ಆಯುಕ್ತ ಡಾ.ಶಾಲಿನಿ ರಾಜನೀಶ್‌ರಿಂದ ಪರಿಶೀಲನೆ

ದೇವನಹಳ್ಳಿ.ಏ೨೦-ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಡಾ. ಶಾಲಿನಿ ರಜನೀಶ್ ಅವರು ದೊಡ್ಡಬಳ್ಳಾಪುರ ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿ ಹಾಗೂ ಯೋಜನೆಗಳನ್ನು ಪರಿಶೀಲನೆ ನಡೆಸಿದರು.
ಎಸ್.ಎಸ್ ಘಾಟಿ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿದ ಅಮೃತ ಸರೋವರದ ಕೆರೆ ವೀಕ್ಷಿಸಿದರು. ನಂತರ ತೂಬಗೆರೆ ಗ್ರಾಮ ಪಂಚಾಯಿತಿಯಲ್ಲಿ ಕಾವನಹಳ್ಳಿ ವೆನ್ಸಾಯಿ ಪ್ಲೋರಿಟೆಕ್ (ಶ್ರೀಕಾಂತ್ ಫಾರಂ) ಭೇಟಿ ನೀಡಿದರು.
ಪಾಲಿಮನೆಯಲ್ಲಿ ಪುಷ್ಪ ಬೆಳೆಗಳನ್ನು ವೀಕ್ಷಿಸಿದರು.ಎನ್.ಎಸ್.ಆರ್ ಫಾರಂ ಕೃಷ್ಣರಾವ್ ರವರ ಪಾಲಿಮನೆಯಲ್ಲಿ ಬೇಸಾಯ ಬಗ್ಗೆ ರೈತರ ಜೊತೆ ಸಮಾಲೋಚನೆ ನಡೆಸಿದರು.
ದೊಡ್ಡಬಳ್ಳಾಪುರದಲ್ಲಿ ನೇಕಾರರ ಸಂಘದ ನೇಕಾರರ ಚೈತನ್ಯ ಸಂಸ್ಥೆಯಲ್ಲಿ ತಯಾರಿಸಿದ ಸೀರೆಗಳು ವೀಕ್ಷಿಸಿ, ನೇಕಾರ ಸಂಘದ ಅಧ್ಯಕ್ಷರ ಮತ್ತು ಸದಸ್ಯರು ಜೊತೆಗೆ ಸಮಾಲೋಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಎನ್ ಅನುರಾಧ, ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಟಿ.ಕೆ ರಮೇಶ್, ಯೋಜನಾ ನಿರ್ದೇಶಕರಾದ ವಿಠ್ಠಲ ಕಾವಳೆ, ದೊಡ್ಡಬಳ್ಳಾಪುರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.