ಆಯೋಗದ ಕ್ರಮ ಖಂಡಿಸಿ ಮಮತಾ ಧರಣಿ

ಕೋಲ್ಕತ್ತ, ಏ 14-ತಮಗೆ ಚುನಾವಣಾ ಆಯೋಗ ಚುನಾವಣಾ ಪ್ರಚಾರದಿಂದ 24 ಗಂಟೆ ನಿಷೇಧ ವಿಧಿಸಿರುವುದಕ್ಕೆ ತೀವ್ರ ಆಕ್ರೋಶಗೊಂಡಿ ರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಧರಣಿ ನಡೆಸಿದರು.

ಕೋಲ್ಕತ್ತಾದ ಹೃದಯ ಭಾಗದಲ್ಲಿ ಟಿಎಂಸಿ ನಾಯಕಿ ಧರಣಿ ನಡೆಸಿದ ವೇಳೆ ಪ್ರತಿಕ್ರಿಯಿಸಿದ ಅವರು , ತಮಗೆ ಚುನಾವಣಾ ಪ್ರಚಾರ ಮಾಡುವುದರಿಂದ 24 ಗಂಟೆಗಳ ಕಾಲ ನಿಷೇಧಿಸಿರುವ ಆಯೋಗದ ಕ್ರಮಅಸಾಂವಿಧಾನಿಕ ಎಂದು ಕಿಡಿಕಾರಿದ್ದಾರೆ.

ವ್ಹೀಲ್ ಚೇರ್ ನಲ್ಲೇ ಮಹಾತ್ಮಾ ಗಾಂಧಿ ಪುತ್ಥಳಿಯ ಬಳಿ ಕುಳಿತು ಪ್ರತಿಭಟನೆ ನಡೆಸಿದ ಮಮತಾ ಬ್ಯಾನರ್ಜಿ ಗೆ ಬೇರೆ ಯಾವುದೇ ಪಕ್ಷದ ಮುಖಂಡರಿಂದ ಬೆಂಬಲ ಸಿಕ್ಕಿಲ್ಲ. ಆದರೂ ಮಮತಾ ಅವರೊಬ್ಬರೆ ಸ್ಥಳದಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಟಿಎಂಸಿ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.

ಚುನಾವಣೆಯಲ್ಲಿ ಧರ್ಮದ ಆಧಾರದಲ್ಲಿ ಮತಯಾಚನೆ ಮಾಡಿದ್ದು ಹಾಗೂ ಕೇಂದ್ರ ಪಡೆಗಳ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಮಮತಾ ಬ್ಯಾನರ್ಜಿ ಅವರಿಗೆ ಚುನಾವಣಾ ಆಯೋಗ 24 ಗಂಟೆಗಳ ಕಾಲ ಪ್ರಚಾರ ನಡೆಸದಂತೆ ನಿಷೇಧ ವಿಧಿಸಿತ್ತು.