ಆಯುಷ್ ಸೇವಾ ಗ್ರಾಮ ಕಾರ್ಯಕ್ರಮ

ಧಾರವಾಡ,,ಜ14: ತಾಲೂಕಿನ ವೆಂಕಟಾಪೂರ ಗ್ರಾಮದಲ್ಲಿ 2020-21 ನೇ ಸಾಲಿನ ಎಸ್.ಸಿ.ಪಿ.ಯೋಜನೆಯಡಿ ಆಯುಷ್ ಸೇವಾ ಗ್ರಾಮ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಆಯೋಜಿಸಲಾಗಿತ್ತು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಣ್ಣೇರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. 

ಕಾರ್ಯಕ್ರಮದಲ್ಲಿ ಗ್ರಾಮದ ಫಲಾನುಭವಿಗಳು ಹಾಗೂ ಗಣ್ಯರು ಹಾಜರಿದ್ದು, ಕಾರ್ಯಕ್ರಮದ ರೂಪುರೇಷೆ, ಉದ್ದೇಶ ಮತ್ತು ಸದುಪಯೋಗದ ಕುರಿತು ಸವಿಸ್ತಾರವಾಗಿ ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳಾದ ಡಾ. ಹೇಮಂತ ಅರಕೇರಿ ಇವರು ವಿವರಿಸಿದರು. ಕಾರ್ಯಕ್ರಮದ ಅನುಷ್ಠಾನ ಅಧಿಕಾರಿಗಳಾದ ಡಾ. ಸವಿತಾ. ಸಿ. ಹುಣಸಿಮರದ ಇವರು ಸಾರ್ವಜನಿಕರಿಗೆ ಕಾರ್ಯಕ್ರಮದ ಕುರಿತು ತಿಳಿಹೇಳಿದರು
ಕಾರ್ಯಕ್ರಮದ ನೇತೃತ್ವವನ್ನು ಡಾ. ಮೀನಾಕ್ಷಿ ಅವಲೂರ ಶಾಂತಣ್ಣ ಜಿಲ್ಲಾ ಆಯುಷ್ ಅಧಿಕಾರಿಗಳು ಧಾರವಾಡ ವಹಿಸಿದ್ದರು. ಗ್ರಾಮದ ಗ್ರಾಮ ಪಂಚಾಯತ ಸದಸ್ಯರಾದ ಸಚಿನ ಕಾಕಡೆ, ಗಂಗವ್ವಾ ಉಪಸ್ಥಿತರಿದ್ದು, ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಲು ಗ್ರಾಮಸ್ಥರಿಗೆ ಕರೆ ನೀಡಿದರು. ಊರಿನ ಗಣ್ಯರು, ಹಿರಿಯರಾದ ದುರ್ಗಪ್ಪಾ ಡೊಕ್ಕನ್ನವರ, ಬಸವರಾಜ ಹವಾಲ್ದಾರ ರಾಮಯ್ಯ ಡೊಕ್ಕನ್ನವರ ಉಪಸ್ಥಿತರಿದ್ದರು. ಇಲಾಖೆಯ ಸಹಾಯಕ ಆಡಳಿತಾಧಿಕಾರಿಗಳಾದ ಅಶೋಕ ಅಕ್ಕೇರಿ ಇವರು ಸ್ವಾಗತಿಸಿದರು. ಸುನಂದಾ ಬೆನ್ನೂರ ಹಿರೇಮಠ ಇವರು ನಿರೂಪಣೆ ಮಾಡಿದರು.ಡಾ. ಮಲ್ಲಿಕಾರ್ಜುನ ಎ. ಎಸ್. ಇವರು ವಂದನಾರ್ಪಣೆ ಮಾಡಿದರು. ಇಲಾಖೆಯ ವೈದ್ಯಾಧಿಕಾರಿಗಳು ಸಿಬ್ಬಂದಿ ವರ್ಗದವರು ಹಾಜರಿದ್ದರು.