ಆಯುಷ್ ವೈದ್ಯಾಧಿಕಾರಿಗಳ ಸಂಘ ಕಪ್ಪುಪಟ್ಟಿಯೊಂದಿಗೆ ಕಾರ್ಯಾರಂಭ ಪ್ರತಿಭಟನೆ

ಹೊಸಪೇಟೆ ಜೂ1: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿಯೇ ಬಂದರೂ ಆಯುಷ್ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನಿರ್ಲಕ್ಷಿಸುತ್ತಿರುವ ಸರ್ಕಾರದ ಮಲತಾಯಿ ಧೋರಣೆಯನ್ನು ಖಂಡಿಸಿ ಆಯುಷ್ ವೈದ್ಯಾಧಿಕಾರಿಗಳ ವಿಜಯನಗರ ಜಿಲ್ಲಾ ಘಟಕ ಇಂದಿನಿಂದ ಕಪ್ಪುಪಟ್ಟಿ ಧರಿಸಿ ಕೆಲಸ ಆರಂಭಿಸುವ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸಿದರು.
ಹೊಸಪೇಟೆಯ ಉಪವಿಭಾಗಾಧಿಕಾರಿಗಳು ಹಾಗೂ ತಹಸೀಲ್ದಾರರ ಮೂಲಕ ಶನಿವಾರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು ಯಾವುದೆ ನಿರ್ಧಾರಕೈಗೊಳ್ಳದ ಸರ್ಕಾರದ ಕ್ರಮವನ್ನು ಖಂಡಿಸಿ ಡಾ.ಪಿ. ಮುನಿವಾಸುದೇವರೆಡ್ಡಿ ನೇತೃತ್ವದ ವೈದ್ಯಾಧಿಕಾರಿಗಳು ತಮ್ಮ ಪ್ರತಿಭಟನೆ ಆರಂಭಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯ ಆರಂಭಿಸಿದರು.
ಇಲಾಖೆಯ ಎಲ್ಲಾ ಹಂತದಲ್ಲಿಯೂ ನಮ್ಮ ಸೇವೆಯನ್ನು ಪಡೆಯುತ್ತಿದ್ದರೂ ವೇತನ-ಭತ್ಯ-ಸ್ಥಾನಮಾನಗಳನ್ನು ನೀಡುವಾಗ ಮಾತ್ರ ಆಯುಷ್ ವೈದ್ಯಾಧಿಕಾರಿಗಳನ್ನು ಹೊರತುಪಡಿಸಿ ಎಂದು ಆದೇಶ ನೀಡುತ್ತಿರುವುದು ವಿಷಾಧನೀಯ, ಕರೋನಾ ಮಹಾಮಾರಿಯ ಸಂದರ್ಭದಲ್ಲಿಯೂ ನಮ್ಮ ಸೇವೆಯನ್ನು ಹಿಂಜರಿಯದೆ ಪಡೆಯುತ್ತಿದ್ದರೂ ಮತ್ತು ಹಿಂದೆ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಆಯುಷ್ ವೈದ್ಯಾಧಿಕಾರಿಗಳ ಸಮಾನವಾಗಿ ಕಾಣುವ ಭರವಸೆ ನೀಡಿದ್ದರೂ ಆದೇಶಗಳಲ್ಲಿ ಮಾತ್ರ ಆಯುಷ್ ಇಲಾಖೆಯ ಸೇವೆಯಲ್ಲಿರುವವರನ್ನು ಹೊರತುಪಡಿಸಿ ಎನ್ನುತ್ತಿರುವುದು ವಿಷಾದನೀಯ.
ಜೂನ್1ರಿಂದ 7ರ ವರೆಗೂ ಕಪ್ಪುಪಟ್ಟಿಯನ್ನು ಧರಿಸಿ ಪ್ರತಿಭಟಿಸುವುದಾಗಿ ಅಲ್ಲದೆ ಮುಂದಿನ ದಿನಗಳಲ್ಲಿ ರಾಜ್ಯ ಸಮಿತಿ ಯಾವ ನಿರ್ಧಾರ ಕೈಗೊಳ್ಳವರೂ ಅದರಂತೆ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಡಾ. ರೂಪಸಿಂಗ್ ರಾಥೋಡ, ಡಾ.ಮಂಜುನಾಥ, ಡಾ.ಶಿವಶರಣಯ್ಯ, ಡಾ.ಕುಮಾರ್, ಡಾ. ಪ್ರಸಾದಬಾಬು, ಡಾ.ಆರತಿ ಹಿರೇಮಠ, ಡಾ.ಸರಸ್ವತಿ ಡಾ. ಹೇಮಲತಾ ಸೇರಿದಂತೆ ಡಿ ಗ್ರೂಪ್ ನೌಕರರು ಪಾಲ್ಗೊಂಡಿದ್ದರು.