ಆರಂಭದಲ್ಲಿಯೆ ಬೇಳವಣಿಗೆ ಕುಂಠಿತ ಮಕ್ಕಳ ಪತ್ತೆ ಹಚ್ಚುವ ಕಾರ್ಯವಾಗಬೇಕು

ಕಲಬುರಗಿ:ಜು.14:ಆರೋಗ್ಯವೇ ಭಾಗ್ಯ ಎನ್ನುವಂತೆ ಬೆಳವಣಿಗೆಯಲ್ಲಿ ಕುಂಠಿತವಿರುವ ಮಕ್ಕಳನ್ನು ಅಂಗನವಾಡಿ ಕೇಂದ್ರದಲ್ಲಿ ಸಾಮಾನ್ಯ ಮಕ್ಕಳೊಡನೆ ಕಲಿಯಲು ಅವಕಾಶ ಮಾಡಿ ಕೊಟ್ಟು ಅವರಿಗೆ ವಿಶೇಷವಾದ ಕಾಳಜಿ ಪೌಷ್ಠಿಕ ಆಹಾರ ಸಿಗುವಂತಾಗಬೇಕು ಎಂದು ಕಲಬುರಗಿ ಧರ್ಮ ಕ್ಷೇತ್ರದ ಶ್ರೇಷ್ಠ ಗುರುಗಳಾದ ಫಾದರ್ ಸ್ಟ್ಯಾನಿ ಲೋಬೊ ರವರು ಮಾತನಾಡಿದರು.
ಕಲಬುರಗಿ ನಗರದ ಸೇವಾ ಸಂಗಮ ಸಮಾಜ ಸೇವಾ ಸಬಾಂಗಣದಲ್ಲಿ ಸೇವಾ ಸಂಗಮ ಸಂಸ್ಧೆ ಮತ್ತು ಅಜೀಮ್ ಪ್ರೇಮಜಿ ಪೌಂಡೆಷÀನ್ ಸಂಯುಕ್ತಾಶ್ರಯದಲ್ಲಿ ಕಲಬುರಗಿ ನಗರ ಪ್ರದೇಶದÀಲ್ಲಿರುವ ಅಂಗನವಾಡಿ ಕಾರ್ಯಕರ್ತರಿಗೆ ಒಂದು ದಿನದ ತರಬೇತಿ ಕಾರ್ಯಗಾರ ಕುರಿತು ಮಾತನಾಡುತಾ ಮಕ್ಕಳ ಜೋತೆ ನಾವು ಬೇರೆತಾಗ ಮಾತ್ರ ನವು ಅವರೋದಿಗೆ ಸಂಭಾಷಣೆಮಾಡಲು ಸಾಧ್ಯವಾಗುತ್ತದೆ. ಮಕ್ಕಳನ್ನು ನಾವು ದೇವರ ರೂಪದಲ್ಲಿ ಕಾಣುತ್ತೆವೆ. ಬೇಳವಣಿಗೆ ಕುಂಠಿತ ಮಕ್ಕಳ ಪೋಷಕರು ಅವರಿಗೆ ವಿಶೇಷ ಕಾಳಜೀ ತೋರಿಸಬೇಕೆಂದು ತಿಳಿಸಿದರು.
ಸೇವಾ ಸಂಗಮ ಸಂಸ್ಧೆಯ ಸಹ ನಿರ್ದೇಶಕರಾದ ಫಾದರ್ ದೀಪಕ ರವರು ಮಾತನಾಡುತಾ 0-6 ವರ್ಷದ ಮಕ್ಕಳಲ್ಲಿರುವ ನ್ಯೂನತೆಯನ್ನು ಅತಿ ಶಿಘ್ರವಾಗಿ ಪತ್ತೆಹಚ್ಚುವ ಮೂಲಕ ವಿವಿಧ ರೀತಿಯ ಚಟುವಟಿಕೆಗಳ ಮೂಲಕ ಅವರಲ್ಲಿರುವ ನ್ಯೂನತೆಯನ್ನು ಹಂತ ಹಂತವಾಗಿ ಕಡಿಮೆ ಮಾಡಲು ಸೇವಾಸಂಗಮ ಸಂಸ್ಥೆ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಶಿಘ್ರ ಪತ್ತೆಹಚ್ಚುವಿಕೆ ಮತ್ತು ಆರಂಭಿಕ ಶಿಕ್ಷಣ ಕಾರ್ಯಕ್ರಮದ ಯೋಜನಾ ವ್ಯವಸ್ಥಾಪಕರಾದ ಸದಾನಂದ ರವರು ಮಾತನಾಡುತಾ ಸೇವಾ ಸಂಗಮ ಸಂಸ್ಧೆಯು ಸುಮಾರು 17 ವರ್ಷಗಳಿಂದ ಕಲಬುರಗಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ವಿವಿಧ ರೀತಿಯ ಯೋಜನೆಯ ಮುಖಾಂತರ ಸಮಾಜದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ ಎಂದು ಹೇಳಿದರು.
ಅಶೋಕ ನಗರ ವಲಯದ ಮೇಲ್ವಿಚಕರಾದ ಶ್ರೀಮತಿ ವಿಜಯ ಲಕ್ಷೀ, ಶ್ರೀಮತಿ ನೇತ್ರಾ ಉಪಸ್ಥಿತರಿಂದರು. ಕಲಬುರಇ ನಗರದ 60 ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದರು. ಶ್ರೀ ರಾಜಕುಮಾರ ದೇವರಮನಿ ಸ್ವಾಗತಿಸಿ ಶ್ರೀಮತಿ ಜಗದೇವಿ ವಂದಿಸಿದರು. ಶ್ರೀಮತಿ ಶಿವಕಾಂತ ದೊಡ್ಡಮನಿ ನಿರೂಪಸಿದರು.