ಆರಂಭವಾದ ದ್ವಿತೀಯ ಪಿ.ಯು.ಸಿ ಪರೀಕ್ಷೆಗಳು


ಸಂಜೆವಾಣಿ ವಾರ್ತೆ
ಹೊಸಪೇಟೆ, ಮಾ.01: ವಿಜಯನಗರ ಜಿಲ್ಲೆಯಲ್ಲಿ  18 ಪರೀಕ್ಷಾ ಕೇಂದ್ರಗಳಲ್ಲಿ ದ್ವೀತಿಯ ಪಿಯುಸಿ ಪರೀಕ್ಷೆಗಳು ಶಾಂತಿಯುತವಾಗಿಆರಂಭವಾದವು.
ನಗರ ಸೇರಿದಂತೆ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರದಲ್ಲಿ 15, 911 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಸಿದ್ದು ಪರೀಕ್ಷೆಗಳು ಯಾವುದೆ ತೊಂದರೆ ಇಲ್ಲದಂತೆ ಆರಂಭವಾದವು.
ಪರೀಕ್ಷಾ ಕೇಂದ್ರಗಳ ಸುತ್ತ ಬೀಗಿ ಪೊಲೀಸ್ ಬಂದೋಬಸ್ತ್  ಆಯೋಜಿಸಿದ್ದು  ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ಗಳ ನಿಷೇಧಾಜ್ಞೆ ಸಹ  ಜಾರಿ ಮಾಡಲಾಗಿದೆ.
ಪ್ರವೇಶ ಪತ್ರಗಳ ಪರಿಶೀಲನೆ ಮಾಡಿ, ಒಳ ಬಿಡುತ್ತಿರೋ ಪೊಲೀಸರು ಮೊಬೈಲ್, ಇತರೆ ಎಲೆಕ್ಟ್ರಾನಿಕ್ ಉಪಕರಣಗಳು ಕೊಂಡೊಯ್ಯದಂತೆ ಪರಿಶೀಲನೆ ನಡೆಸುತ್ತಿದ್ದಾರೆ.
ಒಟ್ಟಾರೆ ಜಿಲ್ಲೆಯಾದ್ಯಂತ ಪರೀಕ್ಷೆ ಆರಂಭವಾಗಿವೆ.