ಆಯುಷ್ಮಾನ್ ದಿವಸ್ ಅರಿವು ಮೂಢಿಸುವ ಜಾಥಾಕ್ಕೆ ಚಾಲನೆ

ಕೆ.ಆರ್.ಪೇಟೆ. ಸೆ.26: ರಾಜ್ಯದ ಎಲ್ಲಾ ಜನರು ಆರೋಗ್ಯವಂತರಾಗಿ ಇರಬೇಕು ಎಂಬ ಉದ್ದೇಶದಿಂದ ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಆರೋಗ್ಯ ಕರ್ನಾಟಕ ಎಂಬ ಸಾರ್ವತ್ರಿಕ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಎ.ರವಿ ತಿಳಿಸಿದರು.
ಅವರು ಪಟ್ಟಣದ ತಾಲ್ಲೂಕು ಆರೋಗ್ಯಧಿಕಾರಿಗಳ ಕಛೇರಿಯ ಆವರಣದಲ್ಲಿ ಏರ್ಪಡಿಸಿದ್ದ ಆಯುಷ್ಮಾನ್ ದಿವಸ್ ಅಂಗವಾಗಿ ಸಾರ್ವಜನಿಕರಿಗೆ ಅರಿವು ಮೂಢಿಸುವ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಈ ಕಾರ್ಯಕ್ರಮಕ್ಕೆ ಬಿಪಿಎಲ್ ಕಾರ್ಡ, ಪಡಿತರ ಕಾರ್ಡು ಹಾಗೂ ಆಧಾರ್ ಕಾರ್ಡನ್ನು ಹೊಂದಿರುವ ಸಾರ್ವಜನಿಕರಿಗೆ ಸರ್ಕಾರ ರಾಷ್ಟ್ರೀಯ ಸ್ವಾಸ್ಥ ಯೋಜನೆಯಲ್ಲಿ ನೊಂದಾಯಿತರಾದವರಿಗೆ ಐದು ಲಕ್ಷ ರೂಪಾಯಿಗಳವರೆಗೆ ಉಚಿತ ಚಿಕ್ಕಿತ್ಸೆ ನೀಡಲಾಗುತ್ತಿದ್ದು 291 ಚಿಕಿತ್ಸೆಗಳನ್ನು ಈ ಯೋಜನೆಯ ವ್ಯಾಪ್ತಿಗೆ ತರಲಾಗಿದ್ದು ಇದಕ್ಕಾಗಿ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಗೆ ರೆಫೆರಲ್ ಪಡೆಯಬೇಕಾಗಿರುತ್ತದೆ.
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯು ಜಾರಿಗೆ ಬಂದು ಮೂರು ವರ್ಷಗಳು ಮುಗಿದಿದ್ದು ತಾಲ್ಲೂಕಿನಲ್ಲಿ ಸಾವಿರಾರು ಜನರುಗಳು ಇದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಆದ್ದರಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆಯುಷ್ಮಾನ್ ವಿಭಾಗಕ್ಕೆ ಭೇಟಿ ನೀಡಿ ಎಬಿ-ಎಆರ್‍ಕೆ ಕಾರ್ಡನ್ನು ಮಾಡಿಸುವ ಮೂಲಕ ಫಲಾನುಭವಿಗಳಾಗಿ ಸರ್ಕಾರದ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಧುಸೂಧನ್, ಪಾರ್ಮಸಿ ಆಧಿಕಾರಿ ಬಿ.ಎಸ್.ಸತೀಶ್ ಬಾಬು, ತಾಲ್ಲೂಕು ಆರೋಗ್ಯ ಮಿತ್ರ, ಅಕ್ಷತಾ ಕ್ಲೈಮ್ ಎಸ್ಸಿಕ್ಯುಟಿವ್ ನವ್ಯಶ್ರೀ, ಆರೋಗ್ಯ ನಿರೀಕ್ಷಕರಾದ ಶೀಳನೆರೆ ಸತೀಶ್, ಧರ್ಮೇಂದ್ರ, ನಾಗೇಂದ್ರ, ಐಸಿಟಿಸಿ ಸತೀಶ್, ಆದಿಲ್, ಆಶಾ ಮೆಂಟರ್ ರೇಖಾ, ಧೀರಜ್, ಗಿರೀಶ್, ಬಿಪಿಎಂ ವಿನಯ್ ಕುಮಾರ್, ರಾಧ, ಅಶ್ವಿನಿ ಸೇರಿದಂತೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.