ಆಯುಷ್ ವೈದ್ಯರಿಗೆ ವಿಶೇಷ ಭತ್ಯೆ ನೀಡಲು ಒತ್ತಾಯ


ರಾಯಚೂರು. ಮೇ.೨೯-ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳಿಗೆ ವಿಶೇಷ ಭತ್ಯೆವನ್ನು ನೀಡಲು ಆಯುಷ್ ವೈದ್ಯಧಿಕಾರಿಗಳು ಜಿಲ್ಲಾಧಿಕಾರಿಗಳ ಸ್ಥಾನಿಕ ಅಧಿಕಾರಿ ಮುಖಂತರಾ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕೊರೊನಾ ವೈರಾಣುವಿನ ಹಾವಳಿಯ ಸಂದರ್ಭದಲ್ಲಿ ಘನಸರ್ಕಾರವು ಪ್ರತಿಯೊಬ್ಬ ಅಲೋಪಥಿ ಆಯುಷ್ ವೈದ್ಯಾಧಿಕಾರಿಗಳನ್ನು ವಿವಿಧ ಜವಾಬ್ದಾರಿಗಳ ನಿರ್ವಹಣೆಗೆ ನಿಯೋಜಿಸಿದೆ.
ಸರ್ಕಾರವು ಹೊರಿಸಿದ ಹೊಣೆಗಾರಿಕೆಯಿಂದ ಯಾವೊಬ್ಬ ಆಯುಷ್ ವೈದ್ಯಾಧಿಕಾರಿಯೂ ಹಿಂಜರಿಯದೆ ತಮ್ಮ ಕರ್ತವ್ಯಗಳನ್ನು ಅತ್ಯಂತ ನಿಷ್ಠೆಯಿಂದ ನಿಭಾಯಿಸುತ್ತಿದ್ದಾರೆ ಕೊವಿಡ್ ಕೇರ್ ಕೇಂದ್ರ, ತಪಾಸಣಾ ಕೇಂದ್ರ,ಚಿಕಿತ್ಸಾ ಕೇಂದ್ರ ಹೀಗೆ ಯಾವುದರಲ್ಲಿಯೂ ಹಿಂಜರಿಯದೆ ಅತ್ಯಂತ ದಕ್ಷತೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಅಲೋಪಥಿ – ಆಯುಷ್ ವೈದ್ಯಾಧಿಕಾರಿಗಳನ್ನು ಯಾವುದೇ ತಾರತಮ್ಯವಿಲ್ಲದೆ ಎಲ್ಲ ರೀತಿಯ ಸೇವೆಗಳಿಗೂ ನಿಯೋಜಿಸಿ ಸರ್ಕಾರವು ಸರಿಸಮಾನವಾಗಿ ಸೇವೆಯನ್ನು ಪಡೆಯುತ್ತಿದೆ.
ಕೋವಿಡ್ ೧೯ ಹಾವಳಿಯ ನಿಯಂತ್ರಣದಲ್ಲಿ ಆಯುಷ್ ವೈದ್ಯಾಧಿಕಾರಿಗಳು ಅಹರ್ನಿಶಿ ಕರ್ತವ್ಯ ದಾಖಲೆಗಳು ಇವೆ ಅದರಿಂದ ಕೂಡಲೇ ವಿಶೇಷ ಭತ್ಯೆಯನ್ನು ನೀಡಲು ಒತ್ತಾಯ ಮಾಡಿದರು.
ಈ ಸಂದರ್ಭದಲ್ಲಿ ಡಾ.ಶಿವರಾಜ ಗೌಡ, ಡಾ.ವಿಶ್ವನಾಥ ರೆಡ್ಡಿ, ಡಾ.ಶಕೀಲ್ ಹುಸೇನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.