ಸಂಜೆವಾಣಿ ವಾರ್ತೆ
ಕುರುಗೋಡು:ಸೆ.28 ಗ್ರಾಮೀಣ ಪ್ರದೇಶದ ಜನರು ಒತ್ತಡದ ಬದುಕಿನಿಂದ ಬಹಳಷ್ಟು ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಹಾಗಾಗಿ ಪ್ರತಿಯೊಬ್ಬರೂ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಡಾ.ರೂಪ ಎಸ್.ಜಾಲಿಹಾಳ್ ಕರೆ ನೀಡಿದರು.
ಅವರು ಪಟ್ಟಣ ಸಮೀಪದ ವದ್ದಟ್ಟಿ ಗ್ರಾಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಆರೋಗ್ಯ ಮತ್ತು ಸ್ವಾಸ್ತ್ಯ ಕೇಂದ್ರದ ವತಿಯಿಂದ ಆಯುಷ್ಮಾನ ಭವ ಮಹತ್ವಕಾಂಕ್ಷ ಯೋಜನೆಯಡಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಯುಷ್ಮಾನ ಭವ ಯೋಜನೆಯಡಿಯಲ್ಲಿ ಆರೋಗ್ಯಕ್ಕಾಗಿ ಆನೇಕ ಸೌಲಭ್ಯಗಳಿವೆ. ಈ ಯೋಜನೆಯನ್ನು ಪ್ರತಿಯೊಬ್ಬರೂ ಸದುಪಯೋಗ ಪಡೆದುಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗಬೇಕು. ಇನ್ನೂ ಗ್ರಾಮೀಣ ಪ್ರದೇಶದಲ್ಲಿ ಇಂತಹ ಶಿಬಿರಗಳಲ್ಲಿ ಪ್ರತಿಯೊಬ್ಬರೂ ಪಾಲ್ಗೊಂಡು ಆರೋಗ್ಯ ತಪಾಸಣಾ ಮಾಡಿಸಿಕೊಳ್ಳಬೇಕು ಎಮದು ಸಲಹೆ ನೀಡಿದರು.
ಆರೋಗ್ಯ ಕ್ಷೇಮ ಕೇಂದ್ರದ ಅಧಿಕಾರಿ ದೇವರಾಜ ಮಾತನಾಡಿ, ಈ ಯೋಜನೆಯಲ್ಲಿ ಸ್ವಚ್ಛತಾ ಅಭಿಯಾನ, ಅಂಗಾಂಗ ದಾನದ ನೊಂದಾಣಿ, ಆಭಾ ಕಾರ್ಡ್, ಪಿಎಂಜೆಎವೈ ಕಾರ್ಡ್, ರಕ್ತದಾನ ಸೇರಿದಂತೆ ಇನ್ನಿತರ ರೋಗಗಳ ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಯೋಜನೆಗಳಿವೆ. ಈ ಯೋಜನೆಗಳನ್ನು ಪ್ರತಿಯೊಬ್ಬರೂ ಸದುಪಯೋಗ ಪಡೆದುಕೊಂಡು ಸದೃಢ ಆರೋಗ್ಯದಿಂದ ಜೀವಿಸಬೇಕು ಎಂದರು.
ನಂತರ ತಜ್ಞರಿಂದ ಜನರಿಗೆ ಆರೋಗ್ಯ ತಪಾಸಣಾ ನಡೆಸಿದರು.
ಈ ಸಂದರ್ಭದಲ್ಲಿ ಗ್ರಾಪಂ. ಸದಸ್ಯ ಗಾದಿಲಿಂಗಪ್ಪ, ಗ್ರಾಮದ ಮುಖಂಡ ಹೊನ್ನೂರಸ್ವಮಿ, ಬಸರೆಡ್ಡಿ, ಐಸಿಟಿಸಿ ಕೌನ್ಸಲರ್ ಕರಿಬಸವ, ಆಪ್ತ ಸಮಾಲೋಚಕ ಮಹೆಬೂಬುಭಾಷಾ, ಆರೋಗ್ಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಇತರರು ಇದ್ದರು.