ಚನ್ನಮ್ಮನ ಕಿತ್ತೂರ,ಜು.1: ಆಯುಷ್ಮಾನ್ ಭಾರತ ಡಿಜಿಟಲ್ ಮಿಷನ್ (ಒಃಆಒ) ಅಡಿಯಲ್ಲಿ ಆಯುಷ್ಮಾನ್ ಭಾರತ ಹೆಲ್ತ ಅಕೌಂಟ್ (ಂಃಊಂ) ಪರಿಚಯವು ಭಾರತಿಯ ಆರೋಗ್ಯ ಸೇವೆಯನ್ನು ಡಿಜಿಟಲಿಕರಣಗೊಳಿಸಲು ಸರ್ಕಾರವು ತೆಗೆದುಕೊಂಡ ಪ್ರಮುಖ ಕ್ರಮವಾಗಿಯೆಂದು ಬೆಳಗಾವಿಯ ಶ್ರೀ ಆರ್ಥೋ ಆಸ್ಪತ್ರೆಯ ವೈದ್ಯ ಡಾ. ದೇವಗೌಡ ಇಮಗೌಡನವರ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಪ್ರಾಯೋಜಿಕ ಯೋಜನೆಗಾಗಿ ಬೆಳಗಾವ ಜಿಲ್ಲೆ ಆಯ್ಕೆ ಮಾಡಲಾಗಿದ್ದು. ಈ ಅಧ್ಯಯನದಲ್ಲಿ ಂಃಆಒ ಅನುಷ್ಠಾನವನ್ನು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯರ ಸಂಯೋಗದೊಂದಿಗೆ ಪ್ರಾರಂಭಿಸಲಾಗುವುದೆಂದರು.
ಂಃಊಂ ಆರೋಗ್ಯ ಉಳಿತಾಯ ಖಾತೆಯನ್ನು ಒದಗಿಸುವ ಮೂಲಕ ಆರೋಗ್ಯ ಅಗತ್ಯತೆ ಉಸ್ತುವಾರಿ ತೆಗೆದುಕೊಳ್ಳಲು ವ್ಯಕ್ತಿ ಮತ್ತು ಕುಟುಂಬಗಳಿಗೆ ನೀಡುತ್ತದೆ. ಂಃಊಂ ಆರೋಗ್ಯ ಮಾಹಿತಿ ಸಕ್ರೀಯಗೊಳಿಸುವ ಆರೋಗ್ಯ ದಾಖಲೆಗಳ ಪಾರದರ್ಶಕತೆ ಮತ್ತು ಆರೋಗ್ಯ ಸೇವೆಗೆ ಟೆಲಿಮೆಡಿಸಿಯನ್ ಬಳಸುವ ಗುರಿ ಹೊಂದಿದೆ.
ಆನ್‍ಲೈನ್ ಪೋರ್ಟಲ್ ಮತ್ತು ಮೊಬೈಲ್ ಅಪ್ಲಿಕೇಷನ್ ಮೂಲಕ ಫಲಾನುಭವಿಗಳು ತಮ್ಮ ವೈದ್ಯಕೀಯ ಇತಿಹಾಸದ ಖಾತೆ ಸುಲಭವಾಗಿ ಟ್ಯ್ರಾಕ್ ಮಾಡಬಹುದು. ಹತ್ತಿರದ ಕ್ಲಿನಿಕ್ ಮತ್ತು ಆಸ್ಪತ್ರೆಗಳನ್ನು ಹುಡುಕಬಹುದು. ಅಪಾಯಿಂಟ್ಮೆಂಟ ಬುಕ್ ಮಾಡಬಹುದು ಯಾವುದೇ ಆಸ್ಪತ್ರೆಗೆ ಭೇಟಿ ನೀಡಿದಾಗ ನಾಗರಿಕರು ತಮ್ಮ ಆಧಾರ ಕಾರ್ಡ ದಾಖಲೆಗಳನ್ನು ತೆಗೆದುಕೊಂಡು ಹೋದರೆ ಧೀರ್ಘಾವಧಿಯ ಸರತಿಗಳನ್ನು ತಪ್ಪಿಸಬಹುದು. ನಾಗರಿಕರು ಯಾವುದೇ ಆಸ್ಪತ್ರೆ ಅಥವಾ ಚಿಕಿತ್ಸಾಲಯಗಳಲ್ಲಿ ಭೇಟಿ ನೀಡಿದಾಗ ಅಲ್ಲಿ ಅವರ ಆರೋಗ್ಯ ದಾಖಲೆಗಳು ವೈದ್ಯಕೀಯ ಇತಿಹಾಸ ಪ್ರಿಸ್ಕ್ರಿಪ್ಷನ್ಗಳನ್ನು ಅವರ ಂಃಊಂ ಖಾತೆಗೆ ಲಗತ್ತಿಸಲಾಗುತ್ತದೆ. ಮತ್ತು ಅವರು ಅದನ್ನು ಯಾವಾಗಬೇಕಾದರು ಅದನ್ನು ಮೊಬೈಲ್‍ನಲ್ಲಿ ನೋಡಬಹುದು ಎಂದು ಅವರು ಹೇಳಿದರು.
ಟಿಎಚ್‍ಓ ಬೆಳಗಾವಿ ಪ್ರಾದೇಶಿಕ ಆಯೋಜಕ ಡಾ. ಮಾಸ್ತಿಹೊಳಿ ಮಾತನಾಡಿ ಜಿಲ್ಲೆಯ ಎಲ್ಲ ನಾಗರೀಕರಿಗೆ ಈ ಂಃಊಂ ಖಾತೆ ನೋಂದಾಯಿಸಲು ಈ ಪೈಲೆಟ್ ಪ್ರೊಜೆಕ್ಟಿನಲ್ಲಿ ಭಾಗವಹಿಸಿ. ಬೆಳಗಾವಿಯನ್ನು ಕರ್ನಾಟಕದ ಯಶಸ್ವಿ ಜಿಲ್ಲೆಯನ್ನಾಗಿ ಮಾಡಬೇಕೆಂದು ಹೇಳಿದರು. ಇದಕ್ಕೆ ಸ್ಥಳಾವಕಾಶ ಡಾ. ದೇವಗೌಡ ಇಮಗೌಡನವರ ಶ್ರೀ ಅರ್ಥೋ ಮತ್ತು ಟ್ರಾಮಾ ಸೆಂಟರ್ ಹೋಟೆಲ್ ಸನ್ಮಾನ ಪಕ್ಕದಲ್ಲಿ ಗಾಂಧಿಭವನ ಕಾಲೇಜ ರಸ್ತೆ ಬೆಳಗಾವಿ ಮೊ:9606963117 ಏರ್ಪಡಿಸಲಾಗಿದೆ. ಇದರ ಸದುಪಯೋಗ ಎಲ್ಲರು ಪಡೆದುಕೊಳ್ಳಿ ಎಂದರು.