ಆಯುಷ್ಮಾನ್ ಭವ; ನಾಳೆಯಿಂದ ಅನುಷ್ಠಾನ


ಬಳ್ಳಾರಿ,ಸೆ.16: ಪ್ರತಿಯೊಬ್ಬ ಉದ್ದೇಶಿತ ಫಲಾನುಭವಿಗೆ ಆರೋಗ್ಯ ಯೋಜನೆಗಳನ್ನು ಅತ್ಯುತ್ತಮವಾಗಿ ತಲುಪಿಸುವ ‘ಆಯುಷ್ಮಾನ್ ಭವ’ ಅಭಿಯಾನಕ್ಕೆ ಚಾಲನೆ ನೀಡಿದ್ದು, ಒಂದೇ ಕಾರ್ಯಕ್ರಮದಡಿಯಲ್ಲಿ ವಿವಿಧ ಆರೋಗ್ಯ ಸೇವೆಗಳು, ಸೌಲಭ್ಯಗಳು, ಜಾಗೃತಿ ಸಭೆಗಳು, ಸ್ವಚ್ಚತಾ ಅಭಿಯಾನ, ರಕ್ತದಾನ ಶಿಬಿರಗಳು, ಅಂಗಾಂಗ ದಾನ ಜಾಗೃತಿ ಮತ್ತು ನೊಂದಣಿ ಹಾಗೂ ಕ್ಷಯ ರೋಗಿಗಳಿಗೆ ನಿ-ಕ್ಷಯ್ ಮಿತ್ರದಡಿ ಪೌಷ್ಠಿಕ ಆಹಾರ ಕಿಟ್‍ಗಳನ್ನು ವಿತರಿಸುವ ಕಾರ್ಯ ಒಳಗೊಂಡಿವೆ. ಪ್ರತಿಯೊಬ್ಬರೂ ಆರೋಗ್ಯ ಸೇವೆಗಳ ಸೌಲಭ್ಯ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
‘ಅಂತ್ಯೋದಯ’ದ ದೃಷ್ಟಿಕೋನವನ್ನು ಇಟ್ಟುಕೊಂಡು ಜನತೆಗೆ ಆರ್ಥಿಕ ಸಂಕಷ್ಟವಿಲ್ಲದೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳಾದ ರೋಗ ನಿರೋಧಕ, ರೋಗ ನಿವಾರಕ ಪುನರ್ವಸತಿ ಉಪಶಾಮಕಾರಿ ಹಾಗೂ ಆರೋಗ್ಯ ವರ್ಧಕ ಸಲಹೆಗಳನ್ನು ಜನರಿಗೆ ತಲುಪಿಸಲು ಹಾಗೂ  ಪ್ರತಿಯೊಬ್ಬರಿಗೂ ಗುಣಮಟ್ಟದ ಆರೋಗ್ಯದ ಸೇವೆಗಳನ್ನು ಪ್ರತಿ ಗ್ರಾಮ ಮಟ್ಟದಲ್ಲಿ ತಲುಪಿಸಲು ಆಯುಷ್ಮಾನ್ ಭವಃ ಕಾರ್ಯಕ್ರಮದ ಮೂಲಕ ಚಾಲನೆ ನೀಡಲಾಗಿದೆ
ಉದ್ದೇಶಗಳು:
ಜನತೆಗೆ ಆರ್ಥಿಕ ಹೊರೆ ಕಡಿಮೆ ಮಾಡಲಿದೆ. ದ್ವಿಮುಖ ರೆಫೆರಲ್ ಸಿಸ್ಟಮ್ ಮತ್ತು ಫಾಲೋ-ಅಫ್ ಕೇರ್ ಅನ್ನು ಬಲಪಡಿಸುವುದಾಗಿದೆ. ಸಾರ್ವಜನಿಕರಲ್ಲಿ ಅಸಾಂಕ್ರಾಮಿಕ ರೋಗಗಳ ತಪಾಸಣೆ ಹಾಗೂ ರೋಗ ಪತ್ತೆ ಹಚ್ಚುವುದು ಹಾಗೂ ಚಿಕಿತ್ಸೆ ನೀಡಿ ಮರಣ ಪ್ರಮಾಣವನ್ನು ಕಡಿಮೆಗೊಳಿಸುವುದಾಗಿದೆ ಎಂದಿದ್ದಾರೆ.
@12bc = ಆಯುಷ್ಮಾನ್ ಆಪ್ಕೆ ದ್ವಾರ
ಆಯುಷ್ಮಾನ್ ಕಾರ್ಡ್,  ಎಬಿ-ಪಿಎಮ್‍ಜೆಎವೈ-ಆರ್‍ಕೆ ಕಾರ್ಡ್‍ಗಳ ಮೂಲಕ ಬಿಪಿಎಲ್ ಕುಟುಂಬಗಳಿಗೆ ವಾರ್ಷಿಕ 5 ಲಕ್ಷದವರೆಗೆ ಹಾಗೂ ಎಪಿಎಲ್ ಕುಟುಂಬಗಳಿಗೆ ವಾರ್ಷಿಕ 1.5 ಲಕ್ಷದವರೆಗೆ ಉಚಿತ ಚಿಕಿತ್ಸಾ ವೆಚ್ಚವನ್ನು ಸುಸಜ್ಜಿತ ಸರಕಾರಿ ಅಥವಾ ನೊಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯ ನೀಡಲಾಗುತ್ತದೆ.
ಪ್ರಸ್ತುತ ಜಿಲ್ಲೆಯಲ್ಲಿ ಗ್ರಾಮ್-ಒನ್ ಹಾಗೂ ವಿವಿಧ ಸೇವಾ ಕೇಂದ್ರಗಳ ಮೂಲಕ 4,85,395  ಜನರ ನೊಂದಣಿ ಮಾಡಿಸಲಾಗಿದೆ. ಅಭಿಯಾನದಲ್ಲಿ ಬಾಕಿ ಉಳಿದ 7,30,062 ಜನರ ನೊಂದಣಿಯನ್ನು ಮಾಡಿಸಿ ಕಾರ್ಡ್‍ಗಳನ್ನು ವಿತರಿಸಲಾಗುವುದು.
ಆಭಾ ಕಾರ್ಡ್ ಡಿಜಿಟಲ್  ಆರೋಗ್ಯ ದಾಖಲಿಕರಣ ಅಕೌಂಟ್ ಮೂಲಕ ಒಮ್ಮೆ 05 ವರ್ಷ ಮೇಲ್ಪಟ್ಟ ವಯಸ್ಸಿನ ವ್ಯಕ್ತಿಯು ನೊಂದಣಿ ಮಾಡಿಸಿದಲ್ಲಿ  ದೇಶದ ಯಾವುದೇ ಭಾಗದಲ್ಲಿ ಚಿಕಿತ್ಸೆಗೆ ತೆರಳಿದರೂ ಸಹ ಸದರಿ ವ್ಯಕ್ತಿಯ ಆರೋಗ್ಯದ ಮಾಹಿತಿ ಲಭ್ಯವಾಗುವುದು. ಇದರಿಂದ ಅನಗತ್ಯವಾಗಿ ರೋಗಿಯು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಕಾಯುವ ಸಮಯವನ್ನು ಕಡಿಮೆಮಾಡುತ್ತದೆ. ಪ್ರಸ್ತುತ ಜಿಲ್ಲೆಯಲ್ಲಿ 7,32,102 ಜನರ ನೊಂದಣಿ ಮಾಡಿಸಲಾಗಿದೆ. ಪ್ರಸ್ತುತ ಅಭಿನಯಾನದಲ್ಲಿ ಬಾಕಿ ಉಳಿದ ಜನರ ಕಾರ್ಡ್ ರಚಿಸಲು ಒತ್ತು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸೆ.17ರಿಂದ ಆರಂಭ:
ಜಿಲ್ಲೆಯ 126 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಮಂಗಳವಾರ ತಪಾಸಣೆಯ ಮೂಲಕ ನಿರ್ಧಿಷ್ಟ ಕಾಯಿಲೆಗಳನ್ನು ಗುರ್ತಿಸಿ ಸೇವೆ ಕೊಡುವ ವ್ಯವಸ್ಥೆ ಹಾಗೂ ಅಗತ್ಯ ಇರುವವರಿಗೆ ಟೆಲಿಕನ್ಸಲ್ಟೇಷನ್ ಮೂಲಕ ತಜ್ಞರಿಂದ ಸೇವೆ ಮತ್ತು ನಿಗಧಿ ಪಡಿಸಿದ ನಮೂನೆಯಲ್ಲಿ ರೆಫರಲ್ ಸೇವೆಯನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಗುವುದು.     ವಿಶೇಷವಾಗಿ ಮೊದಲನೇ ವಾರ ಅಸಾಂಕ್ರಾಮಿಕ ರೋಗಗಳಾದ ಮಧುಮೇಹ, ರಕ್ತದೊತ್ತಡ, ಹಾಗೂ ಬಾಯಿ, ಸ್ಥನ, ಗರ್ಭಕೋಶದ ಕ್ಯಾನ್ಸರ್‍ಗಳ ತಪಾಸಣೆ ರೋಗಿ ಸುರಕ್ಷಾ ದಿವಸ್ ಆಚರಣೆ ಮಾಡಲಾಗುವುದು. ಎರಡನೇ ವಾರ ಸಾಂಕ್ರಾಮಿಕ ರೋಗಗಳಾದ ಕ್ಷಯರೋಗ, ಕುಷ್ಠರೋಗ ಮತ್ತು ಇತರೆ ಸಾಂಕ್ರಾಮಿಕ ರೋಗಗಳ ತಪಾಸಣೆ ಮಾಡಲಾಗುವುದು. ಮೂರನೇ ವಾರ ತಾಯಿ ಮಗುವಿನ ಆರೈಕೆ, ಪೌಷ್ಟಿಕ ಆಹಾರ, ರೋಗಿ ಸುರಕ್ಷಾ ದಿವಸ್ ಆಚರಣೆ ಮಾಡಲಾಗುವುದು. ನಾಲ್ಕನೇ ವಾರ ರಕ್ತಹೀನತೆ (ಅನಿಮೀಯ) ಹಾಗೂ ಕಣ್ಣಿನ ಸುರಕ್ಷತೆಗೆ ಸಂಬಂಧಿಸಿದ ಸೇವೆಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಆರೋಗ್ಯ ಮೇಳಗಳು:
ವೈದ್ಯಾಕೀಯ ಮಹಾ ವಿದ್ಯಾಲಯದ ಸಹಕಾರದೊಂದಿಗೆ ತಜ್ಞ ವೈದ್ಯರ ಮೂಲಕ ಪ್ರತಿ ಮಂಗಳವಾರ ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರಗಳಾದ ರೂಪನಗುಡಿ, ಮೋಕಾ, ತೆಕ್ಕಲಕೋಟೆ, ತೋರಣಗಲ್ಲು, ಕುರುಗೋಡು ಮತ್ತು ಕಂಪ್ಲಿಗಳಲ್ಲಿ ಆರೋಗ್ಯ ತಪಾಸಣಾ ಶಿಬಿರಗಳು ಕೈಗೊಳ್ಳಲಾಗುವುದು.
ಶಿಬಿರಗಳಲ್ಲಿ ತಪಾಸಣೆ ಪ್ರಯೋಗಾಲಯ ಸೇವೆಗಳು ಮತ್ತು ಪ್ರಸೂತಿ ತಜ್ಞರು, ಮಕ್ಕಳ ತಜ್ಞರು, ಸರ್ಜನ್, ಅರವಳಿಕೆ ತಜ್ಞರು, ನೇತ್ರ ತಜ್ಞರು, ಕಿವಿ ಮೂಗು ಗಂಟಲು ತಜ್ಞರು, ಚರ್ಮರೋಗ ತಜ್ಞರು, ಮಾನಸಿಕ ರೋಗ ತಜ್ಞರು, ದಂತ ವೈದ್ಯರು ಸೇವೆಗಳನ್ನು ನೀಡಲಾಗುವುದು.
@12bc = ಸೇವಾ ಪಖ್ವಾಡ;
ಆಯುಷ್ಮಾನ್ ಭವ ಅಭಿಯಾನದ ಅಡಿಯಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ್ಲ ಪರಿಣಾಮಕಾರಿಯಾಗಿ ಅನುಷ್ಟಾನ ಮಾಡಲು ಜಾಗೃತಿ ನೀಡಲಾಗುವುದು. ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಸ್ಥಳೀಯ ಸಂಸ್ಥೆಗಳ ಹಾಗೂ ರೋಗಿ ಕಲ್ಯಾಣ ಸಮಿತಿ, ಆರೋಗ್ಯ ರಕ್ಷಾ ಸಮಿತಿಗಳ ಸಹಕಾರದೊಂದಿಗೆ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗುವುದು.
ಅಂಗಾಂಗ ದಾನ ಬಹಳಷ್ಟು ಜನತೆಗೆ ಅಂಗಾಂಗಗಳ ಅವಶ್ಯಕತೆ ಇರುವ ಹಿನ್ನಲೆ ನಿರ್ದಿಷ್ಟ ಮಾನದಂಡಗಳ ಆಧಾರವಾಗಿಟ್ಟುಕೊಂಡು ಅಂಗಾಂಗ ದಾನಕ್ಕೆ ಜೀವ ಸಾರ್ಥಕತೆ (www.jeevasarthakathe.karnataka.gov.in)  ಪೋರ್ಟಲ್‍ನಲ್ಲಿ ಹೆಸರು ನೊಂದಾವಣೆಗೆ ಮಾಡಲಾಗುವುದು. ಪ್ರತಿಯೊಬ್ಬರಲ್ಲೂ ರಕ್ತದಾನದ ಅವಶ್ಯಕತೆಯ ಮಹತ್ವ ಸಾರಲೂ ಗ್ರಾಮ ಪಂಚಾಯತಗಳ ಸಹಕಾರದೊಂದಿಗೆ ಉಚಿತ ರಕ್ತದಾನ ಶಿಬಿರಗಳನ್ನು ಏರ್ಪಡಿಸಲಾಗುವುದು. (https://eraktkosh.in/eRaktKosh/hissso.loginLogin) ಪೋರ್ಟಲ್‍ನಲ್ಲಿ ಹೆಸರು ನೊಂದಾವಣೆ ಮಾಡಲಾಗುವುದು. ಇಲ್ಲಿಯವರೆಗೆ ಎನ್.ಸಿ.ಡಿ ಕಾರ್ಯಕ್ರಮದಡಿಯಲ್ಲಿ 17,92,727 ಜನರ ನೊಂದಣಿ ಮಾಡಿಸಲಾಗಿದ್ದು, ಇವರಲ್ಲಿ 30 ವರ್ಷ ಮೇಲ್ಪಟ್ಟ 6,70,047 ಜನರ ತಪಾಸಣೆ ಮಾಡಲಾಗಿದೆ.
 ಆಭಾ ಕಾರ್ಡ್ ವಿತರಣೆ ಗುರಿ:
5 ವರ್ಷ ಮೇಲ್ಪಟ್ಟ ಎಲ್ಲರಿಗೂ ಆಯುಷ್ಮಾನ್ ಕಾರ್ಡ್ ವಿತರಣೆ, ಆಭಾ ಐಡಿಯನ್ನು 5 ವರ್ಷ ಮೇಲ್ಪಟ್ಟ ಎಲ್ಲರಿಗೂ ಮಾಡಿಸುವುದು, 30 ವರ್ಷ ಮೇಲ್ಪಟ್ಟ ಎಲ್ಲರಿಗೂ ಅಸಾಂಕ್ರಾಮಿಕ ರೋಗಗಳ ವಿಶೇಷವಾಗಿ ರಕ್ತದೊತ್ತಡ ಮತ್ತು ಮಧುಮೇಹ ಸ್ಕ್ರೀನಿಂಗ್ ಎಲ್ಲರಿಗೂ ಕೈಗೊಳ್ಳುವುದು. ಪ್ರತಿ ಸಾವಿರ ಜನಸಂಖ್ಯೆಗೆ ಕನಿಷ್ಟ 30 ಟಿಬಿ ಪರೀಕ್ಷೆ ಕಡ್ಡಾಯವಾಗಿ ಕೈಗೊಳ್ಳುವುದು. ಖಚಿತ ಪಟ್ಟ ಕ್ಷಯರೋಗಿಗಳ ಚಿಕಿತ್ಸೆಯನ್ನು ಶೇ.85ಕ್ಕಿಂತ ಮೇಲ್ಪಟ್ಟು ಎಲ್ಲರಿಗೂ ಯಶಸ್ವಿ ಚಿಕಿತ್ಸೆಯನ್ನು ಪೂರ್ಣಗೊಳಿಸುವುದು. ಸಿಕಲ್‍ಸೆಲ್ ಅನೀಮಿಯ ಗುರ್ತಿಸಿದ ಹುಟ್ಟಿನಿಂದ 40 ವರ್ಷದೊಳಗಿನವರಿಗೆ ಎಲ್ಲರಿಗೂ ಕಾರ್ಡ್ ವಿತರಣೆ ಮಾಡಲಾಗುವುದು.
 ಆಯುಷ್ಮಾನ್ ಗ್ರಾಮ ಪಂಚಾಯತ್, ಆಯುಷ್ಮಾನ್ ನಗರ ವಾರ್ಡ್‍ಗಳಿಗೆ ಪ್ರಶಸ್ತಿ:
ಆಯುಷ್ಮಾನ್ ಕಾರ್ಡ್ ವಿತರಣೆಗೆ ಸಂಬಂಧಿಸಿದಂತೆ ನಿಗದಿ ಗುರಿಗಳನ್ನು ಸಾಧಿಸಿದ ಗ್ರಾಮ ಪಂಚಾಯತ್, ನಗರ ವಾರ್ಡ್‍ಗಳಿಗೆ ಕ್ರಮವಾಗಿ ಆಯುಷ್ಮಾನ್ ಗ್ರಾಮ ಪಂಚಾಯತ್, ಆಯುಷ್ಮಾನ್ ನಗರ ವಾರ್ಡ್‍ಗಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

One attachment • Scanned by Gmail