ಆಯುರ್ವೇದಿಕ್ ಔಷಧಿಗಳಿಂದ ಹಲವು ಗಂಭೀರ ರೋಗಗಳಿಗೆಪರಿಹಾರ ಕಂಡುಕೊಳ್ಳಲು ಸಾಧ್ಯ:ಪ್ರಗತಿಪರ ರೈತ ಬಾಬುರಾವ ಪಾಟೀಲ

ಬೀದರ, ಜು.21: ಪ್ರತಿ ಸಸ್ಯ ಜೀವರಾಶಿಯಲ್ಲಿ ಒಂದಲ್ಲ ಒಂದು ಔಷಧಿ ಗುಣಗಳು ಹೊಂದಿದ್ದು, ಹಲವು ಗಂಭೀರ ರೋಗಗಳಾದ ಏಡ್ಸ್, ಕ್ಯಾನ್ಸರ್, ಹೃದಯ ಸಂಬಂಧಿತ ರೋಗಗಳ ಪರಿಹಾರಕ್ಕೆ ಅಯುರ್ವೇದಿಕ ಔಷಧಿಗಳಿಂದ ಕಂಡುಕೊಳ್ಳಲು ಸಾಧ್ಯ ಎಂದು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಪ್ರಗತಿಪರ ರೈತ ಬಾಬುರಾವ ಪಾಟೀಲ ಹೇಳಿದರು.
ಅವರು ಬುಧವಾರ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ, ತೋಟಗಾರಿಕೆ ಮಹಾವಿದ್ಯಾಲಯ ಬೀದರ ಹಾಗೂ ಎನ್.ಎಮ್.ಪಿ.ಬಿ.ಪ್ರಾದೇಶಿಕ ಕಮ್ ಫೆಸಿಲಿಟೇಶನ್ ಸೆಂಟರ್ (ದಕ್ಷಿಣ ಪ್ರದೇಶ) ಕೇರಳ ಇವರುಗಳ ಸಹಯೋಗದೊಂದಿಗೆ ಚಿಂಚೋಳಿ ತಾಲೂಕಿನ ಚಿಮ್ಮಯಿದಲಾಯಿ ಗ್ರಾಮದಲ್ಲಿ ತೋಟಗಾರಿಕೆ ಹಾಗೂ ಅರಣ್ಯ ಕೃಷಿ ಅಡಿಯಲ್ಲಿ ವಿವಿಧ ಔಷಧೀಯ ಸಸ್ಯಗಳ ಉತ್ಪಾದನೆ ಸಾಮಥ್ರ್ಯ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಮ್ಮಲ್ಲಿ ಹಲವು ಔಷಧಿ ಬೆಳೆಗಳನ್ನು ಬೆಳೆಯಲು ವಿಫುಲ ಅವಕಾಶಗಳಿರುವುದರಿಂದ ರೈತರು ಔಷಧಿ ಗುಣಗಳು ಹೊಂದಿರುವ ಬೆಳೆಗಳನ್ನು ಬೆಳೆದು ಲಾಭ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.
ಬೀದರ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ.ಪಾಟೀಲ ಅವರು ಮಾತನಾಡಿ, ಬದಲಾಗುತ್ತಿರುವ ಹವಮಾನ ವೈಪರಿತ್ಯ ಮನಗಂಡು ಅದಕ್ಕೆ ಸೂಕ್ತವಾದ ಮತ್ತು ವಾತಾವರಣಕ್ಕೆ ಹೊಂದಿಕೊಳ್ಳುವ ವಿವಿಧ ಔಷಧಿ ಬೆಳೆಗಳನ್ನು ಬೆಳೆಯಲು ಹಾಗೂ ಮಾರುಕಟ್ಟೆಯನ್ನು ಕಂಡುಕೊಳ್ಳಲು ಸಮುದಾಯ ಆಧಾರಿತ ಕೃಷಿ ರೈತರಿಗೆ ಬೆನ್ನೆಲುಬಾಗಿದೆ. ಅಲ್ಲದೇ ರೈತರು ತಮ್ಮ ಆದಾಯವನ್ನು ಹೆಚ್ಚಿಸಲು ಕೃಷಿ, ಅರಣ್ಯ ಹಾಗೂ ತೋಟಗಾರಿಕೆ ಪದ್ಧತಿಗಳಲ್ಲಿ ಔಷಧಿಯ ಬೆಳೆಗಳನ್ನು ಬೆಳೆಯುವುದರಿಂದ ಸುಸ್ಥೀರ ಮತ್ತು ಲಾಭದಾಯ ಕೃಷಿ ಮಾಡಲು ಸಾಧ್ಯವೆಂದು ತಿಳಿಸಿದರು.
ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ.ಮೊಹಮ್ಮದ್ ಫಾರೂಕ್, ಸಹ ಪ್ರಧ್ಯಾಪಕ ಡಾ.ಆನಂದ ಜಿ.ಪಾಟೀಲ, ಬೀದರ ತೋಟಗಾರಿಕೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ವಿ.ಪಿ.ಸಿಂಗ್, ಚಿಂಚೋಳಿ ತೋಟಗಾರಿಕೆ ಇಲಾಖೆಯ ಶಿವಾನಂದ ಉದಗೀರೆ, ಬೀದರ ಉದ್ಯಾನ ಹರ್ಬೋ ಪ್ರೈವೆಟ್ ಲಿಮಿಟೆಡಿನ್ ಆನಂದ ಮಿಶ್ರಾ ಇವರುಗಳು ವಿವಿಧ ವಿಷಯಗಳ ಮೇಲೆ ಸಮಗ್ರವಾದಂತಹ ಮಾಹಿತಿಯನ್ನು ರೈತರಿಗೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಡಾ.ವಿ.ಪಿ.ಸಿಂಗ್, ಮುಖ್ಯ ಸಂಶೋಧಕರು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಹೇಳಿದರು. ಡಾ.ಆನಂದ ಜಿ.ಪಾಟೀಲ ಸಹ ಪ್ರಾಧ್ಯಾಪಕರು ಇವರು ಕಾರ್ಯಕ್ರಮವನ್ನು ನಿರೂಪಿಸಿ ಹಾಗೂ ವಂದಿಸಿದರು.
ಕಾರ್ಯಕ್ರಮದಲ್ಲಿ ಚಿಂಚೋಳಿ ತಾಲೂಕಿನ ಚಿಮ್ಮಯಿದಲಾಯಿ, ಚಂದಾಪೂರ, ಐ.ಪಿ.ಹೋಸುರ, ಪೋಲಕಪಳ್ಳಿ ಹಾಗೂ ಇತರೆ ಗ್ರಾಮಗಳ 50 ಕ್ಕೂ ಅಧಿಕ ಪ್ರಗತಿಪರ ರೈತರುಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈ ತರಬೇತಿಯ ಲಾಭವನ್ನು ಪಡೆದರು.