ಆಯುರ್ಧಾಮದಲ್ಲಿ ಸೋರಿಯಾಸಿಸ್ ತಿಳಿವಳಿಕೆ ಕಾರ್ಯಕ್ರಮ

ಧಾರವಾಡ, ಅ 30- ವಿಶ್ವ ಸೋರಿಯಾಸಿಸ್ ದಿನ ಅಂಗವಾಗಿ ಧಾರವಾಡದ ಆಯುರ್ಧಾಮದಲ್ಲಿ ವೈದ್ಯ ಡಾ ಮಹಾಂತಸ್ವಾಮಿ ಹಿರೇಮಠ ಚರ್ಮ ರೋಗಗಳ ಬಗ್ಗೆ ತಿಳುವಳಿಕೆ ಮೂಡಿಸಿದರು. ಸೋರಿಯಾಸಿಸ ಅಂಟು ರೋಗವಲ್ಲ ಅದರೆ ವಂಶ ಪಾರಂಪರಿಕ ಬರುವ ಸಾಧ್ಯತೆ ಇರುತ್ತದೆ. ಅಲ್ಲದೆ ಕೆಲವು ಆಹಾರಗಳ, ಮೀನು, ಹಾಲು ಸೇರಿಸಿ ಸೇವಿಸುವದರಿಂದ, ಕೆಲವು ಔಷಧ ಸೇವನೆ ವೈಪರೀತ್ಯ ದಿಂದ ಬರುತ್ತದೆ. ಸರಿಯಾದ ಚಿಕಿತ್ಸೆ ತೆಗೆದುಕೊಂಡರೆ ರೋಗ ಸಾಕಷ್ಟು ಹತೋಟಿಯಲ್ಲಿ ಇರುತ್ತದೆ. ಅಲಕ್ಷೀಸಿದರೆ ಕೆಲವರಿಗೆ ಈ ಸೋರಿಯಾಸಿಸ್ ದಿಂದ ಸಂಧಿ ನೋವು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಅಯುರ್ವೇದ ಪಂಚಕರ್ಮಗಳು ,ಶಿರೋಧಾರ , ರಕ್ತಮೋಕ್ಷಣ ದಂತಹ ಚಿಕಿತ್ಸೆಯಿಂದ ಈ ರೋಗಕ್ಕೆ ಉಪಶಮನ ಮಾಡಬಹುದು ಎಂದು ಹೇಳಿ 28 ರೋಗಿಗಳಿಗೆ ಉಚಿತ ತಪಾಸಣೆ ಮಾಡಿ , ಜಿಗಳೇ ಚಿಕಿತ್ಸೆ ಮಾಡಿದರು.