ಆಯುಷ್‌ ವೈದ್ಯರಿಗೂ ವಿಶೇಷ ಭತ್ಯೆ ನೀಡಿ ವಿಜಯಕುಮಾರ್

ಕೊಟ್ಟೂರು, ಜೂ.1: ಆಯುಷ್‌ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳಿಗೆ ವಿಶೇಷ ಭತ್ಯೆ ವಿಸ್ತರಿಸಬೇಕೆಂದು ಆಯುಷ್‌ ವೈದ್ಯಾಧಿ ಕಾರಿಗಳ ಸಂಘದ ರಾಜ್ಯ ಪ್ರತಿನಿಧಿ ಡಾವಿಜಯಕುಮಾರ ಸರಕಾರಕ್ಕೆಒತ್ತಾಯಿಸಿದರು .ಕೊರೊನಾ ಸಂದರ್ಭದ ಸಂಕಷ್ಟದಲ್ಲಿಆಯುಷ್‌ ವೈದ್ಯರು ಅಲೋಪಥಿ ವೈದ್ಯರಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್‌ಕೇರ್‌ ಕೇಂದ್ರ, ತಪಾಸಣಾ ಕೇಂದ್ರ ಸೇರಿದಂತೆ ಎಲ್ಲಾ ವಿಭಾಗದಲ್ಲಿಯೂ ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ.ಹೀಗಿರುವಾಗ ಸೌಲಭ್ಯಗಳ ವಿಚಾರದಲ್ಲಿ ಸರಕಾರ ತಾರತಮ್ಯ ಮಾಡಿರುವುದು ಸರಿಯಲ್ಲ. ಎಂಬಿಬಿಎಸ್‌ಹಾಗೂ ಬಿಡಿಎಸ್‌ ವೈದ್ಯಾ ಧಿಕಾರಿಗಳಿಗೆವಿಶೇಷ ಭತ್ಯೆ ಪರಿಷ್ಕರಿಸುವ ವೇಳೆ ಆಯುಷ್‌ವೈದ್ಯರ ಸೇವೆಯನ್ನು ನಗಣ್ಯ ಮಾಡಲಾಗಿದೆ.ಈ ಮೂಲಕ ಸರಕಾರ ಆಯುಷ್‌ ವೈದ್ಯರನೈತಿಕ ಸ್ಥೈರ್ಯ ಕುಗ್ಗಿಸುವಂತಿದೆ ರಾಜ್ಯ ಸರ್ಕಾರ ಕೂಡಲೇ ಆಯುಷ್ ವೈದ್ಯರಿಗೆ ವಿಶೇಷ ಭತ್ಯೆ ನೀಡಬೇಕು ಎಂದರು.ಈ ಸಂದರ್ಭದಲ್ಲಿಮರುಳಸಿದ್ಧನಗೌಡ ಇದ್ದರು.