ಆಯುರ್ವೇದ ಕಾಲೇಜಿನಲ್ಲಿ ಅಂತರಾಷ್ಟ್ರೀಯ ದಾದಿಯರ ದಿನಾಚರಣೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ: ಅಂತರಾಷ್ಟ್ರೀಯ ದಾದಿಯರ ದಿನಾಚರಣೆ ಅಂಗವಾಗಿ  ನಗರದ  ತಾರಾನಾಥ    ಸರ್ಕರಿ  ಆಯುರ್ವೇದ ಆಸ್ಪತ್ರೆಯಲ್ಲಿ ಇಂದು ವಿಶ್ವ ದಾದಿಯರ  ದಿನಾಚರಣೆಯನ್ನು ಆಚರಿಸಲಾಯಿತು.
 ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ರಾಜಶೇಖರ್ ಗಾಣಿಗೇರ್ ಅವರು ಶುಶ್ರೂಷಧಿಕಾರಿಗಳ ಸೇವೆ ಬಹಳ ಉತ್ತಮ ಮತ್ತು ನಿಸ್ವಾರ್ಥ ಸೇವೆ ಎಂದು ಕೊಂಡಾಡಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಸ್ಥಾಯಿ ವೈದ್ಯಾಧಿಕಾರಿ ಡಾ. ರವಿ ಚೌಹಾಣ್,  ಪಂಚಕರ್ಮ ವಿಭಾಗದ ಮುಖ್ಯಸ್ಥ  ಡಾ. ರಾಜೇಶ್ ಸೂಗೂರು, ಶಲ್ಯ ವಿಭಾಗದ ಮುಖ್ಯಸ್ಥ ಶಿವು ಅರಿಕೆರೆ, ವೈದ್ಯಾಧಿಕಾರಿ ತಮೀಂ ಅನ್ಸಾರಿ, ಶುಶ್ರುಷ ಅಧಿಕಾರಿ ಶ್ರುತಿ ಹೊಳಲು, ರಾಧಾ ಜಿ, ಲಿಂಗಮ್ಮ, ರಾಧ ಟಿ. ಗುರುಸ್ವಾಮಿ, ಮಲ್ಲಿಕಾರ್ಜುನ, ಇನ್ನು ಮುಂತಾದವರು ಪಾಲ್ಗೊಂಡಿದ್ದರು ಮೂಗಪ್ಪ ಡಿ.ಯವರು ಕಾರ್ಯಕ್ರಮವನ್ನು ನಿರ್ವಹಿಸಿದರು, ಜಡೇಶ್ ಎಮ್ಮಿಗನೂರು  ವಂದಿಸಿದರು.