ತರಹದ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಬಲಿಯಾಗುತ್ತಿದ್ದಾರೆ. ವಿಶೇಷವಾಗಿ ಮಹಿಳೆಯರಲ್ಲಿ ಸ್ಥನ ಕ್ಯಾನ್ಷರ್ ಹಾಗೂ ಗರ್ಭಕೋಶ ಕಂಠದ ಕ್ಯಾನ್ಷರ್ ಹೆಚ್ಚಾಗಿ ಕಂಡುಬರುತ್ತಿದೆ. ಇದನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರೆ ಕ್ಯಾನ್ಸರ್‍ನಿಂದ ಗುಣಮುಖರಾಗಬಹುದು ಎಂದು ತಿಳಿಸಿದರು. ಕ್ಯಾನ್ಸರ್ ಎಂದರೇನು? ಅದರ ಲಕ್ಷಣಗಳು, ಅದಕ್ಕೆ ಚಿಕಿತ್ಸೆ, ಮುಂಜಾಗೃತಾ ಕ್ರಮಗಳ ಕುರಿತು ಪಿಪಿಟಿ ಮುಖಾಂತರ ಮಹಿಳೆಯರಿಗೆ ವಿವರಿಸಿ ತಿಳಿಸಿದರು. ಕ್ಯಾನ್ಸರ್ ರೋಗದ ಬಗ್ಗೆ ಪ್ರತಿಯೊಬ್ಬರು ಅರಿವು-ಮಾಹಿತಿ ಪಡೆಯುವುದು ಹಾಗೂ ಮುಂಜಾಗೃತೆ ವಹಿಸುವುದು ತುಂಬಾ ಮುಖ್ಯವಾಗಿದೆ ಹಾಗೂ ಕ್ಯಾನ್ಸರ್ ರೋಗ ತಡೆಗಟ್ಟುª ಸಲುವಾಗಿ 13 ರಿಂದ 26 ವರ್ಷದ ಓಳಗಿನ ಯುವತಿಯರು ಊPಗಿ ಲಸಿಕೆ ಪಡೆಯಬೇಕು ಎಂದು ಕರೆ ನೀಡಿದರು.
ಈPಂI ಸಂಸ್ಥೆಯ ಅಧ್ಯಕ್ಷರಾದ ಡಾ. ನಾಗೇಶ ಪಾಟೀಲ್ ಇವರು ಮಾತನಾಡಿ, ಡಾ. ವಿಪಿನ್ ಗೋಯಲ್ ಇವರು ನಮ್ಮ ಬೀದರನವರಾಗಿದ್ದು, ದೇಶ-ವಿದೇಶಗಳಲ್ಲಿ ಹೆಸರು ಪಡೆದ ಖ್ಯಾತ ಕ್ಯಾನ್ಸರ್ ತಜ್ಞರಾಗಿರುವುದು ನಮ್ಮ ಹೆಮ್ಮೆ ಅವರು ತಮ್ಮ ಮೂಲ ನೆಲೆಯಾದ ಬೀದರ ಜಿಲ್ಲೆಯ ಜನರಿಗೆ ಕ್ಯಾನ್ಸರ್ ಬಗ್ಗೆ ಅರಿವು, ಜಾಗೃತಿ ಮೂಡಿಸುತ್ತಿರುವುದು ಹಾಗೂ ಆರೋಗ್ಯ ಸೇವೆ ನೀಡುತ್ತಿರುವುದು ತುಂಬಾ ಶ್ಲಾಘನೀಯ ಎಂದು ಕಾರ್ಯಕ್ರಮದ ಪರವಾಗಿ ಅಭಿನಂದನೆÀ ತಿಳಿಸಿದರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿ ತಿಳಿದುಕೊಂಡು ಆರೋಗ್ಯಕರವಾದ ಜೀವನ ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.
ಈPಂI ಕೇಂದ್ರ ಕಛೇರಿ ಮುಂಬೈಯ ಗೌರವ ಖಜಾಂಚಿಗಳಾದ ಡಾ. ಆರತಿ ರಘು ಇವರು ಸ್ತನ ಕ್ಯಾನ್ಸರ್ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಎಲ್ಲರೂ ಕ್ಯಾನ್ಸರ್ ಬಗ್ಗೆ ಅರಿವು-ಮಾಹಿತಿ ಪಡೆಯುವುದು ತುಂಬಾ ಮುಖ್ಯವಾಗಿದೆ. ಅದರಲ್ಲೂ ವಿಶೇಷವಾಗಿ ಮಹಿಳೆಯರು ಸ್ಥನ ಕ್ಯಾನ್ಸರ್ ಹಾಗೂ ಗರ್ಭಕೋಶ ಕೊರಳಿನ ಕ್ಯಾನ್ಸರ್ ಬಗ್ಗೆ ಅರಿವು ಪಡೆದುಕೊಂಡು ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಪಿ. ವಿಠ್ಠಲ್ ರೆಡ್ಡಿ ಇವರು ತಮ್ಮ ಮಹಾವಿದ್ಯಾಲಯದಲ್ಲಿ ಮಹಿಳಾ ಉಪನ್ಯಾಸಕಿಯರು ಹಾಗೂ ವಿದ್ಯಾರ್ಥಿನಿಯರು ಹೆಚ್ಚಾಗಿರುವುದರಿಂದ ಈ ಶಿಬಿರದಿಂದ ಅವರಿಗೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲೆಂದು ಈ ಅರಿವು-ಮಾಹಿತಿ ಕಾರ್ಯಕ್ರಮ ಹಾಗೂ ತಪಾಸಣಾ ಶಿಬಿರ ಈPಂI ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಎಲ್ಲರೂ ಈ ಶಿಬಿರದ ಉಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. ಹಾಗೂ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಡಾ. ವಿಪಿನ್ ಗೋಯಲ್ ಹಾಗೂ ಈPಂI ಸಂಸ್ಥೆಯ ಎಲ್ಲ ಪದಾಧಿಕಾರಿಗಳಿಗೂ ಅಭಿನಂದನೆ ತಿಳಿಸಿದರು.
ಕಾಲೇಜಿನ ಉಪಪ್ರಾಚಾರ್ಯರಾದ ಡಾ. ಅನೀಲಕುಮಾರ ಅಣದೂರೆ ಇವರು ವಿದ್ಯಾರ್ಥಿಗಳಿಗೆ ದೇಶೀಯ ಸಂಸ್ಕøತಿ, ಕಲೆ, ಆಹಾರ ಪದ್ದತಿ ಕುರಿತು ಮಾಹಿತಿ ತಿಳಿಸಿದರು.
ಸಂಸ್ಥೆಯ ಶಾಖಾ ವ್ಯವಸ್ಥಾಪಕರಾದ ಶ್ರೀನಿವಾಸ ಬಿರಾದಾರ ಇವರು ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ/ಮುಂಜಾಗೃತಿ ವಹಿಸದೆ ಇರುವುದರಿಂದ ನಾನಾ ತರಹದ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಬಲಿಯಾಗುತ್ತಿದ್ದಾರೆ. ವಿಶೇಷವಾಗಿ ಮಹಿಳೆಯರಲ್ಲಿ ಸ್ಥನ ಕ್ಯಾನ್ಷರ್ ಹಾಗೂ ಗರ್ಭಕೋಶ ಕಂಠದ ಕ್ಯಾನ್ಷರ್ ಹೆಚ್ಚಾಗಿ ಕಂಡುಬರುತ್ತಿದೆ. ಆದ್ದರಿಂದ ಸಂಸ್ಥೆಯಲ್ಲಿ ಮಹಿಳೆಯರಿಗೆ ಗರ್ಭಕೋಶ ಕೊರಳಿನ ಹಾಗೂ ಸ್ತನ ಕ್ಯಾನ್ಸರ್ ಪತ್ತೆಯ ಟೆಸ್ಟ್‍ನ್ನು ಉಚಿತವಾಗಿ ಮಾಡುತ್ತಿದೆ ಎಂದು ಕಾರ್ಯಕ್ರಮದ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ನಂತರ ಈPಂI ಸಂಸ್ಥೆಯ ವೈದ್ಯಾಧಿಕಾರಿಗಳಾದ ಡಾ. ಆಕಾಶ, ಡಾ. ಚಿನ್ನಮ್ಮ ಬಿರಾದಾರ ಇವರುಗಳು ಮಹಿಳೆಯರಿಗೆ ಗರ್ಭಕೋಶ ಕೊರಳಿನ ಹಾಗೂ ಸ್ಥನ ಕ್ಯಾನ್ಸರ್ ಕುರಿತು ಆರೋಗ್ಯ ತಪಾ¸ಣೆ ಮಾಡಿದರು. ಸಂಸ್ಥೆಯ ಶೂಶ್ರಕಿಯರಾದ ರೂಪಾ, ಜೈಮೇರಿ ಇವರು ತಪಾಸಣೆಗೆ ಸಹಕರಿಸಿದರು.
ಈPಂI ಸಂಸ್ಥೆಯ ಕಾರ್ಯಕ್ರಮ ಅಧಿಕಾರಿಯಾದ ವಿಜಯಲಕ್ಷ್ಮಿ ಹುಡುಗೆ ಇವರು ಸ್ವಾಗತಿಸಿ, ಕಾರ್ಯಕ್ರಮದ ನಿರೂಪಣೆ ಮಾಡಿದರು. ಹಾಗೂ ಬಿ.ವಿ.ಬಿ ಕಾಲೇಜಿನ ಪ್ರಾಚಾರ್ಯರಾದ ಜಗನ್ನಾಥ _ ಇವರು ವಂದಿಸಿದರು.
ಕ್ಯಾನ್ಸರ್ ಕುರಿತು ಅರಿವು-ಮಾಹಿತಿ ಹಾಗೂ ಆರೋಗ್ಯ vಪಾಸಣಾ ಕಾರ್ಯಕ್ರಮದಲ್ಲಿ 100 ಕ್ಕೂ ಅಧಿಕ ವಿದ್ಯಾರ್ಥಿಗಳು, ಉಪನ್ಯಾಸಕರು, ಮಹಿಳಾ ಉಪನ್ಯಾಸಕರು, ಸಿಬ್ಬಂದಿವರ್ಗದವರು ಭಾಗವಹಿಸಿ, ಇದರ ಸದುಪಯೋಗ ಪಡೆದುಕೊಂಡರು.