ಆಯುಷ ಔಷಧಿ ಕಿಟ್ ವಿತರಣೆಗೆ ಚಾಲನೆ

ಬಾಗಲಕೋಟೆ,ಮೇ.30 : ಕೇಂದ್ರ ಪುರಸ್ಕøತ ಯೋಜನೆಯ ರಾಷ್ಟ್ರೀಯ ಆಯುಷ ಅಭಿಯಾನದಡಿ ಕೋವಿಡ್ ನಿರ್ವಹಣೆಗೆ ಅಗತ್ಯವಿರುವ ಆಯುಷ ಔಷಧಿಗಳ ಕಿಟ್‍ಗಳನ್ನು ಹುನಗುಂದ ತಾಲೂಕಾ ವೈದ್ಯಾಧಿಕಾರಿ ಡಾ.ಪ್ರಶಾಂತ ತುಂಬಗಿ ಅವರಿಗೆ ಹಸ್ತಾಂತರಿಸುವ ಮೂಲಕ ಚಾಲನೆ ನೀಡಲಾಯಿತು.
ತಾಲೂಕಿನ ಆಯುರ್ವೇಧ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ಚಂದ್ರಕಾಂತ ರಕ್ಕಸಗಿ ಅವರು ಆಯುಷ ಔಷಧಿಗಳ ಕಿಟ್‍ಗಳನ್ನು ಶನಿವಾರ ಹಸ್ತಾಂತರಿಸಿ ಮಾತನಾಡಿದ ಅವರು ಹುನಗುಂದ ತಾಲೂಕಿಗೆ 80 ಆಯುಷ ಔಷಧಿ ಕಿಟ್‍ಗಳನ್ನು ನೀಡಲಾಗುತ್ತಿದ್ದು, ಸಿಸಿಸಿ ಕೇಂದ್ರದಲ್ಲಿರುವ ಅ-ಸಿಸ್ಟಮಿಟಿಕ್ ಹಾಗೂ ಮೈಲ್ಡ್ ಪಾಜಿಟಿವ್ ರೋಗಿಗಳಿಗೆ ವಿತರಿಸಲು ಭಾರತ ಸರಕಾರದ ಆಯುಷ ಮಂತ್ರಾಲಯ ಮಾರ್ಗಸೂಚಿನಯ್ವಯ ಆಯುಷ-64, ಅಶ್ವಗಂಧ ಚೂರ್ಣ, ಚವನಪ್ರಾಸ್, ಸಂಶಮನಿ ವಟಿ, ಶರಬತ್ ಎ ಉನ್ನಬ್ ಈ 5 ಆಯುಷ ಔಷಧಿ ಕಿಟ್‍ಗಳನ್ನು ನೀಡಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಚಿತ್ತವಾಡಗಿ ಸರಕಾರಿ ಆಯುಷ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶಿವಾನಂದ ನಿಡಗುಂದಿ, ಔಷಧ ವಿತರಕ ಶಿವಾನಂದ ಲಾಯದಗುಂದಿ ಸೇರಿದಂತೆ ಇತರರು ಇದ್ದರು.