ಆಯ- ವ್ಯಯ ಮಂಡನೆ


ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು, ಮಾ.3:ಪಟ್ಟಣದ ಪಟ್ಟಣ ಪಂಚಾಯಿತಿಯಲ್ಲಿ ಇಂದು  ಪ ಪಂ ಅಧ್ಯಕ್ಷ ಟಿ. ರವಿಕುಮಾರ್  2023-2024 ನೇ ಸಾಲಿನ ಆಯ- ವ್ಯಯ ಮಂಡನೆ ಮಂಡಿಸಿದರು.
ಮುಂದಿನ ಆರ್ಥಿಕ ವರ್ಷದಲ್ಲಿ ಪಟ್ಟಣದ ಜನತೆಗೆ ಸಮರ್ಪಕ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ, ಬೀದಿ ದೀಪಗಳ ವ್ಯವಸ್ಥಿತ ನಿರ್ವಹಣೆ ಮತ್ತು ಪಂಚಾಯಿತಿ ವತಿಯಿಂದ ಆಗುವ ಸಾರ್ವಜನಿಕ ಕೆಲಸಗಳಿಗೆ ಕಾಲಮಿತಿ ನಿಗಧಿ ತ್ವರಿತ ಕಡತ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು.
ಪಟ್ಟಣದಲ್ಲಿ ವಾಸವಾಗಿರುವ ಎಲ್ಲಾ ವರ್ಗದ ಬಡ ಜನರಿಗೆ ಪಟ್ಟಣದ ವ್ಯಾಪ್ತಿಯಲ್ಲಿ ನಿವೇಶನ ಖರೀದಿಸಲು ರೂ12. 50 ಲಕ್ಷ ಆರ್ಥಿಕ ಸಹಾಯ ಧನ ಸೌಲಭ್ಯ ಕಲ್ಪಿಸಲಾಗಿದೆ, ವಿಕಲಚೇತನರು ನಿವೇಶನ ಖರೀದಿಸುವುದಕ್ಕಾಗಿ ರೂ,, 21.00 ಲಕ್ಷ ಸಹಾಯಧನ ಕಾಯ್ದಿರಿಸಲಾಗಿದೆ.
ಹೆಚ್ಚಿನದಾಗಿ ಕುಡಿಯುವ ನೀರಿಗೆ, ನೈರ್ಮಲ್ಯ, ಹಣ ಕಾಯ್ದಿರಿಸಲಾಗಿದೆ. ಒಟ್ಟಾರೆಯಾಗಿ ಮಂಡನೆ ಶಾಂತವಾಗಿ ಸರ್ವ ಸದಸ್ಯರ ಸಮ್ಮುಖದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಬಿ.ಎನ್.ಮಂಜಣ್ಣ, ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಪಿ. ಲಕ್ಷ್ಮಣ್, ಮುಖ್ಯಾಧಿಕಾರಿ ಟಿ. ಜಯಣ್ಣ ಇಂಜಿನಿಯರ್ ಶ್ರೀನಿವಾಸ್ ಸದಸ್ಯರಾದ ಎಸ್. ಖದರ್, ಶುಭಾ ಪೃಥ್ವಿರಾಜ್, ರೂಪ, ಎಂ. ಅಬ್ದುಲ್, ನಬೀಲ್  ಅನ್ಸರ್, ತಿಪ್ಪೇಸ್ವಾಮಿ ಕೆ. ಪದ್ಮ,ಚಿತ್ತಮ್ಮ, ಸವಿತಾ ಅರ್ಜುನ್, ವಿಜಯಮ್ಮ, ತಿಪ್ಪೇಸ್ವಾಮಿ, ಇನ್ನು ಮುಂತಾದವರಿದ್ದರು.